ಕೇಂದ್ರೀಯ ಸಂಸ್ಥೆ ಸಿಪಿಸಿಆರ್‌ಐ ಕಳೆದ ಎರಡು ವರ್ಷಗಳಿಂದ ಅಡಿಕೆ ಹಳದಿ ಎಲೆರೋಗ ನಿರೋಧಕ ತಳಿ ಅಭಿವೃದ್ಧಿಯ ಕಡೆಗೆ ನಿರಂತರ ಪ್ರಯತ್ನ ಮಾಡುತ್ತಿದೆ. ಕಾಸರಗೋಡು ಹಾಗೂ ವಿಟ್ಲದ ಸಿಪಿಸಿಆರ್‌ಐ ವಿಜ್ಞಾನಿಗಳು ಈ ಪ್ರಯತ್ನವನ್ನು ತಮ್ಮದೇ ಮಿತಿಯಲ್ಲಿ ಮುಂದುವರಿಸಿದ್ದಾರೆ. ಎರಡು ದಿನಗಳ ಹಿಂದೆ ಹಳದಿ ಎಲೆರೋಗ ಪೀಡಿತ ಪ್ರದೇಶದಿಂದ ಮತ್ತೆ ಅಡಿಕೆ ಹಿಂಗಾರ ಸಂಗ್ರಹ ಕಾರ್ಯವನ್ನು ನಡೆಸಿದ್ದಾರೆ.
ಸುಳ್ಯ ಪ್ರದೇಶದ ಸಂಪಾಜೆ , ಅರಂತೋಡು ಸೇರಿದಂತೆ, ಕೊಪ್ಪ, ಶೃಂಗೇರಿ ವಿವಿದೆಡೆ ಅಡಿಕೆ ಹಳದಿ ಎಲೆರೋಗದಿಂದ ಕೃಷಿಕರು ಕಂಗಾಲಾಗಿದ್ದಾರೆ. ಈಚೆಗೆ ಪುತ್ತೂರು ತಾಲೂಕಿನ ವಿವಿಧ ಪ್ರದೇಶಗಳಲ್ಲೂ ಅಡಿಕೆ ಹಳದಿ ಎಲೆರೋಗ ನಿಧಾನವಾಗಿ ವ್ಯಾಪಿಸುತ್ತಿದೆ. ಈ ನಡುವೆ ಈ ರೋಗಕ್ಕೆ ಫೈಟೋಪ್ಲಾಸ್ಮಾ ಕಾರಣ ಎಂದು ಸಂಶೋಧನೆಯ ಮೂಲಕ ಕಂಡುಕೊಂಡಿರುವ ಕೇಂದ್ರೀಯ ಸಂಸ್ಥೆ ಸಿಪಿಸಿಆರ್‌ಐ ವಿಜ್ಞಾನಿಗಳು, ಈ ರೋಗಕ್ಕೆ ಅಡಿಕೆ ಹಳದಿ ಎಲೆರೋಗ ನಿರೋಧಕ ತಳಿ ಅಭಿವೃದ್ಧಿ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದು ಈ ನಿಟ್ಟಿನಲ್ಲಿ ಹೆಜ್ಜೆ ಇರಿಸಿದ್ದರು. ಆದರೆ ಪ್ರಯೋಗಾಲಯ ಸೇರಿದಂತೆ ಮೂಲಭೂತ ಸೌಲಭ್ಯದ ಕೊರತೆಯ ಹಿನ್ನೆಲೆಯಲ್ಲಿ ನಿಧಾನಗತಿಯಲ್ಲಿ ಈ ಪ್ರಕ್ರಿಯೆ ನಡೆಯುತ್ತಿತ್ತು.
ಕಳೆದ ವರ್ಷ ಅಡಿಕೆ ಹಳದಿ ಎಲೆರೋಗ ಪೀಡಿತ ಹಾಟ್‌ಸ್ಫಾಟ್ ಪ್ರದೇಶದಿಂದ ಅಡಿಕೆ ಹಿಂಗಾರವನ್ನು ಸಂಗ್ರಹಿಸಿ ಟಿಶ್ಯೂ ಕಲ್ಚರ್ ಅಭಿವೃದ್ಧಿಪಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಈ ಪ್ರಯೋಗ ನಡೆಯುತ್ತಿದೆ, ಇನ್ನೂ ಎರಡು ವರ್ಷಗಳ ಕಾಲ ಗಿಡಗಳ ಅಭಿವೃದ್ಧಿಗೆ ಬೇಕಾಗುತ್ತದೆ. ಈ ವರ್ಷವೂ ಕೂಡಾ ಅಡಿಕೆ ಹಿಂಗಾರವನ್ನು ತೆಗೆಯುವ ಮೂಲಕ ಸಂಶೋಧನಾ ಪ್ರಗತಿಯನ್ನು ಮುಂದುವರಿಸಿದ್ದಾರೆ.ಕಳೆದ ವರ್ಷದಂತೇ ಈ ವರ್ಷವೂ ಕೇರಳದ ಕಾಸರಗೋಡಿನಲ್ಲಿ ಸಿಪಿಸಿಆರ್‌ಐ ವಿಜ್ಞಾನಿಗಳ ತಂಡ ಸಂಪಾಜೆ,ಚೆಂಬು ಗ್ರಾಮಗಳಿಂದ ಗುರುತಿಸಲಾದ ಅಡಿಕೆ ಮರಗಳಿಂದ ಸಿಂಗಾರ ಸಂಗ್ರಹಿಸುವ ಪ್ರಯತ್ನ ಮಾಡಿದ್ದಾರೆ.
ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಸಹಜವಾಗಿ ಸಾವನ್ನಪ್ಪುವ ಕಾಡುಪ್ರಾಣಿಗಳ ಕಳೇಬರವನ್ನು ಸುಡದೆ ಕಾಡಿನಲ್ಲಿಯೇ…
ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಕ್ಷೇತ್ರ ಬದರೀನಾಥ ಧಾಮವನ್ನು ತೆರೆಯಲಾಗಿದೆ. ಮುಂಜಾನೆ 6 ಗಂಟೆಯ…
ಅರಣ್ಯ ಪ್ರದೇಶದಲ್ಲಿ ಆಗಿರುವ ಅಕ್ರಮ ಮಂಜೂರಾತಿ ರದ್ದುಪಡಿಸಿ, ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ…
ಈ ಬಾರಿ ಅಡಿಕೆ ಮಾರುಕಟ್ಟೆಯಲ್ಲಿ ಏರಿಳಿತ, ಅಡಿಕೆ ಬೆಳೆ ಕಡಿಮೆ, ಧಾರಣೆ ಏರಿಕೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜೋತಿಷಿಗಳನ್ನು ಸಂಪರ್ಕಿಸಿ 9535156490
ಕುಸುಮ್ ಯೋಜನೆ ಮೂಲಕ ಪ್ರತಿ ತಾಲ್ಲೂಕಿನಲ್ಲಿ 20 ಮೆ.ವ್ಯಾ ಸಾಮರ್ಥ್ಯದ ಸೋಲಾರ್ ವಿದ್ಯುತ್…