ನಿಲ್ಲದ ಅಡಿಕೆ ಕಳ್ಳಸಾಗಾಣಿಕೆ | ಬರ್ಮಾ ಅಡಿಕೆ ಅಕ್ರಮ ಸಾಗಾಟಕ್ಕೆ ಮತ್ತೆ ತಡೆ |

November 5, 2024
7:06 AM

ಈಶಾನ್ಯ ರಾಜ್ಯಗಳ ಮೂಲಕ ಭಾರತಕ್ಕೆ ಕಳ್ಳದಾರಿಯ ಮೂಲಕ ಸಾಗಾಟವಾಗುವ ಬರ್ಮಾ ಅಡಿಕೆ ಇನ್ನೂ ಸ್ಥಗಿತವಾಗಿಲ್ಲ. ಭಾರತದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಚೇತರಿಕೆ ಕಾಣುತ್ತಿರುವಂತೆಯೇ ಹೆಚ್ಚಿನ ಪ್ರಮಾಣದಲ್ಲಿ ಬರ್ಮಾ ಅಡಿಕೆ ಸಾಗಾಟ ನಡೆಯುತ್ತಿದೆ.ಇದೀಗ ಮತ್ತೆ ಅಸ್ಸಾಂ ರೈಫಲ್ಸ್ ಹಾಗೂ ಗಡಿಭದ್ರತಾ ಸಿಬಂದಿಗಳು ಪ್ರತ್ಯೇಕ ಪ್ರಕರಣಗಳಲ್ಲಿ ಸುಮಾರು 2.4 ಕೋಟಿ ರೂಪಾಯಿ ಮೌಲ್ಯದ ಅಡಿಕೆಯನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

Advertisement
Advertisement
Advertisement
Advertisement

ಅಸ್ಸಾಂ ರೈಫಲ್ಸ್ ಮಣಿಪುರದಲ್ಲಿ  2.4 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಅಡಿಕೆಯನ್ನು ತಡೆದಿದೆ. ಖುಗಾ ಗ್ರಾಮದಲ್ಲಿ ಕಾರ್ಯಾಚರಣೆ ನಡೆದಿದ್ದು, ನಾಲ್ಕು ವಾಹನಗಳಲ್ಲಿ 350 ಚೀಲ ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದ್ದು, ಗಡಿಯಾಚೆಗಿನ ಕಳ್ಳಸಾಗಣೆ ಯತ್ನವನ್ನು ವಿಫಲಗೊಳಿಸಲಾಗಿದೆ.

Advertisement

ಇನ್ನೊಂದು ಪ್ರಕರಣದಲ್ಲಿ  ಅಸ್ಸಾಂ ರೈಫಲ್ಸ್, ಮಿಜೋರಾಂ ಅಬಕಾರಿ ಇಲಾಖೆ ಮತ್ತು ಕೇಂದ್ರ ಕಸ್ಟಮ್ಸ್ ತಂಡವು  ಲಾರಿಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬರ್ಮಾ ಅಡಿಕೆಯನ್ನು ಅಸ್ಸಾಂನ ಚಂಫೈ ಜಿಲ್ಲೆಯಲ್ಲಿ ಪತ್ತೆ ಮಾಡಿದೆ.

ಕಳೆದ ಕೆಲವು ಸಮಯಗಳಿಂದ ಅಡಿಕೆ ಅಕ್ರಮವಾಗಿ ಆಮದು ಮಾಡುವ ಪ್ರಯತ್ನ ನಡೆಯುತ್ತಲೇ ಇದೆ. ಅಕ್ರಮ ಸಾಗಾಟವನ್ನು ಪತ್ತೆ ಮಾಡಿ ತಡೆಯೊಡ್ಡುವ ಕೆಲಸವೂ ಅಸ್ಸಾಂ ರೈಫಲ್ಸ್‌, ಗಡಿಭದ್ರತಾ ಪಡೆ ಮಾಡುತ್ತದೆ. ಹಾಗಿದ್ದರೂ ಪದೇ ಪದೇ ಅಕ್ರಮ ಅಡಿಕೆ ಸಾಗಾಟವಾಗುತ್ತಿದೆ, ಸಾಗಾಟವಾದ ಅಡಿಕೆಯ ಮುಂದಿನ ಹಂತಗಳು ಸುದ್ದಿಯಾಗುವುದಿಲ್ಲ. ಈ ಕಾರಣದಿಂದ ಅಕ್ರಮ ಅಡಿಕೆ ಸಾಗಾಟ ಪ್ರಕರಣದಲ್ಲಿ ವಶಕ್ಕೆ ತೆಗೆದುಕೊಂಡ ಅಡಿಕೆಯನ್ನು ನಾಶ ಮಾಡಬೇಕು ಎಂದು ಅಡಿಕೆ ಬೆಳೆಗಾರರು ಒತ್ತಾಯಿಸಿದ್ದರು.

Advertisement

Assam Rifles have successfully intercepted a massive consignment of illegal arecanuts worth Rs 2.4 crore in Manipur. The operation took place in Khuga village, where 350 sacks of the Arecanuts were seized from four vehicles, foiling a cross-border smuggling attempt.

There have been ongoing attempts to illegally import Arecanuts for some time now. Arecaut farmers have requested that any Arecanuts seized in cases of illegal smuggling be destroyed.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |
February 21, 2025
10:43 AM
by: ಸಾಯಿಶೇಖರ್ ಕರಿಕಳ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |
February 20, 2025
11:34 AM
by: ಸಾಯಿಶೇಖರ್ ಕರಿಕಳ
ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |
February 20, 2025
6:58 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror