ಅಡಿಕೆ ಧಾರಣೆ ಏರಿಕೆ ಕೃಷಿಕರಿಗೆ ಬಹಳಷ್ಟು ಖುಷಿ ತಂದಿದೆ. ಇದೀಗ ಕೃಷಿಕರಿಗೂ, ಅಡಿಕೆ ವ್ಯಾಪಾರಿಗಳಿಗೂ ಕಳ್ಳರ ಭಯ ಆರಂಭವಾಗಿದೆ. ಒಂದು ಕಡೆ ಅಡಿಕೆ ಕಳ್ಳತನಕ್ಕೆ ಮರವನ್ನೇ ಕಡಿದರೆ, ಇನ್ನೊಂದು ಕಡೆ ಅಡಿಕೆ ಮಂಡಿ ಮಾಲೀಕನಿಗೆ 7 ಕೋಟಿ ರೂಪಾಯಿ ಪಂಗನಾಮ ಹಾಕಿದ್ದರೆ ಅವರದೇ ಸಿಬಂದಿಗಳು..!.
ಶಿವಮೊಗ್ಗ ಎಪಿಎಂಸಿಯಲ್ಲಿ ಅಡಿಕೆ ಮಂಡಿ ಮಾಲೀಕನಿಗೆ 7 ಕೋಟಿ ರೂಪಾಯಿ ವಂಚನೆ ಆಗಿದೆ. ನಕಲಿ ಬಿಲ್ ಸೃಷ್ಟಿಸಿ ಅಡಿಕೆ ಮಂಡಿ ಮಾಲೀಕರೊಬ್ಬರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾರೆ. ಮಂಡಿ ಮಾಲೀಕ ಮಂಜುನಾಥ್ ವಿನೋಬನಗರ ಠಾಣೆಗೆ ದೂರು ನೀಡಿದ್ದಾರೆ. ಏಳು ವರ್ಷದಿಂದ ಮೇಘನಾ ಮತ್ತು ಮೂರು ವರ್ಷದಿಂದ ಸಹನಾ ಕೆಲಸ ಮಾಡುತ್ತಿದ್ದರು. ಅಂಗಡಿಯ ಎಲ್ಲ ವ್ಯವಹಾರ ಮತ್ತು ಲೆಕ್ಕಪತ್ರಗಳನ್ನು ಈ ಇಬ್ಬರು ಮಹಿಳೆಯರು ನೋಡಿಕೊಳ್ಳುತ್ತಿದ್ದರು. ಮಂಜುನಾಥ್ ಪತ್ನಿಗೆ ಅನಾರೋಗ್ಯ ಇತ್ತು. ಈ ಹಿನ್ನೆಲೆಯಲ್ಲಿ ವ್ಯವಹಾರಗಳನ್ನು ಮಹಿಳೆಯರು ನೋಡಿಕೊಳ್ಳುತ್ತಿದ್ದರು. ಈ ಸಮಯದಲ್ಲಿ ನಕಲಿ ಬಿಲ್ ಸೃಷ್ಟಿಸಿ ವಂಚನೆ ಮಾಡಿದ್ದರು.
ಮೂಡಿಗೆರೆ ಬಳಿಯ ಹೆಸಗಲ್ ಗ್ರಾಮದಲ್ಲಿ ದಿವಾಕರ್ ಎಂಬವರ ತೋಟದಿಂದ ಅಡಿಕೆ ಮರವನ್ನೇ ಕಡಿದು ಅಡಿಕೆ ಕಳ್ಳತನ ಮಾಡಿರುವ ಘಟನೆ ವರದಿಯಾಗಿದೆ. ರಾತ್ರಿ ವೇಳೆ ತೋಟಕ್ಕೆ ನುಗ್ಗಿದ ಕಳ್ಳರು ಅಡಿಕೆ ಮರವನ್ನು ಕಡಿದು ಅದರಿಂದ ಅಡಿಕೆ ಕಳ್ಳತನ ಮಾಡಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಸಮೀಪದ ಸಿಸಿ ಟಿವಿಯಲ್ಲಿ ಈ ಕಳ್ಳತನದ ದೃಶ್ಯ ಸೆರೆಯಾದ ಹಿನ್ನೆಲೆಯಲ್ಲಿ ಖಚಿತವಾಗಿ ದೂರು ನೀಡಲಾಗಿದೆ.ಸುಮಾರು 8 ಮರಗಳನ್ನು ಕಡಿದು ಅಡಿಕೆ ಕಳ್ಳತನ ಮಾಡಲಾಗಿತ್ತು.
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ…
ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಸೊಬಗು ಕಳೆಗಟ್ಟಿದೆ. ಇಂದು ಕಡಲೆಕಾಯಿ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಗಳ ಹಾವಳಿ ತಡೆಯಲು ಸರ್ಕಾರದ ಸಚಿವರು ಹಾಗೂ ಅರಣ್ಯ ಇಲಾಖೆ…
ಅಡಿಕೆ ಹಳದಿ ಎಲೆರೋಗ ಬಾಧಿಸಿದ ತೋಟದ ಕೃಷಿಕ ಶಂಕರಪ್ರಸಾದ್ ರೈ ಅವರು ಕೃಷಿ…
ಅಡಿಕೆ ಕೃಷಿಯ ಜೊತೆಗೆ ಮಿಶ್ರ ಕೃಷಿಯನ್ನು ಏಕೆ ಮಾಡಬೇಕು..? ಯಾವ ಕೃಷಿಯನ್ನು ಮಾಡಬಹುದು..?…
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…