ಸಂಪಾದಕೀಯ ಆಯ್ಕೆ

ಅಡಿಕೆಯ ಮೌಲ್ಯವರ್ಧನೆ ದಾರಿ | ಅಡಿಕೆ ಸಿಪ್ಪೆಯ ನಾರಿನಿಂದ ಬಟ್ಟೆಯ ನೂಲು | ಕೇರಳದಲ್ಲಿ ಇನ್ನೊಂದು ಪ್ರಯತ್ನ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಅಡಿಕೆಯ ಸಿಪ್ಪೆಯಿಂದ ಕೋಟ್‌ ತಯಾರಿಕೆಗೆ ಬೇಕಾದ ನೂಲು ತೆಗೆಯುವ ಬಗ್ಗೆ ಈಗಾಗಲೇ ಹಲವು ಕಡೆ ಅಧ್ಯಯನವಾಗಿದೆ. ಇದೀಗ ಅಡಿಕೆ ಸಿಪ್ಪೆಯಿಂದ ಬಟ್ಟೆಯ ನೂಲು ತೆಗೆಯುವ ತಂತ್ರಜ್ಞಾನವನ್ನು ಕೇರಳದ ಕಣ್ಣೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ (ಎನ್‌ಐಎಫ್‌ಟಿ) ಯ ಸಹಾಯಕ ಪ್ರಾಧ್ಯಾಪಕ ಜಾರ್ಜ್‌ ಸನ್ನಿ ಅವರು ಅಭಿವೃದ್ಧಿಪಡಿಸಿದ್ದಾರೆ. ಈ ಮೂಲಕ ಅಡಿಕೆಯ ಸಿಪ್ಪೆಯ ಮೌಲ್ಯವರ್ಧನೆಗೆ ದಾರಿ ಲಭಿಸಿದೆ.

Advertisement

ಕರ್ನಾಟಕವು ಅತೀ ಹೆಚ್ಚು ಅಡಿಕೆ ಬೆಳೆಯುವ ಪ್ರದೇಶ. ಇಲ್ಲಿ ದಕ್ಷಿಣ ಕನ್ನಡ ಸೇರಿದಂತೆ ಚಾಲಿ ಅಡಿಕೆ ಮಾಡುವ ಪ್ರದೇಶಗಳಲ್ಲಿ ಅಡಿಕೆ ಸಿಪ್ಪೆಯನ್ನು ಉರುವಲಾಗಿ ಬಳಸಲಾಗುತ್ತದೆ. ಕೆಂಪಡಿಕೆ ಮಾಡುವ ಪ್ರದೇಶದಲ್ಲೂ ಅಡಿಕೆ ಸಿಪ್ಪೆ ಕೆಲವು ಕಡೆ ಉರುವಲಾಗಿಯೂ, ಇನ್ನೂ ಕೆಲವು ಕಡೆ ತ್ಯಾಜ್ಯವಾಗಿಯೂ ಬಳಕೆಯಾಗುತ್ತದೆ. ಆದರೆ ಅದನ್ನು ವಿಲೇವಾರಿ ಮಾಡುವುದೇ ದೊಡ್ಡ ಸಮಸ್ಯೆ. ಕೆಲವು ಸಮಯದ ಹಿಂದೆ ಅಡಿಕೆ ಸಿಪ್ಪೆಯಿಂದ ನೂಲು ತೆಗೆಯುವ ತಂತ್ರಜ್ಞಾನದ ಬಗ್ಗೆ ಕೆಲವು ಸಂಶೋಧಕರು ಹೇಳಿದ್ದರು, ಅಧ್ಯಯನ ವರದಿಯನ್ನು ಪ್ರಕಟಿಸಿದ್ದರು. ಇದೀಗ ಕೇರಳದ ಕಣ್ಣೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ (ಎನ್‌ಐಎಫ್‌ಟಿ) ಯ ಸಂಶೋಧಕರು ಒಂದು ಹೆಜ್ಜೆ ಮುಂದೆ ಹೋಗಿದ್ದು ಜವುಳಿ ಉದ್ಯಮಕ್ಕೆ ಅನುಕೂಲವಾಗುವಂತೆ ನೂಲನ್ನು ತಯಾರಿಸುವಂತೆ ಮಾಡಿದ್ದಾರೆ. ಹೀಗಾಗಿ ಉರುವಲಾಗಿ ಅಥವಾ ತ್ಯಾಜ್ಯವಾಗಿ ಬಳಕೆಯಾಗುತ್ತಿದ್ದ ಅಡಿಕೆ ಸಿಪ್ಪೆಯ ಮೌಲ್ಯವರ್ಧನೆ ಈಗ ಸಾಧ್ಯವಾಯಿತು.ಜವಳಿ ಉದ್ಯಮಕ್ಕೆ ಅಮೂಲ್ಯವಾದ ಕಚ್ಚಾ ವಸ್ತುವಾಗಿ ಮಾರ್ಪಡುತ್ತಿದೆ.ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ ಸಹಾಯಕ ಪ್ರಾಧ್ಯಾಪಕ ಜಾರ್ಜಿ ಸನ್ನಿ ಚಂದ್ರನಕುನ್ನೆಲ್ ಈ ಪ್ರಯತ್ನ ಮಾಡಿದ್ದಾರೆ.…..ಮುಂದೆ ಓದಿ….

ಅಡಿಕೆ ಬೆಳೆಯುವ ನಾಡಾಗಿರುವ ಕಾಸರಗೋಡು ಮೂಲಕ ಜಾರ್ಜಿ ಸನ್ನಿ ಅವರು ಎಳವೆಯಲ್ಲಿ ಅಡಿಕೆಯ ಬಗ್ಗೆ ಹೊಂದಿರುವ ಅನುಭವ ಹಾಗೂ ನಂತರದ ಅಧ್ಯಯನಗಳಿಂದ ಈ ಬೆಳವಣಿಗೆ ಸಾಧ್ಯವಾಗಿದೆ.ಯಾವತ್ತೂ ತ್ಯಾಜ್ಯವಾಗಿ ಬಳಕೆಯಾಗುತ್ತಿದ್ದ ಅಡಿಕೆಯ ಸಿಪ್ಪೆಗೆ ಮೌಲ್ಯ ನೀಡಲು ಈ ಹೆಜ್ಜೆ ಇರಿಸಿದೆ ಎನ್ನುತ್ತಾರೆ ಅವರು. ಈಗ ಜವಳಿ ಉದ್ಯಮದಲ್ಲಿ ಅಡಿಕೆ ಸಿಪ್ಪೆಯ ನೂಲು ಉತ್ತಮವಾದ ಫಲಿತಾಂಶ ನೀಡಿದೆ.ಅಡಿಕೆ ಸಿಪ್ಪೆಯಿಂದ ಹೊರತೆಗೆಯಲಾದ ಫೈಬರ್ ನೈಸರ್ಗಿಕ ಹಳದಿ ಬಣ್ಣವನ್ನು ನೀಡುತ್ತದೆ, ಬಟ್ಟೆಗೆ ವಿಶಿಷ್ಟವಾದ ಸೌಂದರ್ಯಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ.

ಅಡಿಕೆಯ ಸಿಪ್ಪೆಯಿಂದ ನಾರನ್ನು ಹೊರತೆಗೆಯಲು ಹಲವು ಹಂತಗಳು ಬೇಕಾಯಿತು. ಆರಂಭದಲ್ಲಿ ಹತ್ತಿಯೊಂದಿಗೆ ಸೇರಿಸಿಕೊಂಡು ದಪ್ಪವಾದ ನೂಲನ್ನು ಮಾತ್ರವೇ ತೆಗೆಯಲು ಸಾಧ್ಯವಾಯಿತು. ಇದೀಗ ಸುಧಾರಿಸಿ ಉತ್ತಮವಾದ ನೂಲನ್ನು ತೆಗೆಯಲು ಸಾಧ್ಯವಾಯಿತು ಎನ್ನುತ್ತಾರೆ ಸನ್ನಿ.ಕೇರಳದ ಧೋತಿ, ಶಾಲುಗಳಿಗೆ ಅಡಿಕೆಯ ನೂಲು  ಸಾಂಪ್ರದಾಯಿಕ ಚಿನ್ನದ ಝರಿಯ ಸ್ಥಾನವನ್ನು ಪಡೆಯುತ್ತದೆ ಎನ್ನುವುದು ವಿಶೇಷವಾಗಿದೆ.

ಈ ಹಿಂದೆ, ಮೇಘಾಲಯದ ವಿಜ್ಞಾನಿಗಳು, ಸುರತ್ಕಲ್ಲಿನ ಎನ್‌ಐಟಿಕೆ ಹಾಗೂ ತುಮಕೂರಿನ ಸಿದ್ಧಾರ್ಥ ತಾಂತ್ರಿಕ ಸಂಸ್ಥೆ, ತಮಿಳುನಾಡಿನ ಖಾಸಗಿ ಸಂಸ್ಥೆಯೊಂದು ಕೂಡಾ ಅಡಿಕೆ ಸಿಪ್ಪೆಯ ಬಳಕೆಯ ಬಗ್ಗೆ ಅಧ್ಯಯನ ಮಾಡಿದ್ದರು.

ಮೇಘಾಲಯದ ವಿಜ್ಞಾನಿಗಳು  ಅಡಿಕೆ ಸಿಪ್ಪೆಯಿಂದ ಬಟ್ಟೆ ಹಾಗೂ ಇನ್ನಿತರ ವಸ್ತುಗಳನ್ನು ತಯಾರಿಯಲ್ಲಿ ಪ್ರಯತ್ನ ಮಾಡಿದ್ದರು. ಡಾ. ಅನುಪಮಾ ಮಿಶ್ರ ಹಾಗೂ ಅವರ ತಂಡವೂ ಇಂತಹದ್ದೇ ಒಂದು ಪ್ರಯತ್ನ ಮಾಡಿತ್ತು.ಅಲ್ಲಿ ಅಡಿಕೆ ಸಿಪ್ಪೆಯ ನಾರಿನಿಂದ ಕೋಟು, ಬೆನ್ನಿಗೆ ಹಾಕುವ ಚೀಲ, ಪರ್ಸ್, ಸ್ಯಾನಿಟರಿ ನ್ಯಾಪ್ಕಿನ್, ಡೋರ್ ಮ್ಯಾಟ್ ಇತ್ಯಾದಿಗಳನ್ನು ತಯಾರಿಸಿದ್ದರು.ಅಡಿಕೆ ಸಿಪ್ಪೆಯಲ್ಲಿನ ನಾರಿನ ಪ್ರಮಾಣ 40-45%. ನಾರಿನ ಸರಾಸರಿ ಉದ್ದ ನಾಲ್ಕು ಸೆಂಟೀಮಿಟರು. ಅಡಿಕೆಯ ಉದ್ದಕ್ಕನುಗುಣವಾಗಿ ನಾರಿನ ಉದ್ದವೂ ಇರುತ್ತದೆ , ಅಡಿಕೆ ಸಿಪ್ಪೆಯ ನಾರು ಕುರಿ ಉಣ್ಣೆಯಷ್ಟೇ ಗಟ್ಟಿ ಎನ್ನುತ್ತಾರೆ ಡಾ. ಮಿಶ್ರಾ. ಅಡಿಕೆ ಸಿಪ್ಪೆಯಲ್ಲಿರುವ ಸೆಲ್ಯುಲೋಸ್  ಗಾಳಿಯಾಡಲು ಅನುಕೂಲ ಮಾಡಿಕೊಡುತ್ತದೆ. ಜೊತೆಗೆ ಚರ್ಮಸ್ನೇಹಿ. ಬಟ್ಟೆಗಳನ್ನು ಸುಲಭದಲ್ಲಿ ನಿರ್ವಹಣೆ ಮಾಡಬಹುದು ಎಂದು ಮಿಶ್ರಾ ಹೇಳಿದ್ದರು.

ತಮಿಳುನಾಡಿನ ಸಂಸ್ಥೆಯೊಂದು ಅಡಿಕೆ ಸಿಪ್ಪೆ ಬಳಸಿ ನೆಲಹಾಸು, ದಿಂಬು, ನರ್ಸರಿ ಬ್ಯಾಗ್ ಸೇರಿದಂತೆ ಹಲವು ಉತ್ಪನ್ನ ತಯಾರು ಮಾಡಿತ್ತು.

ಇದೀಗ ಕೇರಳದ ಕಣ್ಣೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ (ಎನ್‌ಐಎಫ್‌ಟಿ) ಯ ಸಹಾಯಕ ಪ್ರಾಧ್ಯಾಪಕ ಜಾರ್ಜ್‌ ಸನ್ನಿ ಅವರು ಅಭಿವೃದ್ಧಿಪಡಿಸಿ ಈ ತಂತ್ರಜ್ಞಾನ ಒಂದು ಹೆಜ್ಜೆ ಮುಂದಕ್ಕಿದೆ. ಅಡಿಕೆ ಬೆಳೆಗಾರರಿಗೆ ಆಶಾದಾಯಕ ವಾತಾವರಣ ಇಲ್ಲಿದೆ.

(ದಿ ಹಿಂದೂ ಮತ್ತು ಇತರ ಮೂಲಗಳಿಂದ ಒದಗಿಸಿದ ಮಾಹಿತಿಗೆ ಮನ್ನಣೆ ನೀಡಲಾಗಿದೆ.)

The extraction of yarn needed for making coats from Arecanut husk has been extensively researched in various locations. Recently,Georgy Sunny, Assistant Professor at the National Institute of Fashion Technology (NIFT) in Kannur, Kerala, has successfully developed a technology for extracting cloth yarn from Arecanut shells.

Previously, researchers from Meghalaya, NITK in Suratkal, and Siddhartha Technical Institute in Tumkur, a private institute in Tamil Nadu, conducted research on the utilization of Arecanut husk. These studies have the potential to provide valuable insights for Arecanut growers.

(Note: Insights from news reports by The Hindu and other sources are credited for the information provided)

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಅನ್ನದ ಪರಿಮಳ ಮನವರಳಿಸ ಬಹುದಲ್ಲವೇ..!

ಅನ್ನದ ಪರಿಮಳ ಎಷ್ಟು ಸೊಗಸು. ಅಡುಗೆ ಮನೆಯ ಭಾಷೆಯೇ ಅಂತಹದ್ದು.

6 hours ago

ಹೆಚ್ಚಿನ ಮೌಲ್ಯದ ಹಣ್ಣಿನ ಬೆಳೆಗಳ ಕುರಿತು ಚರ್ಚೆ | ಹಲಸು , ಡ್ರಾಗನ್‌ಫ್ರುಟ್‌ ಕೃಷಿಯ ಕಡೆಗೆ ಆದ್ಯತೆ |

ಭಾರತದ ವಿವಿಧ ಕಡೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯ ಇರುವ ಡ್ರಾಗನ್‌ ಫ್ರುಟ್(ಕಮಲಂ) ಹಾಗೂ…

7 hours ago

ದೆಹಲಿಯಲ್ಲಿ ಹೀಟ್‌ವೇವ್‌ , ಬಿಹಾರದಲ್ಲಿ ಮಳೆ, ಕರ್ನಾಟಕದಲ್ಲಿ ಬಿಸಿ ಗಾಳಿ ಎಚ್ಚರಿಕೆ |

ಏಪ್ರಿಲ್ ಮಧ್ಯದ ವೇಳೆಗೆ ದೆಹಲಿಯಲ್ಲಿ ತಾಪಮಾನವು 40 ಡಿಗ್ರಿಗಿಂತ ಹೆಚ್ಚಾಗಬಹುದು, ಈ ಬಾರಿ…

9 hours ago

ಹೊಸರುಚಿ| ಗುಜ್ಜೆ ರೋಲ್

ಗುಜ್ಜೆ ರೋಲ್ ಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಮೊದಲಿಗೆ ಗುಜ್ಜೆ ಕಟ್…

10 hours ago

ಅಮರನಾಥ ಯಾತ್ರೆಗೆ ನೋಂದಣಿ ಪ್ರಕ್ರಿಯೆ ಆರಂಭ | ಜೂನ್‌ 29 ರಿಂದ ಯಾತ್ರೆ ಆರಂಭ |

ಹಿಂದೂಗಳ ಪವಿತ್ರ ಯಾತ್ರಾಸ್ಥಳ, ವಾರ್ಷಿಕ ಪವಿತ್ರ ಅಮರನಾಥ ಯಾತ್ರೆ  ಜೂನ್‌ 29 ರಿಂದ, …

10 hours ago

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಅನಿರ್ಧಿಷ್ಟಾವದಿ ಲಾರಿ ಮುಷ್ಕರ | ಸಂಧಾನ ಮಾತುಕತೆಯೂ ವಿಫಲ |

ಡೀಸೆಲ್ ದರ ಹೆಚ್ಚಳವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು, ಟೋಲ್ ಶುಲ್ಕ ಕಡಿಮೆ ಮಾಡಬೇಕು,…

10 hours ago