Advertisement
MIRROR FOCUS

ಅಡಿಕೆ ಹಳದಿ ಎಲೆ ರೋಗ ಪರಿಹಾರ | 25 ಕೋಟಿಗೆ ಸೀಮಿತವಾಯಿತೇ? | ಸಂಶೋಧನೆ – ಅಧ್ಯಯನ- ಪರಿಹಾರ ಹೇಗೆ ? |

Share

ಅಡಿಕೆ ಹಳದಿ ಎಲೆ ರೋಗ ಸಮಸ್ಯೆ ಅಡಿಕೆ ಬೆಳೆಗಾರರನ್ನು ಕಾಡುತ್ತಲೇ ಇದೆ. ದಕ್ಷಿಣ ಕನ್ನಡ ಜಿಲ್ಲೆ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿದೆಡೆ ಹಳದಿ ಎಲೆ ರೋಗ ವಿಸ್ತರಣೆಯಾಗಿದೆ. ಕಳೆದ ವರ್ಷದ ರಾಜ್ಯ ಬಜೆಟ್‌ ನಲ್ಲಿ 25 ಕೋಟಿ ಅನುದಾನದಲ್ಲಿ ಹಳದಿ ಎಲೆರೋಗ ಸಂಶೋಧನೆ, ಅಧ್ಯಯನಕ್ಕೆ ಮೀಸಲಿಡಲಾಗಿತ್ತು. ಇನ್ನೂ ಹೆಚ್ಚಿನ ಅಧ್ಯಯನ, ಸಂಶೋಧನೆ ಹಾಗೂ ಪರಿಹಾರಕ್ಕೆ ಅಗತ್ಯ ಅನುದಾನದ ನಿರೀಕ್ಷೆ ಬೆಳೆಗಾರರಿಗೆ ಇತ್ತು. ಈ ಬಾರಿಯ ಬಜೆಟ್‌ ನಲ್ಲಿ ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ 33,700 ಕೋಟಿ ಅನುದಾನ ಇದ್ದರೂ ಅಡಿಕೆ ಹಳದಿ ಎಲೆರೋಗಕ್ಕೆ  ಬಜೆಟ್‌ ನಲ್ಲಿ ಯಾವುದೇ ಪ್ರಸ್ತಾಪ ಕಾಣಲಿಲ್ಲ. ಹೆಚ್ಚಿನ ಅಧ್ಯಯನ, ಸಂಶೋಧನೆ ಹಾಗೂ ಬೆಳೆಗಾರರಿಗೆ ಪರಿಹಾರ ಅಥವಾ ಪರ್ಯಾಯ ಬೆಳೆಗೆ ಸಹಾಯಕ್ಕಾಗಿ ಹೆಚ್ಚಿನ ಅನುದಾನಗಳ ಅವಶ್ಯಕತೆ ಇತ್ತು ಎಂಬುದು ಒತ್ತಾಯ.

Advertisement
Advertisement

ಅಡಿಕೆ ತೋಟದಲ್ಲಿ ಹಳದಿ ಎಲೆ ರೋಗ ಎಂದು 1914 ರಲ್ಲಿ  ಗುರುತಿಸಿದ ನಂತರ ವಿವಿಧ ಪ್ರಯತ್ನ ನಡೆಯುತ್ತಲೇ ಇತ್ತು. ಈ ರೋಗಕ್ಕೆ  ಫೈಟೋಪ್ಲಾಸ್ಮಾ ಕಾರಣ ಎಂದು ಗುರುತಿಸಿದ ಬಳಿಕ ಈ ಬಗ್ಗೆ ವಿಜ್ಞಾನಿಗಳು ಹೆಚ್ಚಿನ ಅಧ್ಯಯನ ನಡೆಸುತ್ತಲೇ ಇದ್ದಾರೆ.ಅದಾದ ಬಳಿಕ  ಅಡಿಕೆ ಸಂಶೋಧನಾ ಕೇಂದ್ರವು 2000  ಇಸವಿಯಲ್ಲಿ ಹಳದಿ ಎಲೆ ರೋಗ ನಿಯಂತ್ರಿಸ ಬೇಕಾದರೆ ರೋಗ ಪ್ರತಿರೋಧಕ ತಳಿ ಅಭಿವೃದ್ಧಿ ಕಾರ್ಯ ನಡೆಯಬೇಕು ಎಂದು ಹೇಳಿತ್ತು, ಆ ಬಗ್ಗೆಯೂ ಪ್ರಯತ್ನ ನಡೆಯುತ್ತಿದೆ. ಈ ನಡುವೆ ಪ್ಲಾಸ್ಟಿಕ್ ಮಲ್ಚಿಂಗ್  ಸೇರಿದಂತೆ ವಿವಿಧ ಮಾರ್ಗಗಳ ಬಗ್ಗೆಯೂ ವಿಜ್ಞಾನಿಗಳು ಪ್ರಯತ್ನ ಮಾಡುತ್ತಿದ್ದರು. ಈ ನಡುವೆ ಕೃಷಿಕರೂ ಅಡಿಕೆಯ ಪರ್ಯಾಯ ಕೃಷಿ ಬಗ್ಗೆಯೂ ಚಿಂತನೆ ನಡೆಸಿ, ತಾಳೆ, ರಬ್ಬರ್‌ ಬೆಳೆಯ ಕಡೆಗೂ ಗಮನಹರಿಸಿದರು. ಆದರೆ ಈಗ ಅಡಿಕೆಗೆ ಪರ್ಯಾಯ ಅಡಿಕೆಯೇ ಎಂಬ ಸ್ಥಿತಿ ಇದೆ.

