ಅಡಿಕೆ ಹಳದಿಎಲೆ ರೋಗ ನಿರೋಧಕ ತಳಿ ಅಭಿವೃದ್ಧಿ | ಸಂಪಾಜೆಯಲ್ಲಿ ವಿಜ್ಞಾನಿಗಳಿಂದ ಅಡಿಕೆ ಮರಗಳ ಗುರುತು ಕಾರ್ಯ ಆರಂಭ |

October 18, 2021
9:42 PM

ಅಡಿಕೆ ಹಳದಿಎಲೆರೋಗ ನಿರೋಧಕ ತಳಿ ಅಭಿವೃದ್ಧಿ ಹಿನ್ನೆಲೆಯಲ್ಲಿ ಸಿಪಿಸಿಆರ್‌ಐ ವಿಜ್ಞಾನಿಗಳು ಸೋಮವಾರ ಸಂಪಾಜೆ-ಚೆಂಬು ಪ್ರದೇಶಕ್ಕೆ ಭೇಟಿ ನೀಡಿದರು. ಅನೇಕ ವರ್ಷಗಳಿಂದ ಹಳದಿ ಎಲೆರೋಗ ಇದ್ದ ತೋಟದಲ್ಲಿ ಈಗಲೂ ಹಸಿರಾಗಿರುವ ಅಡಿಕೆ ಮರಗಳನ್ನು ಗುರುತು ಮಾಡುವ ಕಾರ್ಯಕ್ಕೆ ಚಾಲನೆ ನೀಡಿದರು. ಮುಂದಿನ ದಿನಗಳನ್ನು ಇನ್ನಷ್ಟು ತೋಟಗಳಲ್ಲಿ ಇಂತಹ ಮರಗಳ ಗುರುತಿಸುವಿಕೆಯ ಕಾರ್ಯ ನಡೆಯಲಿದೆ.

Advertisement
Advertisement
Advertisement

Advertisement

ಅಡಿಕೆ ಹಳದಿ ಎಲೆರೋಗಕ್ಕೆ ಸುಳ್ಯ ತಾಲೂಕಿನ ಸಂಪಾಜೆ ಹಾಗೂ ಕೊಡಗು ಜಿಲ್ಲೆಯ ಚೆಂಬು ಪ್ರದೇಶವು ಹಾಟ್‌ಸ್ಫಾಟ್‌ ಎಂದು ಗುರುತಿಸಲಾಗಿತ್ತು. ಕಳೆದ ಅನೇಕ ವರ್ಷಗಳಿಂದ ಈ ಪ್ರದೇಶದಲ್ಲಿ ಹಳದಿ ಎಲೆರೋಗ ಕಂಡುಬಂದು ವಿಸ್ತರಣೆಯಾಗಿತ್ತು. ಅನೇಕ ವರ್ಷಗಳಿಂದಲೂ ಹಳದಿ ಎಲೆರೋಗ ಇದ್ದು ಅಂತಹ ತೋಟದಲ್ಲಿ ಈಗಲೂ ಹಸಿರಾಗಿರುವ ಮರಗಳಿಗೆ ರೋಗ ನಿರೋಧಕ ಶಕ್ತಿ ಇದೆ ಎಂಬುದು ಸಾಮಾನ್ಯವಾಗಿರುವ ಅಧ್ಯಯನ.

ಇದೀಗ ಅಂತಹ ಮರಗಳ ಗುರುತು ಮಾಡುವ ಕಾರ್ಯವನ್ನು ಸಿಪಿಸಿಆರ್‌ಐ ವಿಜ್ಞಾನಿಗಳ ತಂಡ ಮಾಡುತ್ತಿದೆ. ಮುಂದೆ ಈ ಮರಗಳ ಆರೈಕೆ ಮಾಡಿದ ಬಳಿಕ ರೋಗದ ಅಂಶಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿ ರೋಗ ಮುಕ್ತವಾಗಿರುವ ಮರ ಎಂಬ ಖಾತ್ರಿ ಬಳಿಕ ಮುಂದಿನ ವರ್ಷ ಅಂತಹದ್ದೇ ಮರಗಳ ನಡುವೆ ಪರಾಸ್ಪರ್ಶ ನಡೆಸಿ ರೋಗ ನಿರೋಧಕ ತಳಿ ಅಭಿವೃದ್ಧಿ ಮಾಡುವುದು ಹಾಗೂ ಅದೇ ವೇಳೆ ಟಿಶ್ಯು ಕಲ್ಚರ್‌ ಗಿಡಗಳ ಅಭಿವೃದ್ದಿ ಕೂಡಾ ನಡೆಸುವುದು ಈ ಯೋಜನೆಯ ಉದ್ದೇಶವಾಗಿದೆ.

Advertisement

ಸೋಮವಾರ ಸಂಪಾಜೆ ಚೆಂಬು ಪ್ರದೇಶದಲ್ಲಿ ಸಿಪಿಸಿಆರ್‌ಐ ವಿಟ್ಲದ ಬೆಳೆ ಉತ್ಪಾದನಾ ವಿಭಾಗದ ವಿಜ್ಞಾನಿ ಡಾ.ಭವಿಷ್ಯ ಅವರ ನೇತೃತ್ವದಲ್ಲಿ ಮರಗಳನ್ನು ಗುರುತು ಮಾಡುವ ಕೆಲಸ ನಡೆಯಿತು.ಶ್ರೀನಿವಾಸ ನಿಡಿಂಜಿ, ರವಿ ಬಾಲೆಂಬಿ, ಗಿರೀಶ್‌ ಚಂದಡ್ಕ, ಭವ್ಯಾನಂದ ಕುಯಿಂತೋಡು ಅವರ ತೋಟಗಳಿಗೆ ಭೇಟಿ ನೀಡಿದರು.

Advertisement

 

Advertisement

ಸಂಪಾಜೆ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಅವರ ನೇತೃತ್ವದ ತಂಡ ಸಹಕಾರ ನೀಡಿತು. ಈ ಸಂದರ್ಭ ಸಹಕಾರಿ ಯೂನಿಯನ್‌ ಅಧ್ಯಕ್ಷ ರಮೇಶ್‌ ದೇಲಂಪಾಡಿ, ಕೃಷಿಕರಾದ ಭವ್ಯಾನಂದ ಕುಯಿಂತೋಡು, ಶ್ರೀನಿವಾಸ ನಿಡಿಂಜೆ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ  ಇದ್ದರು.

Advertisement

 

 

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದುಬೈ ಭಾರೀ ಮಳೆಗೆ ಕಾರಣ ಏನು…? | ನೀರಿಗಾಗಿ ನಡೆದ “ಮೋಡ ಬಿತ್ತನೆ” ಕಾರಣವೇ..? ತಾಪಮಾನ ಏರಿಕೆ ಕಾರಣವೇ..? | ಚಿಂತಿಸುತ್ತಿದ್ದಾರೆ ಹವಾಮಾನ ತಜ್ಞರು |
April 17, 2024
10:44 PM
by: ದ ರೂರಲ್ ಮಿರರ್.ಕಾಂ
ಬೆಳಿಗ್ಗೆ ತಿಂಡಿನಾ – ಊಟಾನಾ ? ಇದು ಸರಿಸುಮಾರು ಎಲ್ಲರ ಪ್ರಶ್ನೆ?
April 17, 2024
4:52 PM
by: The Rural Mirror ಸುದ್ದಿಜಾಲ
ದೇವರು ಧರ್ಮ ಭಕ್ತಿ ಒಂದು ಒಣ ಆಡಂಬರವಲ್ಲ, ಅದು ನಮ್ಮ ಆತ್ಮಸಾಕ್ಷಿಯ ನಡವಳಿಕೆ | ರಾಮನವಮಿ ಪ್ರಯುಕ್ತ ಬರೆಯುತ್ತಾರೆ ವಿವೇಕಾನಂದ. ಎಚ್. ಕೆ.
April 17, 2024
4:37 PM
by: ವಿವೇಕಾನಂದ ಎಚ್‌ ಕೆ
ಲೋಕಸಭಾ ಚುನಾವಣೆ | ಜಗತ್ತಿನ ಅತಿ ವೆಚ್ಚದಾಯಕ ಚುನಾವಣೆಗೆ ಒಟ್ಟು ಎಷ್ಟು ಖರ್ಚಾಗುತ್ತದೆ..? | ಖರ್ಚು- ವೆಚ್ಚ ಹೇಗೆ ನಡೆಯುತ್ತೆ? | ಚುನಾವಣಾ ಆಯೋಗ ವಶಪಡಿಸಿಕೊಂಡ ಅಕ್ರಮ ಹಣ, ವಸ್ತುಗಳೆಷ್ಟು..?
April 17, 2024
3:04 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror