ಅಡಿಕೆ ಮಾರುಕಟ್ಟೆ ಸುದ್ದಿ | 1 ಕೋಟಿ ರೂಪಾಯಿ ಮೌಲ್ಯದ ಬರ್ಮಾ ಅಡಿಕೆ ಮತ್ತೆ ವಶಕ್ಕೆ | ಅಡಿಕೆ ಮಾರುಕಟ್ಟೆಗೆ ಬೇಕಿದೆ ಇನ್ನಷ್ಟು ಭದ್ರತೆ |

Advertisement

ಅಡಿಕೆ ಮಾರುಕಟ್ಟೆಯಲ್ಲಿ  ಮತ್ತೆ ಏರಿಳಿತ ಶುರುವಾಗಿದೆ. ಕಳೆದ ಕೆಲವು ದಿನಗಳಿಂದ ಭಾರತದ ಅಡಿಕೆ ಮಾರುಕಟ್ಟೆಯಲ್ಲಿ  ಉತ್ಸಾಹ ಇರಲಿಲ್ಲ. ಈ ನಡುವೆಯೇ ಅಡಿಕೆ ಆಮದು ಕಳ್ಳ ದಾರಿಯ ಮೂಲಕ ನಡೆಯುತ್ತಿದೆ. ನಾಲ್ಕು ದಿನಗಳ ಹಿಂದೆ ಸುಮಾರು 1 ಕೋಟಿ ರೂಪಾಯಿ ಮೌಲ್ಯದ ಬರ್ಮಾ ಅಡಿಕೆಯನ್ನು  ಅಸ್ಸಾಂನ ಕ್ಯಾಚಾರ್‌ ಜಿಲ್ಲೆಯಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಪ್ರಕರಣದಲ್ಲಿ ಅಸ್ಸಾಂ ಪೊಲೀಸರು ಕ್ಯಾಚಾರ್ ಜಿಲ್ಲೆಯಲ್ಲಿ 10 ಜನರನ್ನು ಬಂಧಿಸಿದ್ದಾರೆ.

Advertisement

ಬರ್ಮಾ ಅಡಿಕೆಯನ್ನು ಕಳ್ಳಸಾಗಣೆ ಯತ್ನ ನಡೆಯುತ್ತಲೇ ಇದೆ. ಸುಮಾರು 20 ಟನ್  ಬರ್ಮಾ ಅಡಿಕೆಯನ್ನು ಅಸ್ಸಾಂ ಪೊಲೀಸರು ವಶಕ್ಕೆ ತೆಗೆದುಕೊಂಡರು. ಕಾರ್ಯಾಚರಣೆಯಲ್ಲಿ ಹತ್ತು ವಾಹನಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಬಗ್ಗೆ ಮಾಧ್ಯಮಗಳಿಗೆ  ಮಾಹಿತಿ ನೀಡಿದ ಕ್ಯಾಚಾರ್ ಜಿಲ್ಲೆಯ ಎ ಸ್ಪಿ ನುಮಲ್ ಮಹತೋ, ಖಚಿತ ಮಾಹಿತಿ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿ ಬರ್ಮಾ  ಅಡಿಕೆಗಳನ್ನು ವಶಪಡಿಸಿಕೊಂಡಿದ್ದಾರೆ.  ಮಿಜೋರಾಂನಿಂದ ಅಡಿಕ ಬರುತ್ತಿದ್ದವು . ದೇಶದ ವಿವಿಧ ಸ್ಥಳಗಳಿಗೆ  ಅಡಿಕೆ ಸಾಗಾಟ ಮಾಡಲು ಉದ್ದೇಶಿದ್ದರು. ವಶಪಡಿಸಿಕೊಂಡ ಅಡಿಕೆಯ ಮಾರುಕಟ್ಟೆ ಮೌಲ್ಯ ಸುಮಾರು 1 ಕೋಟಿ ಎಂದು ಹೇಳಿದ್ದಾರೆ.

Advertisement

ಇದೇ ವೇಳೆ ವಿಶಾಖಪಟ್ಟಣಂ ಬಂದರಿನಲ್ಲೂ ಅಡಿಕೆ ಕಳ್ಳಸಾಗಾಣಿಕೆ ಪತ್ತೆಯಾಗಿದೆ. ಯುಎಇ ಮೂಲಕ ಆಗಮನವಾದ ಒಣ ಖರ್ಜೂರದ ಹೆಸರಿನಲ್ಲಿ  ಅಡಿಕೆ ಕಳ್ಳಸಾಗಾಣಿಕೆ ಬೆಳೆಕಿಗೆ ಬಂದಿದೆ. ಒಟ್ಟು 56 ಮೆಟ್ರಿಕ್‌ ಟನ್‌ ಖರ್ಜೂರ ಎಂದು ಆಮದು ಆಗಿತ್ತು. ಪರಿಶೀಲನೆ ನಡೆಸಿದಾಗ ಅದರಲ್ಲಿ 11.5 ಮೆಟ್ರಿಕ್‌ ಟನ್‌ ಮಾತ್ರವೇ ಖರ್ಜೂರ ಲಭ್ಯವಾಗಿದ್ದು ಉಳಿದ ಎಲ್ಲಾ ಬ್ಯಾಗ್‌ ಗಳಲ್ಲಿ ಅಡಿಕೆ ಇರುವುದು  ಬೆಳೆಕಿಗೆ ಬಂದಿದೆ. ಸುಮಾರು 5.5 ಕೋಟಿ ರೂಪಾಯಿ ಮೌಲ್ಯದ ಅಡಿಕೆ ಇಲ್ಲಿ ಪತ್ತೆಯಾಗಿದೆ. ಇದರಲ್ಲಿ ಕೇವಲ 3.5 ಲಕ್ಷ ರೂಪಾಯಿ ಮೌಲ್ಯದ ಒಣ ಖರ್ಜೂರ ಪತ್ತೆಯಾಗಿತ್ತು. ಈ ಪ್ರಕರಣ ತನಿಖೆಯಾಗುತ್ತಿದೆ.

ಕಳೆದ ಕೆಲವು ದಿನಗಳಿಂದ ಅಡಿಕೆ ಮಾರುಕಟ್ಟೆಯಲ್ಲಿ ಉತ್ಸಾಹ ಕಾಣುತ್ತಿಲ್ಲ. ಅಂತಹ ಎಲ್ಲಾ ಸಂದರ್ಭಗಳಲ್ಲೂ ಅಡಿಕೆ ಆಮದು ಕಳ್ಳದಾರಿಯ ಮೂಲಕ ನಡೆಯುತ್ತಿದೆ. ಹೀಗಾಗಿ ಅಡಿಕೆ ಆಮದು ಸಂಪೂರ್ಣ ತಡೆಗೆ ಇನ್ನಷ್ಟು ಕಠಿಣ ಕ್ರಮಗಳ ಅಗತ್ಯ ಇದೆ. ಮುಂದೆ ಚುನಾವಣೆ ಸಮೀಪಿಸುತ್ತಿರುವುದರಿಂದ ಈಗಲೇ ಅಡಿಕೆ ಮಾರುಕಟ್ಟೆ ಕಡೆಗೆ ಗಮನ ಅಗತ್ಯ ಇದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಅಡಿಕೆ ಮಾರುಕಟ್ಟೆ ಸುದ್ದಿ | 1 ಕೋಟಿ ರೂಪಾಯಿ ಮೌಲ್ಯದ ಬರ್ಮಾ ಅಡಿಕೆ ಮತ್ತೆ ವಶಕ್ಕೆ | ಅಡಿಕೆ ಮಾರುಕಟ್ಟೆಗೆ ಬೇಕಿದೆ ಇನ್ನಷ್ಟು ಭದ್ರತೆ |"

Leave a comment

Your email address will not be published.


*