MIRROR FOCUS

ಅಡಿಕೆ ಬೆಳೆಗೆ ಉತ್ತಮ ಧಾರಣೆಯ ಸಂತಸದಲ್ಲಿ ಚಾಮರಾಜನಗರ ರೈತರು | ಚಾಲಿ ಅಡಿಕೆ ಧಾರಣೆ ಏರಿಕೆಯ ನಿರೀಕ್ಷೆಯಲ್ಲಿ ಮಲೆನಾಡು ಭಾಗದ ಬೆಳೆಗಾರರು | ಧಾರಣೆ ಏರಿಕೆಯ ಬಗ್ಗೆ ತಜ್ಞರ ಅಭಿಪ್ರಾಯ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಮಲೆನಾಡು, ಕರಾವಳಿ ಭಾಗದಲ್ಲಿ ಮಾತ್ರವೇ ಇದ್ದ ಅಡಿಕೆ ಬೆಳೆ ಈಗ ವಿಸ್ತರಣೆಯಾಗಿದೆ. ಮಲೆನಾಡಿನಲ್ಲಿ ಈ ಬಾರಿ ಹವಾಮಾನದ ಕಾರಣದಿಂದ  ಅಡಿಕೆ ಬೆಳೆ ಕುಸಿತವಾಗಿತ್ತು. ಚಾಲಿ ಅಡಿಕೆ ಧಾರಣೆಯೂ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಇದೀಗ ಏರಿಕೆ ಕಾಣುತ್ತಿದೆ. ಈ ನಡುವೆ ಚಾಮರಾಜ ನಗರದಲ್ಲಿ ಅಡಿಕೆ ಬೆಳೆಗೆ ಉತ್ತಮ ಧಾರಣೆ ಲಭಿಸಿದ ಸಂತಸದಲ್ಲಿ ಬೆಳೆಗಾರರು ಇದ್ದಾರೆ.…..ಮುಂದೆ ಓದಿ….

Advertisement
Advertisement

ಕೃಷಿ ಸಂಬಂಧಿತ ಸುದ್ದಿಗಳಿಗಾಗಿ “ದ ರೂರಲ್‌ ಮಿರರ್.ಕಾಂ” ವ್ಯಾಟ್ಸಪ್‌ ಚಾನೆಲ್‌ ಫಾಲೋ ಮಾಡಿ | ಫಾಲೋ ಮಾಡಲು ಇಲ್ಲಿ ಕ್ಲಿಕ್‌ ಮಾಡಿರಿ…

ರಾಜ್ಯದಲ್ಲಿ ಈ ಬಾರಿ ಅಡಿಕೆ ಬೆಳೆಗೆ ಉತ್ತಮ ಧಾರಣೆ  ಲಭಿಸುವ ನಿರೀಕ್ಷೆ ಇದೆ. ಬೆಳೆ ಕಡಿಮೆ ಇದೆ. ಆದರೆ ಚಾಲಿ ಅಡಿಕೆ ಹೊರತುಪಡಿಸಿ ಕೆಂಪಡಿಕೆ ಉತ್ತಮ ಫಸಲು ಕಂಡಿದೆ. ಇದರ ಜೊತೆಗೆ ಉತ್ತಮ ಧಾರಣೆಯೂ ಲಭಿಸಿದೆ ಎಂದು  ಚಾಮರಾಜನಗರ ಜಿಲ್ಲೆಯ ಬೂದಿತಿಟ್ಟು ಗ್ರಾಮದ ರೈತ ಕೃಪಾನಿಧಿ ಸಂತಸ ವ್ಯಕ್ತಪಡಿಸುತ್ತಾರೆ. ಐದು ಎಕರೆ ಜಮೀನಿನಲ್ಲಿ 2500 ಅಡಿಕೆ ಸಸಿಗಳನ್ನ ಅವರು ಬೆಳೆಸಿದ್ದು, ವರ್ಷಕ್ಕೆ 10 ರಿಂದ 12 ಲಕ್ಷ ರೂಪಾಯಿವರೆಗೂ ಆದಾಯ ಪಡೆಯುತ್ತೇನೆ ಎನ್ನುತ್ತಾರೆ.  ಏಳು ಎಕರೆ ಜಮೀನಿನಲ್ಲಿ ಅಡಿಕೆ ಬೆಳೆದಿದ್ದು, ಪ್ರತಿ ಎಕರೆಗೆ ಪ್ರತಿ ವರ್ಷ ಮೂರರಿಂದ ನಾಲ್ಕು ಲಕ್ಷ ರೂಪಾಯಿಗಳ ಲಾಭ ಪಡೆಯುತ್ತಿದ್ದೇವೆ ಎಂದು  ರೈತ ಮದಲಿಂಗ ಅವರು ಹೇಳುತ್ತಾರೆ.

ಕೃಷಿ ಸಂಬಂಧಿತ ಸುದ್ದಿಗಳಿಗಾಗಿ “ದ ರೂರಲ್‌ ಮಿರರ್.ಕಾಂ” ವ್ಯಾಟ್ಸಪ್‌ ಚಾನೆಲ್‌ ಫಾಲೋ ಮಾಡಿ | ಫಾಲೋ ಮಾಡಲು ಇಲ್ಲಿ ಕ್ಲಿಕ್‌ ಮಾಡಿರಿ…

ಇದು ಚಾಮರಾಜನಗರ ಜಿಲ್ಲೆಯ ಅಡಿಕೆ ಬೆಳೆಗಾರರ ಕತೆಯಾದರೆ, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಕಳೆದ ವರ್ಷದ ಹವಾಮಾನ ವೈಪರೀತ್ಯದ ಕಾರಣದಿಂದ ಇಳುವರಿಯಲ್ಲಿ ಕೊರತೆ ಕಂಡಿದೆ. ಹೀಗಾಗಿ ಉತ್ತಮ ಧಾರಣೆಯ ನಿರೀಕ್ಷೆ ಇದೆ. ಚಾಲಿ ಅಡಿಕೆಯಲ್ಲಿ ಶೇ.50 ರಷ್ಟು ಕುಸಿತವಾಗಬಹುದು ಎಂದು ಅಂದಾಜಿಸಲಾಗಿದೆ. ಆದರೆ ಮುಂದಿನ ವರ್ಷ ಉತ್ತಮ ಇಳುವರಿಯ ನಿರೀಕ್ಷೆ ಇದೆ. ಸದ್ಯ ಅಡಿಕೆ ಕೊರತೆ ಹಿನ್ನೆಲೆಯಲ್ಲಿ ಚಾಲಿ ಅಡಿಕೆ ಧಾರಣೆಯ ಏರಿಕೆ ನೀರೀಕ್ಷೆ ಇದೆ.

Advertisement

ಕೃಷಿ ಸಂಬಂಧಿತ ಸುದ್ದಿಗಳಿಗಾಗಿ “ದ ರೂರಲ್‌ ಮಿರರ್.ಕಾಂ” ವ್ಯಾಟ್ಸಪ್‌ ಚಾನೆಲ್‌ ಫಾಲೋ ಮಾಡಿ | ಫಾಲೋ ಮಾಡಲು ಇಲ್ಲಿ ಕ್ಲಿಕ್‌ ಮಾಡಿರಿ…

ಡಾ.ವಿಘ್ನೇಶ್ವರ ಭಟ್‌ ವರ್ಮುಡಿ

ಅಡಿಕೆ ಮಾರುಕಟ್ಟೆ ತಜ್ಞ ಡಾ.ವಿಘ್ನೇಶ್ವರ ಭಟ್‌ ವರ್ಮುಡಿ ಅವರ ಪ್ರಕಾರ, ಅಡಿಕೆ ಧಾರಣೆ ಏರಿಕೆಯಾಗಲು ಹಲವು ಕಾರಣಗಳನ್ನು ನೀಡಿದ್ದಾರೆ. ಈಗಾಗಲೇ ಮ್ಯಾನ್ಮಾರ್‌  ಮತ್ತು ಬಾಂಗ್ಲಾ ಗಡಿ ಬಂದ್ ಮತ್ತು ತೀವ್ರ ನಿಗಾದಿಂದಾಗಿ ಕಳ್ಳದಾರಿಯ ಮೂಲಕ ಅಡಿಕೆ ಆಮದು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಿಲ್ಲುವ ಸಾಧ್ಯತೆ ಇದೆ. ಇದೇ ರೀತಿಯ ಬಂದ್ ಕೊರೊನಾ ಸಂದರ್ಭದಲ್ಲಿ ಆದಾಗ ಆಮದು ನಿಂತು ಹೋಗಿ ಆಂತರಿಕವಾಗಿ ಧಾರಣೆ ಏರಿಕೆ ಕಂಡು ಬಂದಿತ್ತು. ಇದೇ ಸ್ಥಿತಿ ಯುದ್ಧ ಮತ್ತು ಗಡಿ ಬಂದ್ ಆದಾಗ ಈ ಮೊದಲು ಆಗಿತ್ತು. ಗಡಿ ಬಂದಿನಿಂದಾಗಿ ಕಳಪೆ ಗುಣಮಟ್ಟದ ಅಡಿಕೆ ಆಮದಿಗೆ ಕಡಿವಾಣ ಬಿದ್ದು ಪಟೋರಾ ಉಳ್ಳಿ ಕರಿಗೋಟ್ ಮತ್ತು ಉತ್ತಮ ದರ್ಜೆಯ ಅಡಿಕೆಗೆ ಆಂತರಿಕವಾಗಿ ಬೇಡಿಕೆ ಹೆಚ್ಚಾಗಬಹುದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೃಷಿ ಸಂಬಂಧಿತ ಸುದ್ದಿಗಳಿಗಾಗಿ “ದ ರೂರಲ್‌ ಮಿರರ್.ಕಾಂ” ವ್ಯಾಟ್ಸಪ್‌ ಚಾನೆಲ್‌ ಫಾಲೋ ಮಾಡಿ | ಫಾಲೋ ಮಾಡಲು ಇಲ್ಲಿ ಕ್ಲಿಕ್‌ ಮಾಡಿರಿ…

ಇದಲ್ಲದೆ, ಯುದ್ಧದ ಕಾರ್ಮೋಡ ಕವಿಯುತ್ತಿರುವ ಕಾರಣ ಅಡಿಕೆಗೆ ಹಣಕಾಸಿನ ಲಭ್ಯತೆ ಆಧಾರದಲ್ಲಿ ಬೇಡಿಕೆ ಹೆಚ್ಚಾಗಿ ಧಾರಣೆ ಏರಿಕೆಗೆ ಅವಕಾಶ ಆಗಬಹುದು. ಅಡಿಕೆಯನ್ನು ಒಂದು ಚಟವಾಗಿ ಬಳಸುತ್ತಿರುವ ಕಾರಣ ಯುದ್ಧದ ಕಾರ್ಮೋಡ ಮತ್ತು ಬೀತಿಯಿಂದ ಬರುವಂತಹ ಒತ್ತಡದಿಂದಾಗಿ ಈ ಚಟ ಹೆಚ್ಚಾಗಿ ಅಡಿಕೆ ಬಳಕೆ ಏರಿ ಬೇಡಿಕೆ ಹೆಚ್ಚಾಗಲು ಸಾಧ್ಯ. ಇವೆಲ್ಲಾ ಅಡಿಕೆ ಬೆಳೆಗಾರರಿಗೆ ಸಿಹಿಯನ್ನು ಕೊಡಲು ಸಾಧ್ಯವಾಗಿರುವುದು ಇನ್ನೊಂದು ಕಾರಣ.

ಇನ್ನೊಂದು ಕಡೆ ಅಡಿಕೆಯ ಮೌಲ್ಯ ವರ್ಧಿತ ಉತ್ಪನ್ನಗಳೂ ಭಾರತದಿಂದ ಬಾಂಗ್ಲಾ  ಮ್ಯಾನ್ಮಾರ್‌ ಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅಲ್ಪ ಪ್ರಮಾಣದಲ್ಲಿ ರಫ್ತು ಆಗುತ್ತಿದ್ದು ಇದು ಇನ್ನು ಮುಂದೆ ನಿಂತರೂ ಅದರಿಂದ ಆಂತರಿಕವಾಗಿ ಯಾವುದೇ ಸಮಸ್ಯೆ ಉಂಟಾಗದು. ಹೀಗಾಗಿ ನಮ್ಮ ಮಾರುಕಟ್ಟೆಯಲ್ಲಿ ಸ್ವಾಭಾವಿಕವಾಗಿ ಅಡಿಕೆಯನ್ನು ದಾಸ್ತಾನು ಮಾಡುವ ಪ್ರವೃತ್ತಿ ಹೆಚ್ಚಾಗಲು ಸಾಧ್ಯ. ಇದೇ ಇಂದು ಆಗುತ್ತಿದೆ.ಪರಿಣಾಮವಾಗಿ ಧಾರಣೆ ಹೆಚ್ಚಳಕ್ಕೆ ವಿಪುಲ ಅವಕಾಶಗಳಿವೆ ಎನ್ನುತ್ತಾರೆ ಡಾ.ವಿಘ್ನೇಶ್ವರ ಭಟ್.

