ಅಡಿಕೆ ಹಳದಿ ಎಲೆರೋಗ ನಿರೋಧಕ ತಳಿ ಅಭಿವೃದ್ದಿ | ಮರಗಳ ಗುರುತಿಸುವಿಕೆ ಕಾರ್ಯ ಆರಂಭ | ರೋಗ ನಿರೋಧಕ ಮರ ಗುರುತಿಸುವುದು ಹೇಗೆ ?

October 19, 2021
10:55 AM

ಅಡಿಕೆ ಹಳದಿ ಎಲೆರೋಗ ನಿರೋಧಕ ತಳಿ ಅಭಿವೃದ್ಧಿ ಹಿನ್ನೆಲೆಯಲ್ಲಿ ಸಿಪಿಸಿಆರ್‌ಐ ವಿಜ್ಞಾನಿಗಳು ರೋಗ ನಿರೋಧಕ ಗುಣ ಇರುವ ಮರಗಳ ಗುರುತಿಸುವಿಕೆ ಕಾರ್ಯ ಆರಂಭಿಸಿದ್ದಾರೆ. 

Advertisement

ಅಡಿಕೆ ಹಳದಿ ಎಲೆರೋಗಕ್ಕೆ ಸುಳ್ಯ ತಾಲೂಕಿನ ಸಂಪಾಜೆ ಹಾಗೂ ಕೊಡಗು ಜಿಲ್ಲೆಯ ಚೆಂಬು ಪ್ರದೇಶವು ಹಾಟ್‌ಸ್ಫಾಟ್‌ ಎಂದು ಗುರುತಿಸಲಾಗಿತ್ತು. ಹೀಗಾಗಿ ಈ ಪ್ರದೇಶದಲ್ಲಿ ಈಗ ಮರಗಳ ಗುರುತಿಸುವಿಕೆ ಕಾರ್ಯ ಆರಂಭವಾಗಿದೆ. ಈ ಮರಗಳ ಗುರುತಿಸುವಿಕೆ ಈಗ ವಿಜ್ಞಾನಿಗಳ ಹಾಗೂ ಕೃಷಿಕರ ಪಾಲಿಗೆ ಸವಾಲಿನ ಕೆಲಸವೂ ಹೌದು. ಈ ಹಂತದಲ್ಲಿ ಲೋಪವಾದರೆ ಇಡೀ ಅಧ್ಯಯನ ಹಾಗೂ ರೋಗ ನಿರೋಧಕ ಗಿಡ ಅಭಿವೃದ್ಧಿ ಮೇಲೆಯೂ ಪರಿಣಾಮವಾಗಬಹುದು. ಅಡಿಕೆ ಮರದಲ್ಲಿ ಹಳದಿ ಎಲೆ ರೋಗ ನಿರೋಧಕ ಗುಣ ಇದೆಯೇ ಎಂದು ಪರೀಕ್ಷಿಸುವ ಯಾವುದೇ ವಿಧಾನ ಸದ್ಯಕ್ಕೆ ಲಭ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹಳದಿ ಎಲೆ ರೋಗ ನಿರೋಧಕ ಶಕ್ತಿ ಇರುವ ಮರ ಎಂದು ಗುರುತಿಸುವ ವಿಧಾನ ಹೇಗೆ ? ಇದಕ್ಕಾಗಿ ಒಂದಷ್ಟು ಮಾನದಂಡಗಳನ್ನು ವಿಜ್ಞಾನಿಗಳು ಹಾಕಿಕೊಂಡಿದ್ದಾರೆ. ಅದಾದ ಬಳಿಕ ಪ್ರಯೋಗಾಲಯದಲ್ಲಿ ಈ ಬಗ್ಗೆ ಅಧ್ಯಯನ ನಡೆದು ರೋಗ ಇಲ್ಲದೇ ಇರುವುದರ ಬಗ್ಗೆ ಖಚಿತ ಪಡಿಸಿಕೊಳ್ಳಲಾಗುತ್ತದೆ. ಸದ್ಯ ಮರ ಗುರುತಿಸಿಕೊಳ್ಳಲು ವಿಜ್ಞಾನಿಗಳಿ ಕೆಲವೊಂದು ಪಟ್ಟಿ ಮಾಡಿದ್ದಾರೆ.

  • ಮರಗಳನ್ನು ಹಳದಿ ರೋಗ ಹಾಟ್‌ಸ್ಫಾಟ್‌ ಪ್ರದೇಶದಲ್ಲಿಯೇ  ಆಯ್ದು ಕೊಳ್ಳ ಬೇಕು.ಇದು ಅನೇಕ ವರ್ಷಗಳಿಂದ ಈ ರೋಗದಿಂದ ಬಳಲಿದ ತೋಟವಾಗಿರಬೇಕು
  •  ಪರಿಶೀಲಿಸ ಬೇಕಾದ ತೋಟಕ್ಕೆ ಕನಿಷ್ಟ 25 ವರ್ಷಗಳಾದರೂ ಆಗಿರಬೇಕು.
  •  ತೋಟದ 90 ಶೇಕಡಾ ಮರಗಳು ರೋಗ ಪೀಡಿತವಾಗಿರಬೇಕು
  • ತೋಟದಲ್ಲಿ ರೋಗ ಕಾಣಿಸಿಕೊಂಡು 15-20 ವರ್ಷಗಳು ಆಗಿರಬೇಕು.
  •  ಪರಿಶೀಲಿಸ ಬೇಕಾದ ಮರಗಳಲ್ಲಿ ಅಡಿಕೆ,ಸಿಂಗಾರ ಇರಬೇಕು.
  •  ಪರಿಶೀಲಿಸ ಬೇಕಾದ ಮರಗಳಲ್ಲಿ ರೋಗದ ಲಕ್ಷಣಗಳು ಕಾಣಿಸಬಾರದು.ಮೇಲ್ನೋಟಕ್ಕೆ ಆರೋಗ್ಯವಂತ ಮರ ಆಗಿರ ಬೇಕು.
  • ಅಂದರೆ ಸತತವಾಗಿ ರೋಗಕಾರಕಗಳಿಂದ ದಾಳಿಗೆ ಒಳಗಾಗುತ್ತಿದ್ದರೂ ಅದನ್ನು ದೀರ್ಘಾವಧಿಯಲ್ಲಿ ಯಶಸ್ವಿಯಾಗಿ ಎದುರಿಸಿದ ಮರ ಅದಾಗಿರ ಬೇಕು.ಇಂತಹ ಮರಗಳನ್ನು ಗುರುತು ಹಾಕಿ ಪ್ರಥಮ ಹಂತದ ಪರಿಶೀಲನೆಗಾಗಿ ಆಯ್ದು ಕೊಳ್ಳುವುದು.
  • ಸುಮಾರು ಎರಡು ವರ್ಷ ಆಯ್ದು ಕೊಂಡ ಮರಗಳನ್ನು ಹಲವು ವಿಧದ ತಪಾಸಣೆಗೆ ಒಳ ಪಡಿಸಲಿಕ್ಕಿದೆ.ಅದರಲ್ಲಿ ಯಶಸ್ವಿಯಾದ ಮರಗಳನ್ನಷ್ಟೇ ಅಂತಿಮವಾಗಿ ಕೃತಕ ಪರಾಗ ಸ್ಪರ್ಷಕ್ಕಾಗಿ ಆಯ್ದು ಕೊಳ್ಳ ಬೇಕಿದೆ.
  • ಈ ಮಾದರಿಯ ಎಷ್ಟು ಹೆಚ್ಚು ಮರಗಳು ಪರಿಶೀಲನೆಗೆ ಸಿಗುತ್ತವೋ ಅಷ್ಟು ಯೋಜನೆಯ ಯಶಸ್ಸು ಹೆಚ್ಚುತ್ತದೆ.
    ಸಂಪಾಜೆ ,ಚೆಂಬು ಗ್ರಾಮದ ಆಸು ಪಾಸು ಇಂತಹ ಮರಗಳು ಇದ್ದರೆ ಯೋಜನೆಯ ಯಶಸ್ಸಿಗೆ  ಸಹಾಯಕವಾಗುತ್ತದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಜಾಗತಿಕವಾಗಿ ಹವಾಮಾನ ವೈಪರೀತ್ಯ | ಒಂದೆಡೆ ಭಾರೀ ಮಳೆ- ಇನ್ನೊಂದೆಡೆ ಪ್ರವಾಹ – ಮತ್ತೊಂದೆಡೆ ಕಾಡ್ಗಿಚ್ಚು
July 19, 2025
9:40 PM
by: ದ ರೂರಲ್ ಮಿರರ್.ಕಾಂ
ಧನ ಧಾನ್ಯ ಕೃಷಿ ಯೋಜನೆ ಘೋಷಣೆ | ಯೋಜನೆಗೆ  ರೈತಾಪಿ ವರ್ಗದಿಂದ ಸ್ವಾಗತ
July 19, 2025
9:22 PM
by: The Rural Mirror ಸುದ್ದಿಜಾಲ
ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ರೈಲ್ವೆ ಕಾಮಗಾರಿ – 43 ಸಾವಿರ ಕೋ. ರೂ. ವೆಚ್ಚದಲ್ಲಿ ಶೀಘ್ರ ಪೂರ್ಣ
July 19, 2025
9:09 PM
by: ದ ರೂರಲ್ ಮಿರರ್.ಕಾಂ
ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ಮಳೆ
July 19, 2025
9:03 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group