ಅಡಿಕೆ ತಳಿ ಮತ್ತು ಅಡಿಕೆ ಬೆಳೆಯಲ್ಲಿ ಉತ್ತಮ ಬೇಸಾಯ ಕ್ರಮ | ತರಬೇತಿ ಕಾರ್ಯಕ್ರಮ

March 24, 2025
7:32 AM

ಭಾರತೀಯ ಕೃಷಿ ಸಂಶೋಧನಾ ಪರಿಷತ್ತು ಐಸಿಎಆರ್ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ಪ್ರಾಂತೀಯ ಕ್ಷೇತ್ರ ವಿಟ್ಲದಲ್ಲಿ ಅಡಿಕೆ ತಳಿಗಳು ಮತ್ತು ಅಡಿಕೆ ಬೆಳೆಯಲ್ಲಿ ಉತ್ತಮ ಬೇಸಾಯ ಕ್ರಮಗಳ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಎಮ್ ಕೆ ರಾಜೇಶ್, ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕರಾದ ಜೆ.ಡಿ ಅಡಿಗ ,ವಿಜ್ಞಾನಿಗಳಾದ  ನಾಗರಾಜ್ ಎನ್ ಆರ್ , ಇಲ್ಲೈನಾ ಅಪ್ಸರಾ , ಮಧು ಹಾಗೂ ಇತರ ವಿಜ್ಞಾನಿಗಳು ಭಾಗವಹಿಸಿದ್ದರು.

Advertisement

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ವಿಜ್ಞಾನಿಗಳಾದ ಡಾ. ನಾಗರಾಜ ಎನ್ ಆರ್ ಮಾತನಾಡಿದರು. ತರಬೇತಿಯಲ್ಲಿ ಅಡಿಕೆಯ ವಿವಿಧ ತಳಿಗಳು ಮತ್ತು ಸಂಕಲನ ತಳಿಗಳು, ಗಿಡಗಳಿಗೆ ಬಾಧಿಸುವ ರೋಗಗಳು ಮತ್ತು ಕೀಟಗಳು ಅವುಗಳ ನಿವಾರಣೋಪಾಯ , ಗಿಡಗಳಿಗೆ ಬಳಸಬಹುದಾದ ಗೊಬ್ಬರಗಳು, ಗಿಡಗಳ ರಕ್ಷಣೆ ಮತ್ತು ಪೋಷಣೆ, ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯುವ ವಿಧಾನ ಮುಂತಾದ ವಿಚಾರಗಳ ಬಗ್ಗೆ ವಿಜ್ಞಾನಿಗಳು ಮಾಹಿತಿ ನೀಡಿದರು.
ತರಬೇತಿಯ ಬಳಿಕ ಕೃಷಿಕರಿಗೆ ಅಡಿಕೆ ಹಾಗೂ ಕೋಕೋ ಗಿಡಗಳ ವಿತರಣೆ ಮಾಡಲಾಯಿತು. ತರಬೇತಿ ಪಡೆದ ರೈತರಿಗೆ ಪ್ರಮಾಣ ಪತ್ರ ಸಂಸ್ಥೆಯ ವತಿಯಿಂದ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಂಪಾಜೆ ಗ್ರಾಮದ ಕೃಷಿಸಖಿ ಮೋಹಿನಿ ವಿಶ್ವನಾಥ್ (ನಿಶಾ), ಆಲೆಟ್ಟಿ ಗ್ರಾಮದ ಕೃಷಿಸಖಿ ಲೋಚನ ಭಾಗವಹಿಸಿದ್ದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರಾಷ್ಟ್ರೀಯ ಭದ್ರತೆ | ಪ್ರಧಾನಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ | ಹಲವು ವಿಷಯಗಳ ಕುರಿತು ಚರ್ಚೆ
May 8, 2025
8:57 PM
by: The Rural Mirror ಸುದ್ದಿಜಾಲ
ರಾಜ್ಯದ 6 ಜಿಲ್ಲೆಗಳಲ್ಲಿ ಶೀಥಲೀಕರಣ ಘಟಕ ನಿರ್ಮಾಣ
May 8, 2025
8:46 PM
by: The Rural Mirror ಸುದ್ದಿಜಾಲ
ಕೇಂದ್ರದ ಬೆಂಬಲಕ್ಕಾಗಿ  ವಿಶೇಷ ಜಾಥಾ | ಪಕ್ಷಾತೀತವಾಗಿ  ಬೆಂಬಲ
May 8, 2025
8:32 PM
by: The Rural Mirror ಸುದ್ದಿಜಾಲ
ಆಪರೇಷನ್ ಸಿಂದೂರ ಕಾರ್ಯಾಚರಣೆ | ಸರ್ವ ಪಕ್ಷಗಳ ಸಭೆಯಲ್ಲಿ ಬೆಂಬಲ |
May 8, 2025
8:25 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group