Advertisement

ಮಧ್ಯ ದಕ್ಷಿಣ ಕೇರಳದಲ್ಲಿ ಕಾಣಿಸಿಕೊಂಡ ಹಳದಿ ಎಲೆ ರೋಗ ಆ ಭಾಗವನ್ನು ಆಕ್ರಮಿಸಿಕೊಂಡು,ಕೇರಳದ ವಯನಾಡು ಪ್ರದೇಶದಲ್ಲಿ ಮುನ್ನಡೆದು ನಂತರ ರಾಜ್ಯದ ಗೈದು ಸುಳ್ಯ,ಕೊಪ್ಪ, ಶೃಂಗೇರಿ ತಾಲೂಕುಗಳಲ್ಲಿ ಹರಡಿತು. ಇದೀಗ ಇನ್ನೂ ವಿಸ್ತರಣೆಯಾಗಿ ಕಡಬ, ಪುತ್ತೂರು, ವಿಟ್ಲ  ಮೊದಲಾದ ಕಡೆಗಳಲ್ಲೂ ವಿಸ್ತರಣೆಯಾಗಿದೆ. ಅದರ ಜೊತೆಗೆ ರಾಜ್ಯದ ವಿವಿದೆಡೆಯೂ ಹಳದಿ ಎಲೆ ರೋಗದ ಲಕ್ಷಣಗಳು ಗೋಚರವಾಗುತ್ತಿವೆ ಎಂದು ವಿಜ್ಞಾನಿಗಳು ಸಂದೇಹ ಪಟ್ಟಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಅಡಿಕೆ ಹಳದಿ ಎಲೆ ಹಳದಿ ರೋಗ ನಿರೋಧಕ ತಳಿ ಅಭಿವೃದ್ಧಿ ಕಡೆಗೆ ಕೇಂದ್ರೀಯ ಅಡಿಕೆ ಸಂಶೋಧನಾ ಸಂಸ್ಥೆ ವಿಟ್ಲದ ಸಿಪಿಸಿಆರ್‌ ಐ ವಿಜ್ಞಾನಿಗಳು ಮುಂದಟಿ ಇಟ್ಟಿದ್ದಾರೆ. ಈಗಾಗಲೇ ಒಂದಷ್ಟು ಕೆಲಸ ಕಾರ್ಯಗಳು ನಡೆದಿದೆ. ಈ ನಡುವೆ ಟಿಶ್ಯೂ ಕಲ್ಚಟರ್‌ ಗಿಡಗಳ ಅಭಿವೃದ್ಧಿಯ ಪ್ರಯತ್ನವನ್ನು ಸಿಪಿಸಿಆರ್‌ ಐ ಮಾಡುತ್ತಿದೆ.

