ಇಂಡೋನೇಷ್ಯಾದ ಕಳಪೆ ಗುಣಮಟ್ಟದ ಅಡಿಕೆ ಕಳ್ಳಸಾಗಣೆಗೆ ತಡೆ | 100 ಕ್ಕೂ ಹೆಚ್ಚು ಟ್ರಕ್‌ಗಳಲ್ಲಿ ಅಡಿಕೆ ಕಳ್ಳಸಾಗಾಣಿಕೆಯಾಗಿರುವ ಶಂಕೆ

December 2, 2025
3:44 PM

ಅಡಿಕೆ ಕಳ್ಳಸಾಗಣೆ ಮತ್ತು ತೆರಿಗೆ ವಂಚನೆ ಜಾಲವನ್ನು ಮಹಾರಾಷ್ಟ್ರದಲ್ಲಿ ಅಧಿಕಾರಿಗಳು  ಭೇದಿಸಿದ್ದು, ಈ ಸಂದರ್ಭ ಪಾನ್ ಮಸಾಲಾದಲ್ಲಿ ಬಳಸಲಾಗುವ 11 ಲಾರಿಗಳಲ್ಲಿ ಬರುತ್ತಿದ್ದ ಇಂಡೋನೇಷ್ಯಾದ ಅಡಿಕೆ ಸಾಗಾಟವನ್ನು ತಡೆದಿದ್ದಾರೆ.

ಇಂಡೋನೇಷ್ಯಾದಿಂದ ಕಳಪೆ ಗುಣಮಟ್ಟದ ಅಡಿಕೆ ಕಳ್ಳಸಾಗಣೆ ಜಾಲವನ್ನು ಭೇದಿಸಿದ ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್‌ಟಿ) ಇಲಾಖೆ, 2,500 ಟನ್‌ಗಳಿಗಿಂತ ಹೆಚ್ಚು ಕಳ್ಳಸಾಗಣೆ ಮಾಡಿದ 100 ಕ್ಕೂ ಹೆಚ್ಚು ಟ್ರಕ್‌ಗಳು ಈಗಾಗಲೇ ದೆಹಲಿಯ ವಿತರಕರನ್ನು ತಲುಪಿ ನಂತರ ಪಾನ್ ಮಸಾಲಾ ತಯಾರಕರಿಗೆ ಸರಬರಾಜು ಮಾಡಿರಬಹುದು ಎಂದು ಹೇಳಿದೆ, ಈ ಬಗ್ಗೆ ತನಿಖೆ ನಡೆಸುತ್ತಿದೆ. ಸದ್ಯ 11 ಲಾರಿಗಳಲ್ಲಿ ಸಾಗಾಟವಾಗುತ್ತಿದ್ದ ಅಡಿಕೆ ವಶಕ್ಕೆ ಪಡೆದಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

ಭಾರತೀಯ ಅಡಿಕೆಯಂತೆ ಹೋಲುವ ಕಳಪೆ ಗುಣಮಟ್ಟದ ಅಡಿಕೆಯನ್ನು ಭಾರತಕ್ಕೆ ತರಲಾಗಿದ್ದು ಕಳಪೆ ಅಡಿಕೆಗೆ  ಪಾಲಿಶ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಲಾಖೆಯ ಮಾಹಿತಿ ಪ್ರಕಾರ, ಅಡಿಕೆ ಪೂರೈಕೆಗೆ ಜಿಎಸ್‌ಟಿ ನೋಂದಣಿಗಳು ಹೊಂದಿದ ಕರ್ನಾಟಕ ಮೂಲದ  ಎನ್ಎನ್ ಟ್ರೇಡರ್ಸ್ ಮತ್ತು ಎಸ್‌ಆರ್‌ಎಸ್ ಟ್ರೇಡರ್ಸ್‌ಗೆ ಸೇರಿವೆ. ಎರಡೂ ಸಂಸ್ಥೆಗಳ ಮಾಲೀಕರು ಬಡತನ ರೇಖೆಗಿಂತ ಕೆಳಗಿರುವ ಹಿನ್ನೆಲೆಯಿಂದ ಬಂದವರಾಗಿದ್ದು, ನಕಲಿ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶಂಕಿಸಲಾಗಿದೆ. ತನಿಖೆಯ ವೇಳೆ ಈ ಸಾಗಾಟದ ಹಿಂದೆ  ಕೇರಳದ ಕಾಸರಗೋಡಿನ ಖಾದರ್ ಖಾನ್ ಮತ್ತು ಕರ್ನಾಟಕದ ಮಂಗಳೂರಿನ ಸಮೀರ್ ಖಾನ್ ಇದ್ದಾರೆ ಎಂದು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ದಕ್ಷಿಣ ರಾಜ್ಯಗಳ ಮೂಲಕ ಕಳ್ಳಸಾಗಣೆ ಮಾಡಿದ ಅಡಿಕೆಯನ್ನು ರಾಸಾಯನಿಕ ಹಾಕಿ ಇಲ್ಲಿನ ಅಡಿಕೆಯಂತೆ ನಕಲು ಮಾಡಿ ನಂತರ ಮಾರಾಟ ಮಾಡಲಾಗುತ್ತಿತ್ತು.  ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ. (Photo Credit- India Today)

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜಾನುವಾರುಗಳ ಶೆಡ್ ನಿರ್ಮಾಣಕ್ಕೆ MGNREGA ಯೋಜನೆಯಿಂದ ರೂ 57,000 ಸಹಾಯಧನ
December 4, 2025
9:46 PM
by: ರೂರಲ್‌ ಮಿರರ್ ಸುದ್ದಿಜಾಲ
ಕೂದಲು ಉದುರುವಿಕೆಗೆ ತಡೆಗೆ ಪ್ರೋಟಿನ್ ಭರಿತ ಆಹಾರ
December 4, 2025
9:43 PM
by: ರೂರಲ್‌ ಮಿರರ್ ಸುದ್ದಿಜಾಲ
ನ್ಯಾಯಬೆಲೆ ಅಂಗಡಿಯಲ್ಲಿ ಕ್ಯೂಆರ್ ಸ್ಕ್ಯಾನ್ ಅಳವಡಿಕೆ
December 4, 2025
9:41 PM
by: ರೂರಲ್‌ ಮಿರರ್ ಸುದ್ದಿಜಾಲ
ಬೆನ್ನು, ಮೊಣಕಾಲುಗಳನ್ನು ಬಲಪಡಿಸಲು ನೆರವಾಗುವ ಆಹಾರ ಕ್ರಮಗಳು
December 4, 2025
9:39 PM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror