ಭಾರತೀಯ ಕೃಷಿ ಸಂಶೋಧನಾ ಪರಿಷತ್ತು ಐಸಿಎಆರ್ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ಪ್ರಾಂತೀಯ ಕ್ಷೇತ್ರ ವಿಟ್ಲದಲ್ಲಿ ಅಡಿಕೆ ತಳಿಗಳು ಮತ್ತು ಅಡಿಕೆ ಬೆಳೆಯಲ್ಲಿ ಉತ್ತಮ ಬೇಸಾಯ ಕ್ರಮಗಳ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಎಮ್ ಕೆ ರಾಜೇಶ್, ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕರಾದ ಜೆ.ಡಿ ಅಡಿಗ ,ವಿಜ್ಞಾನಿಗಳಾದ ನಾಗರಾಜ್ ಎನ್ ಆರ್ , ಇಲ್ಲೈನಾ ಅಪ್ಸರಾ , ಮಧು ಹಾಗೂ ಇತರ ವಿಜ್ಞಾನಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ವಿಜ್ಞಾನಿಗಳಾದ ಡಾ. ನಾಗರಾಜ ಎನ್ ಆರ್ ಮಾತನಾಡಿದರು. ತರಬೇತಿಯಲ್ಲಿ ಅಡಿಕೆಯ ವಿವಿಧ ತಳಿಗಳು ಮತ್ತು ಸಂಕಲನ ತಳಿಗಳು, ಗಿಡಗಳಿಗೆ ಬಾಧಿಸುವ ರೋಗಗಳು ಮತ್ತು ಕೀಟಗಳು ಅವುಗಳ ನಿವಾರಣೋಪಾಯ , ಗಿಡಗಳಿಗೆ ಬಳಸಬಹುದಾದ ಗೊಬ್ಬರಗಳು, ಗಿಡಗಳ ರಕ್ಷಣೆ ಮತ್ತು ಪೋಷಣೆ, ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯುವ ವಿಧಾನ ಮುಂತಾದ ವಿಚಾರಗಳ ಬಗ್ಗೆ ವಿಜ್ಞಾನಿಗಳು ಮಾಹಿತಿ ನೀಡಿದರು.
ತರಬೇತಿಯ ಬಳಿಕ ಕೃಷಿಕರಿಗೆ ಅಡಿಕೆ ಹಾಗೂ ಕೋಕೋ ಗಿಡಗಳ ವಿತರಣೆ ಮಾಡಲಾಯಿತು. ತರಬೇತಿ ಪಡೆದ ರೈತರಿಗೆ ಪ್ರಮಾಣ ಪತ್ರ ಸಂಸ್ಥೆಯ ವತಿಯಿಂದ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಂಪಾಜೆ ಗ್ರಾಮದ ಕೃಷಿಸಖಿ ಮೋಹಿನಿ ವಿಶ್ವನಾಥ್ (ನಿಶಾ), ಆಲೆಟ್ಟಿ ಗ್ರಾಮದ ಕೃಷಿಸಖಿ ಲೋಚನ ಭಾಗವಹಿಸಿದ್ದರು.
ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗಿದ್ದು, ಇಂದು ರಾತ್ರಿ ಮಧ್ಯಪ್ರದೇಶ ತಲುಪುವ ನಿರೀಕ್ಷೆ…
ತೆಂಗು ಬೆಳೆ ಬಾಧಿಸುವ ಕೀಟಗಳನ್ನು ಹತೋಟಿಗೆ ತರಲು ಕ್ರಮವಹಿಸುವುದಾಗಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ…
ಕೋಲಾರ ಜಿಲ್ಲಾ ಹಾಲು ಒಕ್ಕೂಟದಲ್ಲಿ ಪ್ರತಿದಿನ 10 ಲಕ್ಷಕ್ಕೆ ಏರಿಸುವುದು ನೂತನ ಆಡಳಿತ…
ಪ್ರಣಾಮ್ ಎಂ ಪಿ, ಮಠದಗದ್ದೆ, 4 ನೇ ತರಗತಿ, ಕೆಪಿಎಸ್ ಶಾಲೆ, ಬೇಗಾರ್, …
ನಿರ್ವಿ ಜಿ ಎಂ, 2 ನೇ ತರಗತಿ, ಸರ್ಕಾರಿ ಶಾಲೆ , ಬಳ್ಪ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490