Advertisement
MIRROR FOCUS

ನೇಪಾಳದಲ್ಲೂ ಕಾಡುವ “ಅಡಿಕೆ” | ಆಮದು-ರಫ್ತು ಪ್ರಕ್ರಿಯೆಯ ಮೇಲೆ ನಿಗಾ |

Share

ಕಳೆದ ಹಲವು ಸಮಯಗಳಿಂದ ನೇಪಾಳದಲ್ಲೂ ಅಡಿಕೆ ಸದ್ದು ಮಾಡುತ್ತಿದೆ. ನೇಪಾಳದ ಬಳಕೆ ಮಾತ್ರವಲ್ಲ ಬೇರೆ ದೇಶದಿಂದ ಅಡಿಕೆ ಆಮದು ಮಾಡಿ ಭಾರತಕ್ಕೆ ರಫ್ತು ಮಾಡುವುದು ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಈ ಬಗ್ಗೆ ಈಗ ಸರ್ಕಾರ ನಿಗಾ ಇರಿಸಿದೆ, ಅಡಿಕೆ ಆಮದು ಹಾಗೂ ರಫ್ತು ಭ್ರಷ್ಟಾಚಾರಕ್ಕೂ ಕಾರಣವಾಗಿದೆ ಎಂದು ಅಲ್ಲಿನ ರಾಜಕೀಯ ಪಕ್ಷಗಳು ಕೂಡಾ ಆರೋಪ ಮಾಡಿವೆ ಎಂದು ನೇಪಾಳದ ಮಾಧ್ಯಮ ವರದಿ  ಮಾಡಿದೆ.

ಕಳೆದ ಅನೇಕ ಸಮಯಗಳಿಂದ  ನೇಪಾಳ ಸರ್ಕಾರವು ಕರಿಮೆಣಸು, ಬಟಾಣಿ, ಅಡಿಕೆ ಮತ್ತು ಖರ್ಜೂರದಂತಹ ಕೆಲವು ವಸ್ತುಗಳ ಆಮದನ್ನು ವಿವಿಧ ನೆಪಗಳ ಅಡಿಯಲ್ಲಿ ನಿರ್ಬಂಧಿಸುತ್ತಿದೆ  ಮತ್ತು ನಿಯಂತ್ರಿಸುತ್ತಿದೆ. ಈ ಕ್ರಮಗಳ ಹಿಂದಿನ ಪ್ರಾಥಮಿಕ ಕಾರಣ ಭ್ರಷ್ಟಾಚಾರ ಎಂಬ ಆರೋಪ ವ್ಯಕ್ತವಾಗುತ್ತಿದೆ. ನಿರ್ಬಂಧ ವಿಧಿಸಿದಾಗ, ಆಮದು ಪರವಾನಗಿಗಳು ಕಡ್ಡಾಯವಾಗುತ್ತವೆ ಮತ್ತು ಅಂತಹ ಪರವಾನಗಿಗಳನ್ನು ಪಡೆಯುವುದು ದೊಡ್ಡ ಪ್ರಮಾಣದ ಲಂಚವನ್ನು ಒಳಗೊಂಡಿರುತ್ತದೆ ಎಂದು ಆರೋಪಿಸಲಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

ಕರಿಮೆಣಸು, ಬಟಾಣಿ ಮತ್ತು ಖರ್ಜೂರಗಳು ನೇಪಾಳದಲ್ಲಿ ದೇಶೀಯವಾಗಿ ಸೇವಿಸುವ ವಸ್ತುಗಳಾಗಿವೆ. ಆದರೆ ಅತ್ಯಂತ ದೊಡ್ಡ ವ್ಯಾಪಾರವು ಅಡಿಕೆಯದ್ದಾಗಿರುತ್ತದೆ.  ನೇಪಾಳದಲ್ಲಿ, ಅಡಿಕೆಯನ್ನು ಪ್ರಾಥಮಿಕವಾಗಿ ಗುಟ್ಕಾ ಉತ್ಪಾದನೆಗೆ ಬಳಸಲಾಗುತ್ತದೆ. ಆದರೆ ಅದಕ್ಕಿಂತ ಹೆಚ್ಚಿನ ಅಡಿಕೆಯನ್ನು ಆಮದು ಮಾಡಿ ಭಾರತಕ್ಕೆ ರಫ್ತು ಮಾಡುವುದು ಸಮಸ್ಯೆಯಾಗಿ ಕಾಡಿದೆ. ಬೇರೆ ದೇಶಗಳಿಂದ ನೇಪಾಳಕ್ಕೆ ಅಡಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತದೆ  ನಂತರ ಅದನ್ನು ನೇಪಾಳಿ ಮೂಲದ ಎಂದು  ಲೇಬಲ್ ಮಾಡಿ ಭಾರತಕ್ಕೆ ರಫ್ತು ಮಾಡಲಾಗುತ್ತಿದೆ. ಹೀಗಾಗಿ ಅಡಿಕೆ ಆಮದು ಮೇಲೆ ನೇಪಾಳ ನಿರ್ಬಂಧ ವಿಧಿಸಿತ್ತು.  ಹೀಗಾಗಿ ಅಡಿಕೆಯ ಜೊತೆಗೆ ಕರಿಮೆಣಸು, ಬಟಾಟೆ ಮತ್ತು ಖರ್ಜೂರ ವ್ಯವಹಾರದ ಮೇಲೂ ನೇಪಾಳದಲ್ಲಿ ಸಮಸ್ಯೆಯಾಗಿದೆ. ಇದಕ್ಕಾಗಿ ಈಗ ಅಡಿಕೆ ಆಮದು-ರಫ್ತು ಮೇಲೆ ನಿಗಾ ಇಡಲಾಗುತ್ತಿದೆ ಎಂದು ವರದಿ ಹೇಳಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 05-10-2026 | ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳಿಯಿಂದ ಮಳೆ – ಅ.6 ರ ಬಳಿಕ ಏನಾಗಲಿದೆ?

ಅರಬ್ಬಿ ಸಮುದ್ರದ ಉಡುಪಿ–ದಕ್ಷಿಣ ಕನ್ನಡ ಕರಾವಳಿ ಸಮೀಪ ರೂಪುಗೊಂಡಿರುವ ಮೇಲ್ಮೈ ಸುಳಿಗಾಳಿಯಿಂದ ಕರಾವಳಿ,…

5 hours ago

ಅಡಿಕೆ ದರ ಇಳಿಯುತ್ತದೆ, ಕೂಲಿ ಏರುತ್ತದೆ ; ಬೆಳೆಗಾರನಿಗೆ ಉಳಿಯುವುದೇನು?

ಅಡಿಕೆ ದರ ಕುಸಿಯುತ್ತಿರುವ ಸಂದರ್ಭದಲ್ಲಿ ಕೃಷಿ ಕೂಲಿ ದರ ನಿರಂತರವಾಗಿ ಏರುತ್ತಿರುವುದು ಮಲೆನಾಡಿನ…

1 day ago

ಕಸೂತಿ ಕಲಿತು ಸ್ವಾವಲಂಬನೆಯತ್ತ ಗ್ರಾಮೀಣ ಮಹಿಳೆಯರು

ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿ ಗ್ರಾಮೀಣ ಮಹಿಳೆಯರಿಗೆ ಒಂದು ತಿಂಗಳ ಉಚಿತ ಮಗ್ಗಂ…

1 day ago

ಕರ್ನಾಟಕದಲ್ಲಿ ಬರದ ಹೊಡೆತ – ಬೆಳೆ ನಷ್ಟ ₹60 ಸಾವಿರ ಕೋಟಿವರೆಗೆ ಸಾಧ್ಯತೆ

ಕರ್ನಾಟಕದ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟ ₹50 ಸಾವಿರ ಕೋಟಿಯಿಂದ ₹60…

1 day ago

ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿದ ಮಾತ್ರಕ್ಕೆ ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿರುವುದನ್ನು ಮಾತ್ರ ಆಧಾರವಾಗಿಟ್ಟುಕೊಂಡು ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ…

1 day ago

ಹವಾಮಾನ ವರದಿ | 3-10-2026 | ಬಂಗಾಳಕೊಲ್ಲಿಯಿಂದ ತೇವಾಂಶದ ಗಾಳಿ – ಕರ್ನಾಟಕದಲ್ಲಿ ಮತ್ತೆ ಮಳೆ?

ಬಂಗಾಳಕೊಲ್ಲಿಯಿಂದ ತಮಿಳುನಾಡು ಮೂಲಕ ತೇವಾಂಶದ ಗಾಳಿ ರಾಜ್ಯದ ದಕ್ಷಿಣ ಒಳನಾಡಿನತ್ತ ಬೀಸುವ ಸಾಧ್ಯತೆಯಿಂದ…

2 days ago