ಮುಂದ್ರಾ ಬಂದರಿಗೆ ಬಂತು 53 ಟನ್‌ ಅಡಿಕೆ..! | ರಾಳ ಹಾಗೂ ಪ್ಲಾಸ್ಟಿಕ್ ಹೆಸರಿನಲ್ಲಿ ಅಡಿಕೆ ಕಳ್ಳಸಾಗಾಣಿಕೆ |

December 29, 2024
8:30 PM
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಮುಂದ್ರಾ ಬಂದರಿನಲ್ಲಿರುವ ಕಸ್ಟಮ್ಸ್ ವಿಶೇಷ ಗುಪ್ತಚರ ಮತ್ತು ತನಿಖಾ ವಿಭಾಗವು  3 ಕೋಟಿ ಮೌಲ್ಯದ 53 ಟನ್ ಅಡಿಕೆಯನ್ನು ವಶಪಡಿಸಿಕೊಂಡಿದೆ. (Photo-File)

 

Advertisement

ದುಬೈನಿಂದ ಮುಂದ್ರಾ ಬಂದರಿಗೆ ರಾಳ ಹಾಗೂ ಪ್ಲಾಸ್ಟಿಕ್ ಹೆಸರಿನಲ್ಲಿ ಸುಮಾರು 53 ಟನ್‌ ಅಡಿಕೆ ಆಮದಾಗಿರುವುದು ಬೆಳಕಿಗೆ ಬಂದಿದ್ದು, ಬಂದರಿನಲ್ಲಿರುವ ಕಸ್ಟಮ್ಸ್ ವಿಶೇಷ ಗುಪ್ತಚರ ಮತ್ತು ತನಿಖಾ ವಿಭಾಗವು ನಡೆಸಿದ ಕಾರ್ಯಾಚರಣೆಯಲ್ಲಿ ಅಡಿಕೆ ಪತ್ತೆಯಾಗಿದ್ದು ತನಿಖೆ ನಡೆಯುತ್ತಿದೆ.

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಮುಂದ್ರಾ ಬಂದರಿನಲ್ಲಿರುವ ಕಸ್ಟಮ್ಸ್ ವಿಶೇಷ ಗುಪ್ತಚರ ಮತ್ತು ತನಿಖಾ ವಿಭಾಗವು  3 ಕೋಟಿ ಮೌಲ್ಯದ 53 ಟನ್ ಅಡಿಕೆಯನ್ನು ವಶಪಡಿಸಿಕೊಂಡಿದೆ. ಎರಡು ಕಂಟೈನರ್‌ಗಳನ್ನು ತಡೆದು ತಪಾಸಣೆ ನಡೆಸಿದಾಗ ಅಡಿಕೆ ಪತ್ತೆಯಾಗಿದೆ. ‌

ದುಬೈನಿಂದ ಮುಂದ್ರಾ ಬಂದರಿಗೆ ಅಡಿಕೆ  ಕಳ್ಳಸಾಗಣೆಯಾಗುತ್ತಿರುವ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳಿಗೆ ಗುಪ್ತಚರ ಮಾಹಿತಿ ಸಿಕ್ಕಿತ್ತು. ಹೀಗಾಗಿ ತಪಾಸಣೆ ನಡೆಸಿದಾಗ  ರಾಳ ಹಾಗೂ ಪ್ಲಾಸ್ಟಿಕ್ ಸಾಗಾಟ ಎಂದು  ಘೋಷಿಸಲಾಗಿತ್ತು. ಆದರೆ ಪರಿಶೀಲನೆ ನಡೆಸಿದಾಗ  53 ಟನ್ ಅಡಿಕೆ ಪತ್ತೆಯಾಗಿದೆ. ವಶಪಡಿಸಿಕೊಂಡ ಅಡಿಕೆಯ  ಮಾರುಕಟ್ಟೆ ಮೌಲ್ಯ 3 ಕೋಟಿ  ರೂಪಾಯಿ ಎಂದು ಅಂದಾಜಿಸಲಾಗಿದೆ.ಈ ಹಿಂದೆ ಇದೇ ರೀತಿಯಲ್ಲಿ ಅಡಿಕೆ ಕಳ್ಳಸಾಗಣೆ ನಡೆದಿತ್ತು. ಇದೀಗ ಮತ್ತೆ ಕಳ್ಳಸಾಗಾಣಿಕೆ ಬಿರುಸುಗೊಂಡಿದೆ.

Advertisement

ಸದ್ಯ ಅಡಿಕೆ ಮಾರುಕಟ್ಟೆ ಏರಿಕೆ ಕಂಡಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಖಾಲಿಯಾಗಿದೆ, ಅಡಿಕೆ ಮುಂದಿನ ವರ್ಷ ಇಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಡಿತ್ತು. ಹೀಗಾಗಿ ಧಾರಣೆ ಏರಿಕೆಯಾಗಿತ್ತು ಕೂಡಾ. ಬೆಳೆಗಾರರು ಈ ಸುದ್ದಿಗಳನ್ನು ನಂಬಿ ಅಡಿಕೆ ಮಾರಾಟಕ್ಕೂ ಹಿಂದೇಟು ಹಾಕಿದ್ದರು.

Advertisement

ಸದ್ಯ ಮಾರುಕಟ್ಟೆಯಲ್ಲಿ  ಪ್ರತಿ ಕೆಜಿಗೆ ಅಡಿಕೆಗೆ 450 ರೂಪಾಯಿಗೆ ಖರೀದಿಯಾಗುತ್ತಿದೆ. ಆದರೆ ಮ್ಯಾನ್ಮಾರ್, ಶ್ರೀಲಂಕಾ ಮತ್ತು ಥೈಲ್ಯಾಂಡ್‌ನಂತಹ ದೇಶಗಳಲ್ಲಿ ಕಡಿಮೆ ಬೆಲೆಗೆ ಅಡಿಕೆ ಲಭ್ಯವಾಗುತ್ತಿದೆ. ಅಲ್ಲಿ ಕಡಿಮೆ ಬೆಲೆಗೆ ಖರೀದಿ ಮಾಡುವ ಅಡಿಕೆಯನ್ನು ಆಮದು ಸುಂಕ ತಪ್ಪಿಸಿ ಭಾರತಕ್ಕೆ ಸಾಗಿಸಲಾಗುತ್ತಿದೆ. ಈ ಸಂದರ್ಭ ಇಲ್ಲಿಯ ಮಾರುಕಟ್ಟೆಯನ್ನು ಏರಿಕೆ ಮಾಡಿ, ಆಮದು ಆದ ತಕ್ಷಣವೇ ಭಾರತದಲ್ಲಿ ಅಡಿಕೆ ಮಾರುಕಟ್ಟೆ ಇಳಿಸುವ ತಂತ್ರ ನಡೆಯುತ್ತಿದೆ. ಈ ಹಿಂದೆಯೂ ಇದೇ ಆಗಿತ್ತು ಕೂಡಾ. ಇದೊಂದು ದಂಧೆಯಾಗಿ ಮಾರ್ಪಟ್ಟಿದೆ.

ನಾಲ್ಕು ವರ್ಷಗಳ ಹಿಂದೆ, ಕಚ್‌ನಲ್ಲಿ ಮೊದಲ ಬಾರಿಗೆ ಅಡಿಕೆ ಕಳ್ಳಸಾಗಣೆ ಪ್ರಕರಣವು ಬಹಿರಂಗವಾಗಿತ್ತು, ಅಂದು  4 ಕೋಟಿ ರೂಪಾಯಿಯ ಅಡಿಕೆಯ ದಂಧೆಗೆ ಸಂಬಂಧಿಸಿದಂತೆ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು. ಇದೀಗ ಮತ್ತೆ ಈ ಬಾರಿ ಅಂತಹದ್ದೇ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಸೂಕ್ತವಾದ ಕ್ರಮಗಳ ಅಗತ್ಯ ಇದೆ.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ವೈಜ್ಞಾನಿಕ ಶಿಫಾರಸ್ಸಿನಂತೆ ರಸಗೊಬ್ಬರದ ಬಳಕೆ ಸೂಕ್ತ – ರೈತರಿಗೆ ಸಲಹೆ
August 11, 2025
8:43 AM
by: The Rural Mirror ಸುದ್ದಿಜಾಲ
ರಾಜ್ಯದ ಹಲವೆಡೆ ಮುಂದಿನ 7 ದಿನಗಳ ಕಾಲ ವ್ಯಾಪಕ ಮಳೆ | ಬೆಂಗಳೂರಿಗೆ ಎಲ್ಲೋ ಅಲರ್ಟ್
August 11, 2025
7:27 AM
by: ದ ರೂರಲ್ ಮಿರರ್.ಕಾಂ
ಬದುಕು ಪುರಾಣ | ಜ್ಞಾನದ ಪ್ರತಿನಿಧಿ ಗಂಗಾಪುತ್ರ
August 10, 2025
7:00 AM
by: ನಾ.ಕಾರಂತ ಪೆರಾಜೆ
ಬೆಳೆ ಹಾನಿ ಕುರಿತು ಸಮಗ್ರವಾಗಿ ಸಮೀಕ್ಷೆಗೆ ಸೂಚನೆ
August 9, 2025
7:48 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group