Advertisement

ಕೃಷಿ ಸಂಬಂಧಿತ ಸುದ್ದಿಗಳಿಗಾಗಿ “ದ ರೂರಲ್‌ ಮಿರರ್.ಕಾಂ” ವ್ಯಾಟ್ಸಪ್‌ ಚಾನೆಲ್‌ ಫಾಲೋ ಮಾಡಿ | ಫಾಲೋ ಮಾಡಲು ಇಲ್ಲಿ ಕ್ಲಿಕ್‌ ಮಾಡಿರಿ…

ಕೃಷಿ ಸಂಬಂಧಿತ ಸುದ್ದಿಗಳಿಗಾಗಿ “ದ ರೂರಲ್‌ ಮಿರರ್.ಕಾಂ” ವ್ಯಾಟ್ಸಪ್‌ ಚಾನೆಲ್‌ ಫಾಲೋ ಮಾಡಿ | ಫಾಲೋ ಮಾಡಲು ಇಲ್ಲಿ ಕ್ಲಿಕ್‌ ಮಾಡಿರಿ…

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಉತ್ತಮ ಮಳೆಯಿಂದ ಹಸಿರಾದ ವನ್ಯಜೀವಿ ತಾಣ | ಚಾಮರಾಜನಗರ ಜಿಲ್ಲೆಯ ಹಲವೆಡೆ ಹಸಿರು ಸಂಭ್ರಮ

ಉತ್ತಮ ಮಳೆಗೆ ಅರಣ್ಯ ಪ್ರದೇಶವೆಲ್ಲ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ, ಮಳೆ ಹನಿಗಳಿಗೆ ಮೈಯೊಡ್ಡಿದ…

5 hours ago

50 ಕೋಟಿಗೂ ಹೆಚ್ಚು ಜನರು ಕೃಷಿ ಕ್ಷೇತ್ರದಲ್ಲಿದ್ದಾರೆ , ಜಿಡಿಪಿಗೆ ಕೃಷಿಯ ಕೊಡುಗೆ ಶೇಕಡಾ 18

ರಾಜ್ಯದ ಅಡಿಕೆ ಬೆಳೆ ಅತ್ಯಂತ ಉತ್ಕೃಷ್ಟ ಗುಣಮಟ್ಟದ್ದಾಗಿದ್ದು, ಇದರಲ್ಲಿ ಯಾವುದೇ ರಾಸಾಯನಿಕ ಇಲ್ಲ.…

5 hours ago

ಅಡಿಕೆ ಹಾಳೆ ರಫ್ತು ನಿರ್ಬಂಧದ ಸಂಕಷ್ಟದಿಂದ ಪಾರಾಗಲು ಕೈಗೊಳ್ಳಬಹುದಾದ ಪರಿಹಾರೋಪಾಯಗಳು

ನಿಷೇಧವು ಶಾಶ್ವತವಲ್ಲ, ಮತ್ತು ವೈಜ್ಞಾನಿಕ, ತಾಂತ್ರಿಕ, ಮತ್ತು ವಾಣಿಜ್ಯ ರಾಜತಾಂತ್ರಿಕ ಮಾರ್ಗದಿಂದ ಈ…

6 hours ago

ಅಡಿಕೆ ಎನ್ನುವ ಚಿನ್ನದ ಮೊಟ್ಟೆ ಇಡುವ ಕೋಳಿ | ವರವೋ ಶಾಪವೋ?

ಆಹಾರ ಧಾನ್ಯಗಳನ್ನು ಬೆಳೆಸುತ್ತಿದ್ದ ಕೃಷಿಕರು ಅಡಿಕೆ ಕೃಷಿಗೆ ಪರಿವರ್ತನೆ ಆಗಿ ಆಹಾರಕ್ಕಾಗಿ ಪರಾವಲಂಬಿಗಳು…

7 hours ago

ಹೊಸರುಚಿ | ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ರೊಟ್ಟಿ

ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ರೊಟ್ಟಿಗೆ ಬೇಕಾಗುವ ಸಾಮಗ್ರಿಗಳು: ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ…

8 hours ago

ಗುರು ಮತ್ತು ಬುಧ ದಶಾಂಕ ಯೋಗ | ಉದ್ಯೋಗದ ಮೇಲೆ ಜಾಕ್ಪಾಟ್ ದೊರೆಯಲಿದೆ

ಹೆಚ್ಚಿನ ಮಾಹಿತಿಗಾಗಿರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

10 hours ago