ಅಪಾರ ಪ್ರಮಾಣದಲ್ಲಿ ಅಡಿಕೆ ಬೆಳೆ ವಿಸ್ತರಣೆ | ಅಡಿಕೆಗೆ ಬಹಳ ದಿನ ಭವಿಷ್ಯ ಇಲ್ಲ, ಪ್ರೋತ್ಸಾಹ ಕೊಡಬಾರದು | ಸದನದಲ್ಲಿ ಅರಗ ಜ್ಞಾನೇಂದ್ರ ಹೇಳಿಕೆ|

December 28, 2022
11:32 PM

ಅಡಿಕೆ ಬೆಳೆಯುವ ಅಪಾರ ಪ್ರಮಾಣದಲ್ಲಿ ವಿಸ್ತರಣೆಯಾಗುತ್ತಿರುವುದು  ಭವಿಷ್ಯದಲ್ಲಿ ಮಾರಕವಾಗಲಿದೆ.ಅಡಿಕೆ ಹೆಚ್ಚು ಬೆಳೆಯುವುದರಲ್ಲಿ ಅರ್ಥವಿಲ್ಲ. ಭವಿಷ್ಯಕ್ಕೆ ಈ ವಿಸ್ತರಣೆ ಮಾರಕವಾಗಲಿದ್ದು, ಹೀಗಾದರೆ ಅಡಿಕೆ ಭವಿಷ್ಯ ಬಹಳ ದಿನ ಇಲ್ಲ, ಪ್ರೋತ್ಸಾಹ ಕೊಡಬಾರದು ಎಂದು ಗೃಹಸಚಿವ, ಅಡಿಕೆ ಟಾಸ್ಕ್‌ಫೋರ್ಸ್‌ ಸಮಿತಿ ಅಧ್ಯಕ್ಷ ಅರಗ ಜ್ಞಾನೇಂದ್ರ ಹೇಳಿದರು.

Advertisement

ವಿಧಾನ ಸಭೆಯಲ್ಲಿ  ರೈತರು, ಅತಿವೃಷ್ಠಿ ಹಾಗೂ ಅನಾವೃಷ್ಟಿ ಕಾರಣದಿಂದಾಗಿ, ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ, ನಡೆದ ಚರ್ಚೆಯ ಮಧ್ಯದಲ್ಲಿ, ಭಾಗವಹಿಸಿ ಮಾತನಾಡಿದ ಸಚಿವರು ಅನಿರ್ಬಂಧಿತವಾಗಿ ಅಡಿಕೆ ಬೆಳೆಯುವ ಪ್ರದೇಶ ವಿಸ್ತಾರವಾಗುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ಸಾಂಪ್ರದಾಯಿಕವಾಗಿ ಅಡಿಕೆ ಕೃಷಿ ಮಾಡುತ್ತಿರುವ ರೈತರು ಸಂಕಷ್ಟದ ದಿನಗಳನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಅಡಿಕೆ ಬೆಳೆಯದ ಕಡೆಗೂ ಅಡಿಕೆ ವಿಸ್ತಾರವಾಗುತ್ತಿದೆ, ಆಂಧ್ರಪ್ರದೇಶದಲ್ಲಿ 2 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ, ವರ್ಷದಲ್ಲಿ ಹಲವು ನರ್ಸರಿಗಳಲ್ಲಿ ಒಂದು ಕೋಟಿಗೂ ಅಧಿಕ ಅಡಿಕೆ ಗಿಡ ಮಾರಾಟವಾಗುತ್ತಿದೆ. ಈ ರೀತಿ ಹೋದರೆ ಮುಂದಿನ 5-10 ವರ್ಷದಲ್ಲಿ ಅಡಿಕೆ ಬೆಳೆ ಮಾರಕವಾಗುವುದು ನಿಶ್ಚಿತ. ಆಹಾರ ಬೆಳೆಗೆ ಸಾಲ ತಂದು ಅಡಿಕೆ ಬೆಳೆಯುವಂತಾಗಿದೆ, ಹೀಗಾಗಿ ಪ್ರೋತ್ಸಾಹ ಕೊಡುವುದು ಅನಗತ್ಯ ಎಂದು ಅರಗ ಜ್ಞಾನೇಂದ್ರ ಹೇಳಿದರು. ಈಗಾಗಲೇ ಕೇಂದ್ರ ಸರ್ಕಾರ ಡ್ರಿಪ್‌ಗೆ ನೀಡುವ ಸಹಾಯವನ್ನು ತೆಗೆದುಹಾಕಿದೆ.