Advertisement

ಈ ಸಂದರ್ಭದಲ್ಲಿ ಅಡಿಕೆ ಹಳದಿ ಎಲೆ ರೋಗ ಸಂಶೋಧನೆ ಹಾಗೂ ಅಧ್ಯಯನಕ್ಕೆ ಎಂದು ಯಡಿಯೂರಪ್ಪ ಸರ್ಕಾರವು ಕಳೆದ ವರ್ಷದ ಬಜೆಟ್‌ ನಲ್ಲಿ 25 ಕೋಟಿ ರೂಪಾಯಿ ಮೀಸಲಿಟ್ಟಿದೆ. ಇಂದಿಗೂ ಈ ಅನುದಾನದ ಬಳಕೆಯ ಕಡೆಗೆ ಸೂಕ್ತವಾದ ಹೆಜ್ಜೆ ಆಗಿಲ್ಲ. ರಾಜ್ಯದ ಸುಮಾರು ಅರ್ಧ ಭಾಗದಲ್ಲಿರುವ ಅಡಿಕೆ ಬೆಳೆಗೆ ಕಾಡಿರುವ ಹಳದಿ ಎಲೆರೋಗದ ಪರಿಹಾರಕ್ಕೆ ಹಾಗೂ ಕೆಲವು ಕಡೆ ಪರ್ಯಾಯ ಬೆಳೆಗೆ ಸೂಕ್ತವಾದ ಪರಿಹಾರ, ಸಹಾಯ ನೀಡಲು ಇನ್ನೂ ಕನಿಷ್ಟ 50  ಕೋಟಿ ಅನುದಾನದ ನಿರೀಕ್ಷೆ ಇತ್ತು. ಆದರೆ ಈ ಬಾರಿಯ ಬಜೆಟ್‌ನಲ್ಲಿ ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ 33,700 ಕೋಟಿ ಅನುದಾನ ಮೀಸಲಿಡಲಾಗಿದೆ, ಇದರಲ್ಲಿ  ಅಡಿಕೆ ಹಳದಿ ಎಲೆರೋಗಕ್ಕೂ ಅಗತ್ಯವಾಗಿ ಪ್ರತ್ಯೇಕವಾಗಿ ಮೀಸಲಿಟ್ಟಿರುವುದು  ಕಂಡುಬಂದಿಲ್ಲ. ಮುಂದಿನ ಪೂರಕ ಬಜೆಟ್‌ ನಲ್ಲಿ ಕನಿಷ್ಟ 50 ಕೋಟಿ ಅನುದಾನ ಹೆಚ್ಚುವರಿಯಾಗಿ ಇರಿಸುವ ಅವಶ್ಯಕತೆ ಇದೆ ಎಂಬುದು ಅಡಿಕೆ ಹಳದಿ ಎಲೆ ರೋಗದ ಬಗ್ಗೆ ಕೆಲಸ ಮಾಡುತ್ತಿರುವ ಕೃಷಿಕ ರಮೇಶ್‌ ದೇಲಂಪಾಡಿ ಅವರ ಅಭಿಪ್ರಾಯ.

 

Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ವೆದರ್‌ ಮಿರರ್‌ | 03.05.2024 |ಮೇ. 4ರಿಂದ ಮೋಡ| ಮೇ.6 ರಿಂದ ಅಲ್ಲಲ್ಲಿ ಮಳೆ ನಿರೀಕ್ಷೆ

04.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…

6 hours ago

ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |

03.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…

1 day ago

ಬಿದಿರು ಕೃಷಿ | ತರಕಾರಿ ಕೃಷಿಯಾಗಿ ಬಿದಿರು

ಬಿದಿರು ಕೃಷಿಯ ಬಗ್ಗೆ ಈಗ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಈ ನಡುವೆ ಪುತ್ತೂರು…

1 day ago

ಅಡಿಕೆ ಹಳದಿ ಎಲೆರೋಗ – ಚುನಾವಣೆ

ಅಡಿಕೆ ಕೂಡಾ ಇಂದು ಬಹುಮುಖ್ಯವಾದ ಚುನಾವಣಾ ವಿಷಯ. ಹೀಗಾಗಿ ಅಡಿಕೆ ಹಳದಿ ಎಲೆರೋಗ…

1 day ago

ವಾರದ ಅತಿಥಿ | ಸುಬ್ರಾಯ ಚೊಕ್ಕಾಡಿ ಮಾತು

https://youtu.be/Vh1tYlOKav0?si=M4grG9euj6dXmkE2 ರೂರಲ್ ಮಿರರ್‌ ವಾರದ ಅತಿಥಿಯಾಗಿ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅವರು…

1 day ago

ಮಕ್ಕಳ ಹಬ್ಬ…

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜದಲ್ಲಿ ಮಕ್ಕಳ ಬೇಸಿಗೆ ಶಿಬಿರ ಮಕ್ಕಳ…

1 day ago