ಅಡಿಕೆಯ ಹಳದಿ ಎಲೆರೋಗ | ಸಿಪಿಸಿಆರ್‌ಐ ವಿಜ್ಞಾನಿಗಳಿಂದ ಮುಂದುವರಿದ ಸಂಶೋಧನಾ ಪ್ರಯತ್ನ |

November 10, 2022
8:49 AM

ಕೇಂದ್ರೀಯ ಸಂಸ್ಥೆ ಸಿಪಿಸಿಆರ್‌ಐ ಕಳೆದ ಎರಡು ವರ್ಷಗಳಿಂದ ಅಡಿಕೆ ಹಳದಿ ಎಲೆರೋಗ ನಿರೋಧಕ ತಳಿ ಅಭಿವೃದ್ಧಿಯ ಕಡೆಗೆ ನಿರಂತರ ಪ್ರಯತ್ನ ಮಾಡುತ್ತಿದೆ. ಕಾಸರಗೋಡು ಹಾಗೂ ವಿಟ್ಲದ ಸಿಪಿಸಿಆರ್‌ಐ ವಿಜ್ಞಾನಿಗಳು ಈ ಪ್ರಯತ್ನವನ್ನು ತಮ್ಮದೇ ಮಿತಿಯಲ್ಲಿ ಮುಂದುವರಿಸಿದ್ದಾರೆ. ಎರಡು ದಿನಗಳ ಹಿಂದೆ ಹಳದಿ ಎಲೆರೋಗ ಪೀಡಿತ ಪ್ರದೇಶದಿಂದ ಮತ್ತೆ ಅಡಿಕೆ ಹಿಂಗಾರ ಸಂಗ್ರಹ ಕಾರ್ಯವನ್ನು ನಡೆಸಿದ್ದಾರೆ.

ಸುಳ್ಯ ಪ್ರದೇಶದ ಸಂಪಾಜೆ , ಅರಂತೋಡು ಸೇರಿದಂತೆ, ಕೊಪ್ಪ, ಶೃಂಗೇರಿ ವಿವಿದೆಡೆ ಅಡಿಕೆ ಹಳದಿ ಎಲೆರೋಗದಿಂದ ಕೃಷಿಕರು ಕಂಗಾಲಾಗಿದ್ದಾರೆ. ಈಚೆಗೆ ಪುತ್ತೂರು ತಾಲೂಕಿನ ವಿವಿಧ ಪ್ರದೇಶಗಳಲ್ಲೂ ಅಡಿಕೆ ಹಳದಿ ಎಲೆರೋಗ ನಿಧಾನವಾಗಿ ವ್ಯಾಪಿಸುತ್ತಿದೆ. ಈ ನಡುವೆ ಈ ರೋಗಕ್ಕೆ ಫೈಟೋಪ್ಲಾಸ್ಮಾ ಕಾರಣ ಎಂದು ಸಂಶೋಧನೆಯ ಮೂಲಕ ಕಂಡುಕೊಂಡಿರುವ ಕೇಂದ್ರೀಯ ಸಂಸ್ಥೆ ಸಿಪಿಸಿಆರ್‌ಐ ವಿಜ್ಞಾನಿಗಳು, ಈ ರೋಗಕ್ಕೆ ಅಡಿಕೆ ಹಳದಿ ಎಲೆರೋಗ ನಿರೋಧಕ ತಳಿ ಅಭಿವೃದ್ಧಿ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬಹುದು  ಎಂದು ಈ ನಿಟ್ಟಿನಲ್ಲಿ ಹೆಜ್ಜೆ ಇರಿಸಿದ್ದರು. ಆದರೆ ಪ್ರಯೋಗಾಲಯ ಸೇರಿದಂತೆ ಮೂಲಭೂತ ಸೌಲಭ್ಯದ ಕೊರತೆಯ ಹಿನ್ನೆಲೆಯಲ್ಲಿ  ನಿಧಾನಗತಿಯಲ್ಲಿ ಈ ಪ್ರಕ್ರಿಯೆ ನಡೆಯುತ್ತಿತ್ತು.

ಕಳೆದ ವರ್ಷ ಅಡಿಕೆ ಹಳದಿ ಎಲೆರೋಗ ಪೀಡಿತ ಹಾಟ್‌ಸ್ಫಾಟ್‌ ಪ್ರದೇಶದಿಂದ ಅಡಿಕೆ ಹಿಂಗಾರವನ್ನು ಸಂಗ್ರಹಿಸಿ ಟಿಶ್ಯೂ ಕಲ್ಚರ್‌ ಅಭಿವೃದ್ಧಿಪಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಈ ಪ್ರಯೋಗ ನಡೆಯುತ್ತಿದೆ, ಇನ್ನೂ ಎರಡು ವರ್ಷಗಳ ಕಾಲ ಗಿಡಗಳ ಅಭಿವೃದ್ಧಿಗೆ  ಬೇಕಾಗುತ್ತದೆ. ಈ ವರ್ಷವೂ ಕೂಡಾ ಅಡಿಕೆ ಹಿಂಗಾರವನ್ನು ತೆಗೆಯುವ ಮೂಲಕ ಸಂಶೋಧನಾ ಪ್ರಗತಿಯನ್ನು ಮುಂದುವರಿಸಿದ್ದಾರೆ.ಕಳೆದ ವರ್ಷದಂತೇ ಈ ವರ್ಷವೂ ಕೇರಳದ ಕಾಸರಗೋಡಿನಲ್ಲಿ ಸಿಪಿಸಿಆರ್‌ಐ ವಿಜ್ಞಾನಿಗಳ ತಂಡ  ಸಂಪಾಜೆ,ಚೆಂಬು ಗ್ರಾಮಗಳಿಂದ  ಗುರುತಿಸಲಾದ ಅಡಿಕೆ ಮರಗಳಿಂದ ಸಿಂಗಾರ ಸಂಗ್ರಹಿಸುವ ಪ್ರಯತ್ನ ಮಾಡಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ಮಂಗಳೂರು ಅಡಿಕೆ ಮಾರುಕಟ್ಟೆ | ಸ್ಥಿರತೆಯಿಂದ ಏರಿಕೆಯತ್ತ ಮುಖ ಮಾಡಿದ ಧಾರಣೆ
April 2, 2026
6:56 AM
by: ಅರುಣ್‌ ಕುಮಾರ್ ಕಾಂಚೋಡು
ಜನಗಣತಿ 2026 – ಏಪ್ರಿಲ್ 1ರಿಂದ ಸ್ವಯಂ-ಎಣಿಕೆ ಆರಂಭ – ಸಹಕರಿಸಲು ಜಿಲ್ಲಾಧಿಕಾರಿ ಕರೆ
April 2, 2026
6:37 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 01-04-2026 | ಕರಾವಳಿ-ಮಲೆನಾಡಿನಲ್ಲಿ ಗುಡುಗು ಮಳೆ ಮುಂದುವರಿಕೆ – ಏ.10 ರಿಂದ ಮತ್ತೆ ಮಳೆ ಚುರುಕು ಸಾಧ್ಯತೆ!
April 1, 2026
2:30 PM
by: ಸಾಯಿಶೇಖರ್ ಕರಿಕಳ
ಮಳೆಯ ನಡುವೆಯೂ ಉರಿಯುವ ಬಿಸಿಲು..! ಏಪ್ರಿಲ್–ಜೂನ್‌ನಲ್ಲಿ ಹವಾಮಾನ ಸವಾಲು..!
April 1, 2026
6:29 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror