ಅಡಿಕೆ ಹಳದಿ ಎಲೆ ರೋಗ ಸಮಸ್ಯೆ ಅಡಿಕೆ ಬೆಳೆಗಾರರನ್ನು ಕಾಡುತ್ತಲೇ ಇದೆ. ದಕ್ಷಿಣ ಕನ್ನಡ ಜಿಲ್ಲೆ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿದೆಡೆ ಹಳದಿ ಎಲೆ ರೋಗ ವಿಸ್ತರಣೆಯಾಗಿದೆ. ಕಳೆದ ವರ್ಷದ ರಾಜ್ಯ ಬಜೆಟ್ ನಲ್ಲಿ 25 ಕೋಟಿ ಅನುದಾನದಲ್ಲಿ ಹಳದಿ ಎಲೆರೋಗ ಸಂಶೋಧನೆ, ಅಧ್ಯಯನಕ್ಕೆ ಮೀಸಲಿಡಲಾಗಿತ್ತು. ಇನ್ನೂ ಹೆಚ್ಚಿನ ಅಧ್ಯಯನ, ಸಂಶೋಧನೆ ಹಾಗೂ ಪರಿಹಾರಕ್ಕೆ ಅಗತ್ಯ ಅನುದಾನದ ನಿರೀಕ್ಷೆ ಬೆಳೆಗಾರರಿಗೆ ಇತ್ತು. ಈ ಬಾರಿಯ ಬಜೆಟ್ ನಲ್ಲಿ ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ 33,700 ಕೋಟಿ ಅನುದಾನ ಇದ್ದರೂ ಅಡಿಕೆ ಹಳದಿ ಎಲೆರೋಗಕ್ಕೆ ಬಜೆಟ್ ನಲ್ಲಿ ಯಾವುದೇ ಪ್ರಸ್ತಾಪ ಕಾಣಲಿಲ್ಲ. ಹೆಚ್ಚಿನ ಅಧ್ಯಯನ, ಸಂಶೋಧನೆ ಹಾಗೂ ಬೆಳೆಗಾರರಿಗೆ ಪರಿಹಾರ ಅಥವಾ ಪರ್ಯಾಯ ಬೆಳೆಗೆ ಸಹಾಯಕ್ಕಾಗಿ ಹೆಚ್ಚಿನ ಅನುದಾನಗಳ ಅವಶ್ಯಕತೆ ಇತ್ತು ಎಂಬುದು ಒತ್ತಾಯ.
ಅಡಿಕೆ ತೋಟದಲ್ಲಿ ಹಳದಿ ಎಲೆ ರೋಗ ಎಂದು 1914 ರಲ್ಲಿ ಗುರುತಿಸಿದ ನಂತರ ವಿವಿಧ ಪ್ರಯತ್ನ ನಡೆಯುತ್ತಲೇ ಇತ್ತು. ಈ ರೋಗಕ್ಕೆ ಫೈಟೋಪ್ಲಾಸ್ಮಾ ಕಾರಣ ಎಂದು ಗುರುತಿಸಿದ ಬಳಿಕ ಈ ಬಗ್ಗೆ ವಿಜ್ಞಾನಿಗಳು ಹೆಚ್ಚಿನ ಅಧ್ಯಯನ ನಡೆಸುತ್ತಲೇ ಇದ್ದಾರೆ.ಅದಾದ ಬಳಿಕ ಅಡಿಕೆ ಸಂಶೋಧನಾ ಕೇಂದ್ರವು 2000 ಇಸವಿಯಲ್ಲಿ ಹಳದಿ ಎಲೆ ರೋಗ ನಿಯಂತ್ರಿಸ ಬೇಕಾದರೆ ರೋಗ ಪ್ರತಿರೋಧಕ ತಳಿ ಅಭಿವೃದ್ಧಿ ಕಾರ್ಯ ನಡೆಯಬೇಕು ಎಂದು ಹೇಳಿತ್ತು, ಆ ಬಗ್ಗೆಯೂ ಪ್ರಯತ್ನ ನಡೆಯುತ್ತಿದೆ. ಈ ನಡುವೆ ಪ್ಲಾಸ್ಟಿಕ್ ಮಲ್ಚಿಂಗ್ ಸೇರಿದಂತೆ ವಿವಿಧ ಮಾರ್ಗಗಳ ಬಗ್ಗೆಯೂ ವಿಜ್ಞಾನಿಗಳು ಪ್ರಯತ್ನ ಮಾಡುತ್ತಿದ್ದರು. ಈ ನಡುವೆ ಕೃಷಿಕರೂ ಅಡಿಕೆಯ ಪರ್ಯಾಯ ಕೃಷಿ ಬಗ್ಗೆಯೂ ಚಿಂತನೆ ನಡೆಸಿ, ತಾಳೆ, ರಬ್ಬರ್ ಬೆಳೆಯ ಕಡೆಗೂ ಗಮನಹರಿಸಿದರು. ಆದರೆ ಈಗ ಅಡಿಕೆಗೆ ಪರ್ಯಾಯ ಅಡಿಕೆಯೇ ಎಂಬ ಸ್ಥಿತಿ ಇದೆ.
ಮಧ್ಯ ದಕ್ಷಿಣ ಕೇರಳದಲ್ಲಿ ಕಾಣಿಸಿಕೊಂಡ ಹಳದಿ ಎಲೆ ರೋಗ ಆ ಭಾಗವನ್ನು ಆಕ್ರಮಿಸಿಕೊಂಡು,ಕೇರಳದ ವಯನಾಡು ಪ್ರದೇಶದಲ್ಲಿ ಮುನ್ನಡೆದು ನಂತರ ರಾಜ್ಯದ ಗೈದು ಸುಳ್ಯ,ಕೊಪ್ಪ, ಶೃಂಗೇರಿ ತಾಲೂಕುಗಳಲ್ಲಿ ಹರಡಿತು. ಇದೀಗ ಇನ್ನೂ ವಿಸ್ತರಣೆಯಾಗಿ ಕಡಬ, ಪುತ್ತೂರು, ವಿಟ್ಲ ಮೊದಲಾದ ಕಡೆಗಳಲ್ಲೂ ವಿಸ್ತರಣೆಯಾಗಿದೆ. ಅದರ ಜೊತೆಗೆ ರಾಜ್ಯದ ವಿವಿದೆಡೆಯೂ ಹಳದಿ ಎಲೆ ರೋಗದ ಲಕ್ಷಣಗಳು ಗೋಚರವಾಗುತ್ತಿವೆ ಎಂದು ವಿಜ್ಞಾನಿಗಳು ಸಂದೇಹ ಪಟ್ಟಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಅಡಿಕೆ ಹಳದಿ ಎಲೆ ಹಳದಿ ರೋಗ ನಿರೋಧಕ ತಳಿ ಅಭಿವೃದ್ಧಿ ಕಡೆಗೆ ಕೇಂದ್ರೀಯ ಅಡಿಕೆ ಸಂಶೋಧನಾ ಸಂಸ್ಥೆ ವಿಟ್ಲದ ಸಿಪಿಸಿಆರ್ ಐ ವಿಜ್ಞಾನಿಗಳು ಮುಂದಟಿ ಇಟ್ಟಿದ್ದಾರೆ. ಈಗಾಗಲೇ ಒಂದಷ್ಟು ಕೆಲಸ ಕಾರ್ಯಗಳು ನಡೆದಿದೆ. ಈ ನಡುವೆ ಟಿಶ್ಯೂ ಕಲ್ಚಟರ್ ಗಿಡಗಳ ಅಭಿವೃದ್ಧಿಯ ಪ್ರಯತ್ನವನ್ನು ಸಿಪಿಸಿಆರ್ ಐ ಮಾಡುತ್ತಿದೆ.
ಈ ಸಂದರ್ಭದಲ್ಲಿ ಅಡಿಕೆ ಹಳದಿ ಎಲೆ ರೋಗ ಸಂಶೋಧನೆ ಹಾಗೂ ಅಧ್ಯಯನಕ್ಕೆ ಎಂದು ಯಡಿಯೂರಪ್ಪ ಸರ್ಕಾರವು ಕಳೆದ ವರ್ಷದ ಬಜೆಟ್ ನಲ್ಲಿ 25 ಕೋಟಿ ರೂಪಾಯಿ ಮೀಸಲಿಟ್ಟಿದೆ. ಇಂದಿಗೂ ಈ ಅನುದಾನದ ಬಳಕೆಯ ಕಡೆಗೆ ಸೂಕ್ತವಾದ ಹೆಜ್ಜೆ ಆಗಿಲ್ಲ. ರಾಜ್ಯದ ಸುಮಾರು ಅರ್ಧ ಭಾಗದಲ್ಲಿರುವ ಅಡಿಕೆ ಬೆಳೆಗೆ ಕಾಡಿರುವ ಹಳದಿ ಎಲೆರೋಗದ ಪರಿಹಾರಕ್ಕೆ ಹಾಗೂ ಕೆಲವು ಕಡೆ ಪರ್ಯಾಯ ಬೆಳೆಗೆ ಸೂಕ್ತವಾದ ಪರಿಹಾರ, ಸಹಾಯ ನೀಡಲು ಇನ್ನೂ ಕನಿಷ್ಟ 50 ಕೋಟಿ ಅನುದಾನದ ನಿರೀಕ್ಷೆ ಇತ್ತು. ಆದರೆ ಈ ಬಾರಿಯ ಬಜೆಟ್‌ನಲ್ಲಿ ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ 33,700 ಕೋಟಿ ಅನುದಾನ ಮೀಸಲಿಡಲಾಗಿದೆ, ಇದರಲ್ಲಿ ಅಡಿಕೆ ಹಳದಿ ಎಲೆರೋಗಕ್ಕೂ ಅಗತ್ಯವಾಗಿ ಪ್ರತ್ಯೇಕವಾಗಿ ಮೀಸಲಿಟ್ಟಿರುವುದು ಕಂಡುಬಂದಿಲ್ಲ. ಮುಂದಿನ ಪೂರಕ ಬಜೆಟ್ ನಲ್ಲಿ ಕನಿಷ್ಟ 50 ಕೋಟಿ ಅನುದಾನ ಹೆಚ್ಚುವರಿಯಾಗಿ ಇರಿಸುವ ಅವಶ್ಯಕತೆ ಇದೆ ಎಂಬುದು ಅಡಿಕೆ ಹಳದಿ ಎಲೆ ರೋಗದ ಬಗ್ಗೆ ಕೆಲಸ ಮಾಡುತ್ತಿರುವ ಕೃಷಿಕ ರಮೇಶ್ ದೇಲಂಪಾಡಿ ಅವರ ಅಭಿಪ್ರಾಯ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…