ಅಡಿಕೆ ಧಾರಣೆ ಹಾಗೂ ಕಳ್ಳತನ | ಅಡಿಕೆ ಕಳ್ಳತನಕ್ಕೆ ಮರವನ್ನೇ ಕಡಿದ ಕಳ್ಳರು…!

December 7, 2023
8:58 PM

ಅಡಿಕೆ ಧಾರಣೆ ಏರಿಕೆ ಕೃಷಿಕರಿಗೆ ಬಹಳಷ್ಟು ಖುಷಿ ತಂದಿದೆ. ಇದೀಗ ಕೃಷಿಕರಿಗೂ, ಅಡಿಕೆ ವ್ಯಾಪಾರಿಗಳಿಗೂ ಕಳ್ಳರ ಭಯ ಆರಂಭವಾಗಿದೆ. ಒಂದು ಕಡೆ ಅಡಿಕೆ ಕಳ್ಳತನಕ್ಕೆ ಮರವನ್ನೇ ಕಡಿದರೆ, ಇನ್ನೊಂದು ಕಡೆ ಅಡಿಕೆ ಮಂಡಿ ಮಾಲೀಕನಿಗೆ 7 ಕೋಟಿ ರೂಪಾಯಿ ಪಂಗನಾಮ ಹಾಕಿದ್ದರೆ ಅವರದೇ ಸಿಬಂದಿಗಳು..!.

Advertisement
Advertisement
Advertisement

ಶಿವಮೊಗ್ಗ ಎಪಿಎಂಸಿಯಲ್ಲಿ ಅಡಿಕೆ ಮಂಡಿ ಮಾಲೀಕನಿಗೆ  7 ಕೋಟಿ ರೂಪಾಯಿ ವಂಚನೆ ಆಗಿದೆ. ನಕಲಿ ಬಿಲ್‌ ಸೃಷ್ಟಿಸಿ ಅಡಿಕೆ ಮಂಡಿ ಮಾಲೀಕರೊಬ್ಬರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾರೆ. ಮಂಡಿ ಮಾಲೀಕ ಮಂಜುನಾಥ್‌ ವಿನೋಬನಗರ ಠಾಣೆಗೆ ದೂರು ನೀಡಿದ್ದಾರೆ. ಏಳು ವರ್ಷದಿಂದ ಮೇಘನಾ ಮತ್ತು ಮೂರು ವರ್ಷದಿಂದ ಸಹನಾ ಕೆಲಸ ಮಾಡುತ್ತಿದ್ದರು. ಅಂಗಡಿಯ ಎಲ್ಲ ವ್ಯವಹಾರ ಮತ್ತು ಲೆಕ್ಕಪತ್ರಗಳನ್ನು ಈ ಇಬ್ಬರು ಮಹಿಳೆಯರು ನೋಡಿಕೊಳ್ಳುತ್ತಿದ್ದರು. ಮಂಜುನಾಥ್ ಪತ್ನಿಗೆ ಅನಾರೋಗ್ಯ ಇತ್ತು. ಈ ಹಿನ್ನೆಲೆಯಲ್ಲಿ ವ್ಯವಹಾರಗಳನ್ನು ಮಹಿಳೆಯರು ನೋಡಿಕೊಳ್ಳುತ್ತಿದ್ದರು. ಈ ಸಮಯದಲ್ಲಿ ನಕಲಿ ಬಿಲ್‌ ಸೃಷ್ಟಿಸಿ ವಂಚನೆ ಮಾಡಿದ್ದರು.

Advertisement

ಮೂಡಿಗೆರೆ ಬಳಿಯ ಹೆಸಗಲ್‌ ಗ್ರಾಮದಲ್ಲಿ ದಿವಾಕರ್‌ ಎಂಬವರ ತೋಟದಿಂದ ಅಡಿಕೆ ಮರವನ್ನೇ ಕಡಿದು ಅಡಿಕೆ ಕಳ್ಳತನ ಮಾಡಿರುವ ಘಟನೆ ವರದಿಯಾಗಿದೆ. ರಾತ್ರಿ ವೇಳೆ ತೋಟಕ್ಕೆ ನುಗ್ಗಿದ ಕಳ್ಳರು ಅಡಿಕೆ ಮರವನ್ನು ಕಡಿದು ಅದರಿಂದ ಅಡಿಕೆ ಕಳ್ಳತನ ಮಾಡಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಸಮೀಪದ ಸಿಸಿ ಟಿವಿಯಲ್ಲಿ ಈ ಕಳ್ಳತನದ ದೃಶ್ಯ ಸೆರೆಯಾದ ಹಿನ್ನೆಲೆಯಲ್ಲಿ ಖಚಿತವಾಗಿ ದೂರು ನೀಡಲಾಗಿದೆ.ಸುಮಾರು 8 ಮರಗಳನ್ನು ಕಡಿದು ಅಡಿಕೆ ಕಳ್ಳತನ ಮಾಡಲಾಗಿತ್ತು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ನೀರಿಗಾಗಿ ಏಕಾಂಗಿಯಾಗಿ ಸುರಂಗ ತೋಡಿದ ಕೃಷಿಕ | ಹಸಿರಾದ ಕೃಷಿ |
November 25, 2024
8:44 PM
by: The Rural Mirror ಸುದ್ದಿಜಾಲ
ಗುಬ್ಬಚ್ಚಿ ಸಂಕುಲ ರಕ್ಷಣೆಗೆ ಪ್ರಧಾನಿ ಕರೆ | ಬೇಲೂರಿನಲ್ಲಿ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ
November 25, 2024
8:15 PM
by: The Rural Mirror ಸುದ್ದಿಜಾಲ
ಮಹಿಳಾ ಉದ್ಯಮಿಗಳಿಗೆ  ಎನ್‍ಆರ್ ಎಲ್‍ಎಮ್ ಯೋಜನೆ ಸ್ಪೂರ್ತಿಯ ಸೆಲೆಯಾಗಿದೆ
November 25, 2024
8:07 PM
by: The Rural Mirror ಸುದ್ದಿಜಾಲ
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ,  ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ  ಹಾಕಲು ಜಿಲ್ಲಾಡಳಿತ ಸೂಚನೆ
November 25, 2024
8:03 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror