ಅಡಿಕೆ ಭವಿಷ್ಯ | ಅಡಿಕೆ ಮಾತ್ರ ಅಲ್ಲ-ಮಿಶ್ರ ಬೆಳೆಯ ಕಡೆಗೆ ಆದ್ಯತೆ | ಮೇಘಾಲಯದಲ್ಲಿ ಆರಂಭವಾಗಿದೆ ಸರ್ಕಾರದಿಂದಲೇ ಅಭಿಯಾನ |

March 15, 2022
10:29 AM

ಕೃಷಿಕರ  ಭವಿಷ್ಯದ ದೃಷ್ಟಿಯಿಂದ ಅಡಿಕೆ ಬೆಳೆ ಮಾತ್ರಾ ಅಲ್ಲ, ಅದರ ಜೊತೆಗೆ ಸಮಗ್ರ ಕೃಷಿಯ ಅಗತ್ಯವಿದೆ ಎಂಬುದನ್ನು ಮೇಘಾಲಯ ಸರ್ಕಾರ ರೈತರಿಗೆ ತಿಳಿಸುತ್ತಿದೆ. ಇದಕ್ಕಾಗಿ ಸರ್ಕಾರದ ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಆಫ್ ಹಾರ್ಟಿಕಲ್ಚರ್ (ಎಂಐಡಿಹೆಚ್) ಅಡಿಯಲ್ಲಿ ಸಮಗ್ರ ಕೃಷಿಯ ಕಡೆಗೆ ಆದ್ಯತೆ ನೀಡುವ ಯೋಜನೆಗಳನ್ನು ಹಾಕಿಕೊಂಡಿದೆ. 

Advertisement
Advertisement
Advertisement
Advertisement
Advertisement

ಏಕ ಬೆಳೆ ಯಾವತ್ತೂ ರೈತರ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿಯಾಗಿದೆ. ಇದೀಗ ಮೇಘಾಲಯ ಸರ್ಕಾರವು ಅಡಿಕೆಯನ್ನು ಕೇಂದ್ರೀಕರಿಸಿಕೊಂಡು ಅಡಿಕೆಯ ಭವಿಷ್ಯನ್ನೂ ಗಮನದಲ್ಲಿರಿಸಿಕೊಂಡು ರೈತರನ್ನು ಜಾಗೃತಗೊಳಿಸುತ್ತಿದೆ. ಈಗ ಅಡಿಕೆಗಾಗಿಯೇ ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಆಫ್ ಹಾರ್ಟಿಕಲ್ಚರ್ (ಎಂಐಡಿಹೆಚ್) ಅಡಿಯಲ್ಲಿ ಇನ್ನು ಮುಂದೆ ಅಡಿಕೆಯ ಪರ್ಯಾಯದತ್ತ ಹೆಜ್ಜೆ ಇರಿಸಿದೆ.  ರೈತರಲ್ಲಿ ಸಮಗ್ರ ಕೃಷಿ ಅಥವಾ ಮಿಶ್ರ ಬೆಳೆಯನ್ನು ಉತ್ತೇಜಿಸಲು ಗಮನ ನೀಡಿದೆ. ಇದು ಹೆಚ್ಚಿದ ಕೃಷಿ ಉತ್ಪನ್ನಗಳೊಂದಿಗೆ ಇತರರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಉದ್ಯಮಶೀಲತೆಯ ವಿವಿಧ ಸಾಧ್ಯತೆಗಳನ್ನು ಸೃಷ್ಟಿಸಿ  ಹಳ್ಳಿಗಳನ್ನು ಸ್ವಾವಲಂಬಿಯನ್ನಾಗಿ ಮಾಡುವುದು ಯೋಜನೆಯ ಉದ್ದೇಶ.

Advertisement

ಅಡಿಕೆಯ ಬಗ್ಗೆ ಮಾತನಾಡಿದ ಮೇಘಾಲಯದ ವೆಸ್ಟ್ ಗಾರೋ ಹಿಲ್ಸ್  ಜಿಲ್ಲಾಧಿಕಾರಿ ರಾಮ್ ಸಿಂಗ್, ಅಡಿಕೆ ತೋಟವು ಆರಂಭದಲ್ಲಿ ಉತ್ತಮ ಆದಾಯವನ್ನು ನೀಡಿದರೂ ಸಹ ಸುಸ್ಥಿರವಾಗಿಲ್ಲ ಎಂದು ಹೇಳಿದ್ದಾರೆ. ಅಡಿಕೆ ತೋಟದ ಹೆಚ್ಚಳವು ಅರಣ್ಯ ಪ್ರದೇಶವನ್ನು ಕಡಿಮೆ ಮಾಡುತ್ತದೆ, ಅದರಲ್ಲೂ ವಿಶೇಷವಾಗಿ ನೀರಿನ ಮೂಲಗಳ ಸುತ್ತಮುತ್ತಲಿನ ಪ್ರದೇಶಗಳನ್ನು ಕಡಿಮೆ ಮಾಡುತ್ತದೆ . ಇದರ  ಪರಿಣಾಮವಾಗಿ ನೀರಿನ ಕೊರತೆ ಭವಿಷ್ಯದಲ್ಲಿ ಕಾಡಬಹುದು  ಎಂದು ಅವರು ಹೇಳಿದ್ದಾರೆ. ಹೀಗಾಗಿ ಈ ಬಗ್ಗೆ ಜಾಗೃತಿ ಅಗತ್ಯ ಎಂದು ರೈತರನ್ನು ಎಚ್ಚರಿಸಿದ್ದಾರೆ. ತೋಟಗಾರಿಕೆಯು ಪರಿಸರದ ಸಂರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು  ಸುಸ್ಥಿರತೆಗಾಗಿ ಕೃಷಿ ಮತ್ತು ಪಶುಸಂಗೋಪನೆ ಸೇರಿದಂತೆ ಸಂಬಂಧಿತ ವಲಯಗಳೊಂದಿಗೆ ಸಮಗ್ರ ಕೃಷಿಯ ಅಗತ್ಯವಿದೆ ಎಂದು ಹೇಳಿದ್ದಾರೆ.

Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ರೈತರಿಗೆ ಊರುಗೋಲಾಗಿರುವ ಕೃಷಿ ಪತ್ತಿನ ಸಹಕಾರಿ ಸಂಘ
March 8, 2025
10:35 PM
by: The Rural Mirror ಸುದ್ದಿಜಾಲ
ಎತ್ತಿನಹೊಳೆ ಕಾಮಗಾರಿ | ಅರಣ್ಯ ಭೂಮಿ ಬಳಕೆಗೆ ಅನುಮತಿ ಕೋರಿಕೆ | ಮಾ.18 ರಂದು ದೆಹಲಿಗೆ ಉಪಮುಖ್ಯಮಂತ್ರಿ
March 8, 2025
10:30 PM
by: The Rural Mirror ಸುದ್ದಿಜಾಲ
ಅಂತಾರಾಷ್ಟ್ರೀಯ ಮಹಿಳಾ ದಿನ | ವಿವಾಹಪೂರ್ವ ಆಪ್ತ ಸಮಾಲೋಚನೆ ಸಂವಹನ ಕೇಂದ್ರ ಸ್ಥಾಪನೆ
March 8, 2025
6:52 AM
by: The Rural Mirror ಸುದ್ದಿಜಾಲ
ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಲ್ಲಿ ಡೈಮಂಡ್ ಪೆಸ್ಟ್ ಗೆ ಚಾಲನೆ
March 8, 2025
6:08 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror