Advertisement
MIRROR FOCUS

ಅಡಿಕೆ ಸಾಗಾಣಿಕೆ | ಭಾರತಕ್ಕೆ ಶ್ರೀಲಂಕಾದಿಂದ ಅಡಿಕೆ ಸಾಗಾಟಕ್ಕೆ ಬಿಗಿ | ತೆರಿಗೆ ಹೆಚ್ಚಿಸಿದ ಶ್ರೀಲಂಕಾ |

Share

ಅಡಿಕೆ ಧಾರಣೆ ಏರಿಕೆಯ ಜೊತೆಗೇ ಸಂಕಷ್ಟಗಳು ಕಳೆದ ಕೆಲವು ಸಮಯಗಳಿಂದ ಹೆಚ್ಚಾಗಿದೆ. ಎಲ್ಲೆಲ್ಲಾ ಅಡಿಕೆ ಕಳ್ಳಸಾಗಾಣಿಕೆ ಸಾಧ್ಯವೋ ಅಲ್ಲೆಲ್ಲಾ ನಡೆಯುತ್ತಿತ್ತು. ಆದರೆ ಇಲಾಖೆಗಳು, ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಳ್ಳಸಾಗಾಣಿಕೆಗೆ ತಡೆಯಾಗುತ್ತಿದೆ. ಇದೀಗ ಶ್ರೀಲಂಕಾ ಮೂಲಕ ಭಾರತಕ್ಕೆ ಬರುತ್ತಿದ್ದ ಅಡಿಕೆಯ ಮೇಲೂ ಶ್ರೀಲಂಕಾ ತಡೆಯೊಡ್ಡುತ್ತಿದೆ. ಹೀಗಾಗಿ ಅಡಿಕೆ ಆಮದು ತಡೆಗೆ ದಾರಿಗಳೂ ಬಿಗಿಯಾಗುತ್ತಿದೆ.

Advertisement
Advertisement
Advertisement

ಭಾರತ ಮತ್ತು ಪಾಕಿಸ್ತಾನದೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದದ ಲಾಭ ಪಡೆದು ಶ್ರೀಲಂಕಾದಲ್ಲಿ  ಮರುರಫ್ತು ದಂಧೆಯನ್ನು ನಡೆಸುತ್ತಿರುವುದು  ಶ್ರೀಲಂಕಾ ಸರ್ಕಾರದ ಗಮನಕ್ಕೆ ಬಂದಿದೆ. ಈ ಸಾಗಾಟವನ್ನು ತಡೆಯಲು ಅಲ್ಲಿನ ಸರ್ಕಾರವು ಶೇ.35  ತೆರಿಗೆಯನ್ನು ಅಡಿಕೆ ರಫ್ತು ಮೇಲೆ ವಿಧಿಸುತ್ತಿದೆ.

Advertisement

ಕಳೆದ ಎರಡು ವರ್ಷಗಳಲ್ಲಿ ಮ್ಯಾನ್ಮಾರ್, ಶ್ರೀಲಂಕಾ ಮತ್ತು ಇಂಡೋನೇಷ್ಯಾದಿಂದ ಅಡಿಕೆ ಆಮದು ಸ್ಥಿರವಾಗಿತ್ತು. ಮ್ಯಾನ್ಮಾರ್‌ ಅಡಿಕೆ ಮಾತ್ರಾ ಕಳ್ಳದಾರಿಯ ಮೂಲಕ  ಬರುತ್ತಿತ್ತು. ಅಡಿಕೆ ಆಮದು ತಡೆಯುವ ನಿಟ್ಟಿನಲ್ಲಿ  ಕನಿಷ್ಠ ಆಮದು ಬೆಲೆಯನ್ನು ಕೆಜಿಗೆ  350 ಕ್ಕೆ ಸರ್ಕಾರ ಹೆಚ್ಚಳ ಮಾಡಿತ್ತು. ಹೀಗಾಗಿ ಅಧಿಕೃತವಾದ ಆಮದು ಅಡಿಕೆಗೆ ತಡೆಯಾಗಿತ್ತು. ಹಾಗಿದ್ದರೂ  ಶ್ರೀಲಂಕಾದಿಂದ ಆಮದು 10,446.67 ಟನ್‌ಗಳಿಂದ 15,114.25 ಟನ್‌ಗಳಿಗೆ ಏರಿಕೆಯಾಗಿತ್ತು. ಅಂಕಿಅಂಶಗಳ ಪ್ರಕಾರ, 2021-22ರಲ್ಲಿ 25,978.98 ಟನ್‌ಗಳಿಂದ 2022-23ರ ಮೊದಲ ಎಂಟು ತಿಂಗಳಲ್ಲಿ 61,452.21 ಟನ್‌ಗಳಿಗೆ 136.35% ಹೆಚ್ಚಳವಾಗಿತ್ತು.

