ಮಹಾರಾಷ್ಟ್ರದ ಧಾರಾಶಿವ ಪ್ರದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ಅಡಿಕೆ ಕಳ್ಳಸಾಗಾಣಿಕೆಯ ದಂಧೆ ಬಯಲಾಗಿದೆ. ಸುಮಾರು 2.25 ಕೋಟಿ ರೂಪಾಯಿ ಮೌಲ್ಯದ ಅಡಿಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.…..ಮುಂದೆ ಓದಿ….
“ದ ರೂರಲ್ ಮಿರರ್.ಕಾಂ” WhatsApp ಚಾನೆಲ್ ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿರಿ….
ಮಹಾರಾಷ್ಟ್ರದ ನಲ್ದುರ್ಗ ಬಳಿಯ ಫುಲ್ವಾಡಿ ಟೋಲ್ ಬಳಿ ಆಹಾರ ಮತ್ತು ಔಷಧ ವಿಭಾಗ ಹಾಗೂ ಧಾರಾಶಿವ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. 12 ಟ್ರಕ್ ವಶಪಡಿಸಿಕೊಳ್ಳಲಾಗಿದೆ. ಅಡಿಕೆಯು ರಾಜಸ್ಥಾನ, ಗುಜರಾತ್ ಮತ್ತು ಕರ್ನಾಟಕದ ಕಡೆಗೆ ಸಾಗುವ ಬಗ್ಗೆ ಮಾಹಿತಿ ಇತ್ತು. ಕಳಪೆ ಅಡಿಕೆಯನ್ನು ಗುಟ್ಕಾ ಹಾಗೂ ಇತರ ಅಡಿಕೆಯ ಜೊತೆ ಬೆರೆಸಲು ಕೊಂಡೊಯ್ಯಲಾಗುತ್ತಿತ್ತು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಸಾಗಾಣಿಗೆದಾರರ ಬಗ್ಗೆ ತನಿಖೆ ಆರಂಭವಾಗಿದೆ. 2 ಕೋಟಿ 25 ಲಕ್ಷ ರೂ. ಮೌಲ್ಯದ ಸದ್ಯ ಇಷ್ಟು ದೊಡ್ಡ ಪ್ರಮಾಣದ ಅಡಿಕೆ ಎಲ್ಲಿಗೆ ಹೋಗುತ್ತಿತ್ತು? ಎಂಬುದು ಪ್ರಶ್ನೆಯಾಗಿದೆ.
“ದ ರೂರಲ್ ಮಿರರ್.ಕಾಂ” WhatsApp ಚಾನೆಲ್ ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿರಿ….