ಕೃಷಿಕರ ಭವಿಷ್ಯದ ದೃಷ್ಟಿಯಿಂದ ಅಡಿಕೆ ಬೆಳೆ ಮಾತ್ರಾ ಅಲ್ಲ, ಅದರ ಜೊತೆಗೆ ಸಮಗ್ರ ಕೃಷಿಯ ಅಗತ್ಯವಿದೆ ಎಂಬುದನ್ನು ಮೇಘಾಲಯ ಸರ್ಕಾರ ರೈತರಿಗೆ ತಿಳಿಸುತ್ತಿದೆ. ಇದಕ್ಕಾಗಿ ಸರ್ಕಾರದ ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಆಫ್ ಹಾರ್ಟಿಕಲ್ಚರ್ (ಎಂಐಡಿಹೆಚ್) ಅಡಿಯಲ್ಲಿ ಸಮಗ್ರ ಕೃಷಿಯ ಕಡೆಗೆ ಆದ್ಯತೆ ನೀಡುವ ಯೋಜನೆಗಳನ್ನು ಹಾಕಿಕೊಂಡಿದೆ.
ಏಕ ಬೆಳೆ ಯಾವತ್ತೂ ರೈತರ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿಯಾಗಿದೆ. ಇದೀಗ ಮೇಘಾಲಯ ಸರ್ಕಾರವು ಅಡಿಕೆಯನ್ನು ಕೇಂದ್ರೀಕರಿಸಿಕೊಂಡು ಅಡಿಕೆಯ ಭವಿಷ್ಯನ್ನೂ ಗಮನದಲ್ಲಿರಿಸಿಕೊಂಡು ರೈತರನ್ನು ಜಾಗೃತಗೊಳಿಸುತ್ತಿದೆ. ಈಗ ಅಡಿಕೆಗಾಗಿಯೇ ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಆಫ್ ಹಾರ್ಟಿಕಲ್ಚರ್ (ಎಂಐಡಿಹೆಚ್) ಅಡಿಯಲ್ಲಿ ಇನ್ನು ಮುಂದೆ ಅಡಿಕೆಯ ಪರ್ಯಾಯದತ್ತ ಹೆಜ್ಜೆ ಇರಿಸಿದೆ. ರೈತರಲ್ಲಿ ಸಮಗ್ರ ಕೃಷಿ ಅಥವಾ ಮಿಶ್ರ ಬೆಳೆಯನ್ನು ಉತ್ತೇಜಿಸಲು ಗಮನ ನೀಡಿದೆ. ಇದು ಹೆಚ್ಚಿದ ಕೃಷಿ ಉತ್ಪನ್ನಗಳೊಂದಿಗೆ ಇತರರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಉದ್ಯಮಶೀಲತೆಯ ವಿವಿಧ ಸಾಧ್ಯತೆಗಳನ್ನು ಸೃಷ್ಟಿಸಿ ಹಳ್ಳಿಗಳನ್ನು ಸ್ವಾವಲಂಬಿಯನ್ನಾಗಿ ಮಾಡುವುದು ಯೋಜನೆಯ ಉದ್ದೇಶ.
ಅಡಿಕೆಯ ಬಗ್ಗೆ ಮಾತನಾಡಿದ ಮೇಘಾಲಯದ ವೆಸ್ಟ್ ಗಾರೋ ಹಿಲ್ಸ್ ಜಿಲ್ಲಾಧಿಕಾರಿ ರಾಮ್ ಸಿಂಗ್, ಅಡಿಕೆ ತೋಟವು ಆರಂಭದಲ್ಲಿ ಉತ್ತಮ ಆದಾಯವನ್ನು ನೀಡಿದರೂ ಸಹ ಸುಸ್ಥಿರವಾಗಿಲ್ಲ ಎಂದು ಹೇಳಿದ್ದಾರೆ. ಅಡಿಕೆ ತೋಟದ ಹೆಚ್ಚಳವು ಅರಣ್ಯ ಪ್ರದೇಶವನ್ನು ಕಡಿಮೆ ಮಾಡುತ್ತದೆ, ಅದರಲ್ಲೂ ವಿಶೇಷವಾಗಿ ನೀರಿನ ಮೂಲಗಳ ಸುತ್ತಮುತ್ತಲಿನ ಪ್ರದೇಶಗಳನ್ನು ಕಡಿಮೆ ಮಾಡುತ್ತದೆ . ಇದರ ಪರಿಣಾಮವಾಗಿ ನೀರಿನ ಕೊರತೆ ಭವಿಷ್ಯದಲ್ಲಿ ಕಾಡಬಹುದು ಎಂದು ಅವರು ಹೇಳಿದ್ದಾರೆ. ಹೀಗಾಗಿ ಈ ಬಗ್ಗೆ ಜಾಗೃತಿ ಅಗತ್ಯ ಎಂದು ರೈತರನ್ನು ಎಚ್ಚರಿಸಿದ್ದಾರೆ. ತೋಟಗಾರಿಕೆಯು ಪರಿಸರದ ಸಂರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಸುಸ್ಥಿರತೆಗಾಗಿ ಕೃಷಿ ಮತ್ತು ಪಶುಸಂಗೋಪನೆ ಸೇರಿದಂತೆ ಸಂಬಂಧಿತ ವಲಯಗಳೊಂದಿಗೆ ಸಮಗ್ರ ಕೃಷಿಯ ಅಗತ್ಯವಿದೆ ಎಂದು ಹೇಳಿದ್ದಾರೆ.
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್ 2025…
ಬೆಂಗಳೂರಿನ ಯಲಹಂಕ ತಾಲ್ಲೂಕಿನ ಒಟ್ಟು 5678 ಎಕರೆ ಗುಂಟೆ ಪ್ರದೇಶವನ್ನು ಪರಿಸರ ಸಂರಕ್ಷಣೆ…
ಬೆಳೆಗಾರರಿಗೆ ತರಬೇತಿ ನೀಡಲು ತರಬೇತಿ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಕರ್ನಾಟಕ ಕೊಳಚೆ…
ಅಡಿಕೆಯ ಮೇಲೆ ಯಾವುದೇ ಋಣಾತ್ಮಕ ನಿರ್ಧಾರ ತೆಗೆದುಕೊಳ್ಳುವ ಮೊದಲು ಯೋಚಿಸಬೇಕಾದ ಹಲವು ಅಂಶಗಳು…