ಶ್ರೀಲಂಕಾದಲ್ಲೂ ಕೂಡಾ ಮುಕ್ತ ವ್ಯಾಪಾರ ಒಪ್ಪಂದ ಕಾರಣದಿಂದ  ಕಸ್ಟಮ್ಸ್ ತೆರಿಗೆಯಲ್ಲಿ ನಷ್ಟ ಅನುಭವಿಸುತ್ತಿತ್ತು. ಅಲ್ಲಿನ ಲೆಕ್ಕಾಚಾರದ ಪ್ರಕಾರ ಪ್ರತಿ ಮೆಟ್ರಿಕ್ ಟನ್ ಅಡಿಕೆಗೆ US $ 300,000 ನಷ್ಟವನ್ನು ಅನುಭವಿಸುತ್ತಿದೆ. ಇದಕ್ಕೂ ಕಾರಣ ಇದೆ, ದೊಡ್ಡ ಪ್ರಮಾಣದಲ್ಲಿ ಬೇರೆ ದೇಶಗಳಿಂದ ಅಡಿಕೆ ಆಮದು ಮಾಡಿ ಶ್ರೀಲಂಕಾದಿಂದ ಮತ್ತೆ ಮರುರಪ್ತು ಮಾಡಲು ಸ್ಥಳೀಯವಾದ ಶ್ರೀಲಂಕಾ ಅಡಿಕೆ ಜೊತೆಗೆ ಬೆರೆಸಲಾಗುತ್ತಿತ್ತು. ಹೀಗಾಗಿ ರಪ್ತಿನಲ್ಲಿ ಮೋಸ ಮಾಡಿ ಭಾರತದೊಳಕ್ಕೆ ಅಡಿಕೆ ಬರುತ್ತಿತ್ತು. ಇದರಿಂದಾಗಿ ಶ್ರೀಲಂಕಾ ಹಾಗೂ ಭಾರತ ಎರಡೂ ದೇಶಗಳಿಗೂ ಅಡಿಕೆ ವಹಿವಾಟಿನಲ್ಲಿ ನಷ್ಟವೇ ಆಗಿತ್ತು.

Advertisement

ಶ್ರೀಲಂಕಾದಿಂದ ಭಾರತಕ್ಕೆ ಮರುರಫ್ತು ಮಾಡುವ ನೆಪದಲ್ಲಿ, ಅಡಿಕೆ ಕಳ್ಳಸಾಗಣೆಯ ಜಾಲದಲ್ಲಿ ಇತ್ತೀಚೆಗೆ ಕೆಲ ರಾಜಕೀಯ ನಾಯಕರೂ, ಅಧಿಕಾರಿಗಳೂ ಶಾಮೀಲಾಗಿರುವುದು  ಬೆಳಕಿಗೆ ಬಂದ ತಕ್ಷಣವೇ ಶ್ರೀಲಂಕಾ ಎಚ್ಚೆತ್ತುಕೊಂಡು ಬಿಗಿಯಾದ ಕ್ರಮಕ್ಕೆ ಮುಂದಾಗಿದೆ. ಅಲ್ಲಿನ ಅಂಕಿ ಅಂಶಗಳ ಪ್ರಕಾರ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ ರಫ್ತು ಅಂಕಿಅಂಶಗಳಲ್ಲಿ ಹಠಾತ್ ಹೆಚ್ಚಳವಾಗಿದೆ.

ಇಂಡೋನೇಷ್ಯಾ, ಮಲೇಷಿಯಾ ಮತ್ತು ಮ್ಯಾನ್ಮಾರ್‌ನಿಂದ  ಕಡಿಮೆ ಬೆಲೆಗೆ ಅಡಿಕೆಯನ್ನು ತಂದು ದಾಸ್ತಾನು ಮಾಡಿ  ಶ್ರೀಲಂಕಾದ ಅಡಿಕೆ ಎಂದು ಘೋಷಿಸಿ ಪಾಕಿಸ್ತಾನ ಹಾಗೂ ಭಾರತಕ್ಕೆ ಮರುರಫ್ತು ಮಾಡುವ ಮೂಲಕ ಲಾಭ ಗಳಿಸುತ್ತಿದೆ ಎಂದು ಶ್ರೀಲಂಕಾದ ಆಂತರಿಕ ಸಮಿತಿ ಸರ್ಕಾರಕ್ಕೆ ವರದಿ ನೀಡಿತ್ತು. ಇದೆಲ್ಲಾ ಕಾರಣದಿಂದ ಈಗ ಅಡಿಕೆಯ ಮೇಲೆ ಶ್ರೀಲಂಕಾವು ಕಣ್ಣಿಟ್ಟಿದೆ. ಅಕ್ರಮ ಸಾಗಾಟಕ್ಕೆ ಕಡಿವಾಣ ಬಿದ್ದಿದೆ.

Advertisement

The Sri Lankan government has come to the notice of the re-export trade in Sri Lanka taking advantage of the free trade agreement with India and Pakistan. The government there is imposing a 35% tax on the export of arecanuts.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ಬೆಳೆಗಾರರು ಏಕೆ ಜಾಗ್ರತರಾಗಬೇಕಿದೆ..?

ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…

10 hours ago

ಮೊಗ್ರದಲ್ಲಿ ಕಾಲಾವಧಿ ನೇಮ

https://youtu.be/YgcAfgYUbGQ?si=vp1TmN5dQYAkVPBy

1 day ago

ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ

ಸಿರಿಧಾನ್ಯಗಳ  ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು  ಕೃಷಿ ಇಲಾಖೆ  “ಸಿರಿಧಾನ್ಯ ಓಟ…

3 days ago

ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…

3 days ago

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |

20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…

3 days ago