ಸಾವಿರಾರು ಕೋಟಿ ರೂಪಾಯಿಗಳನ್ನು, ವಿದೇಶದಿಂದ ಹಾಗೂ ವಿಶ್ವ ಬ್ಯಾಂಕ್ ಗಳಿಂದ ಸಾಲ ಪಡೆದು, ಜಲಾಶಯಗಳನ್ನು ಕಟ್ಟಿ, ಷರತ್ತುಗಳನ್ನು ಉಲ್ಲಂಘಿಸಿ, ಆಹಾರ ಬೆಳೆಗಳ ಬದಲು ಅಡಿಕೆ ತೋಟಗಳು ಬರುತ್ತಿವೆ, ಇದರಿಂದ ಮುಂದಿನ ದಿನಗಳಲ್ಲಿ, ಸಾಂಪ್ರದಾಯಿಕವಾಗಿ ಅಡಿಕೆ ಬೆಳೆದು, ಬದುಕನ್ನು ಕಟ್ಟಿಕೊಂಡಿರುವ, ಮಲೆನಾಡು ಹಾಗೂ ಕರಾವಳಿ ಪ್ರದೇಶದ ರೈತರು, ಸಂಕಷ್ಟಕ್ಕೆ ತುತ್ತಾಗುವ ಭಯ ಆವರಿಸಿದೆ,  ಎಂದು ಹೇಳಿದರು. ಇದು ಅನಾರೋಗ್ಯಕರ ಬೆಳವಣಿಗೆ ಇಂತಹ ಬೆಳವಣಿಗೆಗೆ  ಪ್ರೋತ್ಸಾಹ ನೀಡಬಾರದು ಹಾಗೂ ಕಡಿವಾಣ ಹಾಕಬೇಕಿದೆ ಎಂದರು. ಮಲೆನಾಡಿನಲ್ಲಿ5-10 ಎಕ್ರೆಯಲ್ಲಿ ಬಹುಪಾಲು ಮಂದಿ ಅಡಿಕೆ ಬೆಳೆ ಮಾಡಿದರೆ, ಈಗ ಮಲೆನಾಡು ಹೊರತುಪಡಿಸಿ ಇತರ ಕಡೆಗಳಲ್ಲಿ 100-200 ಎಕ್ರೆಯಲ್ಲಿ ಅಡಿಕೆ ಬೆಳೆಯುವುದು ಕಾಣುತ್ತೇವೆ. ಹೀಗಾಗಿ ಅಡಿಕೆ ಬೆಳೆ ವಿಸ್ತರಣೆಗೆ ನಿರ್ಬಂದ ಹಾಕುವುದು  ಅಗತ್ಯ , ಸಿಕ್ಕಾಪಟ್ಟೆ ವಿಸ್ತರಣೆ ಅಪಾಯ ಎಂದು ಅಭಿಪ್ರಾಯಪಟ್ಟರು.

Advertisement

ಇದೇ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮಲೆನಾಡು, ಕರಾವಳಿಯಲ್ಲಿ 5-10 ಎಕ್ರೆ ಅಡಿಕೆ ತೋಟದ ಇದ್ದರೆ ದೊಡ್ಡ ರೈತರು, ಈಗ 100-200 ಎಕ್ರೆಯಲ್ಲಿ ಒಬ್ಬೊಬ್ಬ ಕೃಷಿಕ ಅಡಿಕೆ ಬೆಳೆದರೆ ಸಂಕಷ್ಟ ಖಚಿತ. ರೈತರು ಒಂದೇ ಬೆಳೆ ಬೆಳೆದರೆ ಅಸಮತೋಲನ ಸತ್ಯವಾಗಿದೆ.  ಅಡಿಕೆ ಆರೋಗ್ಯಕ್ಕೆ ಹಾನಿ ಇಲ್ಲ‌ ಆದರೆ ಅನಗತ್ಯ ವಿಸ್ತರಣೆಯಾದರೆ ಅಪಾಯ ಖಚಿತ ಎಂದರು.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ವೈಜ್ಞಾನಿಕ ಶಿಫಾರಸ್ಸಿನಂತೆ ರಸಗೊಬ್ಬರದ ಬಳಕೆ ಸೂಕ್ತ – ರೈತರಿಗೆ ಸಲಹೆ
August 11, 2025
8:43 AM
by: The Rural Mirror ಸುದ್ದಿಜಾಲ
ರಾಜ್ಯದ ಹಲವೆಡೆ ಮುಂದಿನ 7 ದಿನಗಳ ಕಾಲ ವ್ಯಾಪಕ ಮಳೆ | ಬೆಂಗಳೂರಿಗೆ ಎಲ್ಲೋ ಅಲರ್ಟ್
August 11, 2025
7:27 AM
by: ದ ರೂರಲ್ ಮಿರರ್.ಕಾಂ
ಬದುಕು ಪುರಾಣ | ಜ್ಞಾನದ ಪ್ರತಿನಿಧಿ ಗಂಗಾಪುತ್ರ
August 10, 2025
7:00 AM
by: ನಾ.ಕಾರಂತ ಪೆರಾಜೆ
ಬೆಳೆ ಹಾನಿ ಕುರಿತು ಸಮಗ್ರವಾಗಿ ಸಮೀಕ್ಷೆಗೆ ಸೂಚನೆ
August 9, 2025
7:48 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group