ಕೊಡಿಪ್ಪಾಡಿ ಗ್ರಾಮದಲ್ಲಿ ಅಡಿಕೆಗೆ ಎಲೆ ಚುಕ್ಕಿ ರೋಗ | ಗ್ರಾಮದಲ್ಲಿ‌ಪಸರಿಸಿದ ಎಲೆಚುಕ್ಕಿ ರೋಗ | ಪರಿಹಾರಕ್ಕೆ ಒತ್ತಾಯಿಸಿ ಶಾಸಕರಿಗೆ‌ ಮನವಿ | ಅಧಿವೇಶನದಲ್ಲಿ ಪ್ರಸ್ತಾಪಿಸುವೆ – ಶಾಸಕ ಅಶೋಕ್ ರೈ

July 14, 2024
3:19 PM
ಅಡಿಕೆ ತೋಟಗಳಿಗೆ ಎಲೆ ಚುಕ್ಕಿ ರೋಗ ಬಾಧಿಸಿದ್ದು ಸಾವಿರಾರು ಅಡಿಕೆ ಮರಗಳು ನಾಶವಾಗಿದೆ . ಇದರಿಂದ ಕೃಷಿಕರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಸರಕಾರದಿಂದ ಸೂಕ್ತ ಔಷಧಿ ಮತ್ತು ಪರಿಹಾರಕ್ಕೆ ಒತ್ತಾಯಿಸಿ ಬನ್ನೂರು ರೈತರ ಸೇವಾ ಸಹಕಾರಿ‌ ಸಂಘದ‌ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ನೇತೃತ್ವದಲ್ಲಿ‌ ಪುತ್ತೂರು ಶಾಸಕರ ಮೂಲಕ ಸರಕಾರಕ್ಕೆ‌ಮನವಿ ಸಲ್ಲಿಸಲಾಯಿತು.

ಕೊಡಿಪ್ಪಾಡಿ ಗ್ರಾಮದ ಬಹುತೇಕ ಅಡಿಕೆ ತೋಟಗಳಿಗೆ ಎಲೆ ಚುಕ್ಕಿ ರೋಗ ಬಾಧಿಸಿದ್ದು ಸಾವಿರಾರು ಅಡಿಕೆ ಮರಗಳು ನಾಶವಾಗಿದೆ ಇದರಿಂದ ಕೃಷಿಕರಿಗೆ ತೀವ್ರ ಸಂಕಷ್ಟ ಎದುರಾಗಿದ್ದು ಸರಕಾರದಿಂದ ಸೂಕ್ತ ಔಷಧಿ ಮತ್ತು ಪರಿಹಾರಕ್ಕೆ ಆಗ್ರಹಿಸಿ ಕೊಡಿಪ್ಪಾಡಿ ಅಡಿಕೆ ಕೃಷಿಕರ ನಿಯೋಗ ಬನ್ನೂರು ರೈತರ ಸೇವಾ ಸಹಕಾರಿ‌ ಸಂಘದ‌ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ನೇತೃತ್ವದಲ್ಲಿ‌ಶಾಸಕರ ಮೂಲಕ ಸರಕಾರಕ್ಕೆ‌ಮನವಿ ಸಲ್ಲಿಸಿದರು.

Advertisement

ನಾವು ಅಡಿಕೆ ಕೃಷಿಕರಾಗಿದ್ದು, ಅಡಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದು , ಬೇರೆ ಯಾವುದೇ ಆದಾಯದ ಮೂಲಗಳಿರುವುದಿಲ್ಲ. ನಾವು ಹೊಂದಿದ ಜಾಗದಲ್ಲಿ ಅಡಿಕೆ ಕೃಷಿ ಮಾಡಿದ್ದು. ಈ ಸಾಲಿನಲ್ಲಿ ಕುಡಿಪ್ಪಾಡಿ ಗ್ರಾಮದ ಭಾಗಶ: ಅಡಿಕೆ ತೋಟಗಳಿಗೆ ಎಲೆಚುಕ್ಕಿ ರೋಗ ಬಂದಿದ್ದು, ಸಣ್ಣ ಅಡಿಕೆ ಉದುರಿ ಹೋಗಿದೆ. ಸದರಿ ರೋಗವನ್ನು ತಡೆಗಟ್ಟಲು ಬೇರೆ ಬೇರೆ ಕಂಪೆನಿಯವರು ತಿಳಿಸಿದ ಮೇರೆಗೆ 3-4 20 ರೋಗದ ಬಾಧೆ ಕಡಿಮೆ ಆಗಿರುವುದಿಲ್ಲ. ಔಷದಿ ಸಿಂಪರಣೆ ಮಾಡಿದರೂ ನಮ್ಮ ತೋಟಕ್ಕೆ ಕೃಷಿಕ ಪಂಜಿಗುಡ್ಡೆ ಈಶ್ವರ ಭಟ್ ಅವರ ಮನವಿಯ ಮೇರೆಗೆ ಇಂದೋರ್ ಶ್ರೀ ಸಿದ್ದಿ ಅಗ್ರಿ ಕಂಪೆನಿ ಪೈ. ಅ. ಕಾರ್ಯಪಾಲಕ ನಿರ್ದೆಶಕರಾದ ಪೆರ್ವೋಡಿ ನಾರಾಯಣ ಭಟ್ ಅವರು ಬಂದು ಪರಿಶೀಲಿಸಿ ಅದು ಎಲೆ ಚುಕ್ಕಿ ರೋಗ ಎಂದು ದೃಢೀಕರಿಸಿದ್ದಾರೆ ಈ ರೀತಿಯಿಂದ ನಮಗೆ ತುಂಬಾ ಆರ್ಥಿಕ ನಷ್ಟವಾಗಿದೆ. ಆದುದರಿಂದ ಎಲೆ ಚುಕ್ಕಿ ರೋಗವನ್ನು ತಡೆಗಟ್ಟಲು ಔಷಧಿಯನ್ನು ಸಿಂಪಡಿಸಲು ಸರಕಾರದಿಂದ ಸಹಾಯಧನವನ್ನು ಒದಗಿಸುವ‌ ಮೂಲಕ ನಮ್ಮ ಅಡಿಕೆ ತೋಟವನ್ನು ಎಲೆ ಚಿಕ್ಕಿ ರೋಗದಿಂದ ರಕ್ಷಣೆ ನೀಡುವಂತೆ ಮನವಿಯಲ್ಲಿ ತಿಳಿಸಿದ್ದಾರೆ.

ಅಧಿವೇಶನದಲ್ಲಿ ಪ್ರಸ್ತಾಪಿಸುವೆ: ಮನವಿ ಸ್ವೀಕರಿಸಿದ ಶಾಸಕ ಅಶೋಕ್‌ ಕುಮಾರ್‌ ರೈ ಅವರು, ಅಡಿಕೆ ಎಲೆ ಚುಕ್ಕಿ ರೋಗ ದ‌ಕ ಜಿಲ್ಲೆಯಲ್ಲಿ‌ವ್ಯಾಪಕವಾಗಿ ಹರಡುತ್ತಿದೆ. ಕಳೆದ ಕೆಲವು ತಿಂಗಳಿಂದ ಸುಳ್ಯ‌ ಭಾಗದಲ್ಲಿ ಕಾಣಿಸಿಕೊಂಡಿದ್ದ ಈ ರೋಗ ಇದೀಗ ಪುತ್ತೂರು ತಾಲೂಕಿನ ಕೆಲವು ಗ್ರಾಮಗಳಲ್ಲಿ ಕಾಣಿಸಿಕೊಂಡಿದ್ದು ಕೃಷಿಕರು‌ ಕಂಗಾಲಾಗಿದ್ದಾರೆ. ಇದಕ್ಕೆ ಸೂಕ್ತ ಔಷಧಿಯನ್ನು ಪತ್ತೆ ಮಾಡಬೇಕಿದೆ.‌ ನಷ್ಟಕ್ಕೊಳಗಾದ ಕೃಷಿಕರಿಗೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಈ ವಿಚಾರವನ್ನು ವಿಧಾನಸಭಾ ಅಧಿವೇಶನದಲ್ಲಿ‌ ಸರಕಾರದ‌ ಗಮನ ಸೆಳೆಯುವುದಾಗಿ ಶಾಸಕ ಅಶೋಕ್ ರೈ ನಿಯೋಗಕ್ಕೆ ಭರವಸೆ ನೀಡಿದರು.

The Arecanut plantations have been significantly impacted by leaf spot disease, resulting in the destruction of thousands of Arecanut trees. As a result, farmers are experiencing severe hardship. Puttur has appealed to the government through MLAs, requesting appropriate medication and relief measures to address this issue.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಯುದ್ಧ ಆದರೆ ಕೃಷಿ ಉತ್ಪನ್ನಗಳ ಧಾರಣೆ ಏನಾಗಬಹುದು?
May 6, 2025
7:44 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಪ್ರೀತಿಯ ಹಂಬಲ ಇರುವ, ವಯಸ್ಸಾದ, ಅನುಭವ ಹೊಂದಿದ ವ್ಯಕ್ತಿಗಳನ್ನು ಗೌರವಿಸುವ 5 ರಾಶಿಯ ಹುಡುಗಿಯರು |
May 6, 2025
7:18 AM
by: ದ ರೂರಲ್ ಮಿರರ್.ಕಾಂ
ಮಂಗಳೂರು | ರಾಷ್ಟ್ರೀಯ ಚೆಸ್ ಪಂದ್ಯಾಟ ಇಂದು ಸಮಾರೋಪ
May 6, 2025
7:02 AM
by: The Rural Mirror ಸುದ್ದಿಜಾಲ
ಸಹಜ ಸಾವನ್ನಪ್ಪುವ ಕಾಡುಪ್ರಾಣಿಗಳನ್ನು ಸುಡುವಂತಿಲ್ಲ | ಪ್ರಕೃತಿ ಚಕ್ರ ಕಾಪಾಡಲು ಸಹಕಾರಿ | ರಾಜ್ಯ ಸರ್ಕಾರದಿಂದ ಸುತ್ತೋಲೆ
May 5, 2025
10:56 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group