ಅಂತರಂಗ

ಅಡಿಕೆಯ ಹಳದಿ ಎಲೆ ರೋಗದ ಖಾಯಂ ನಿವಾರಣೆಗಾಗಿ ಯೋಜನೆ ಅನುಷ್ಟಾನಗೊಳ್ಳುತ್ತದೆ ಎಂಬ ಭರವಸೆ ಇರಲಿ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ದಶಕದ ಹಿಂದೆ ಊರಲ್ಲೊಂದು ಸುದ್ದಿ ಹಬ್ಬಿತು.ಯಾರದ್ದೋ ಮನೆ ಪಕ್ಕ ಇರುವ ಹಲಸಿನ ಮರದಲ್ಲಿ ಆಗುವ ಹಲಸಿನ ಕಾಯಿಯಲ್ಲಿ ಮಾಮೂಲಾಗಿ ಇರಬೇಕದ ಮಯಣ ಇರುವುದೇ ಇಲ್ಲ ಅಂತ. Gumless jackfruit .ಎಲ್ಲರಿಗೂ ಅಂತಹದ್ದೊಂದು ಹಲಸಿನ ಮರ ತಮ್ಮಲ್ಲೂ ಇದ್ದರಾಗುತ್ತಿತ್ತು ಎಂಬ ಬಯಕೆ.……… ಮುಂದೆ ಓದಿ…….

Advertisement

ನೈಸರ್ಗಿಕವಾಗಿ ಹಲಸಿನ ಗಿಡ ಆಗುವುದು ಹಲಸಿನ ಹಣ್ಣಿನ ಒಳಗಡೆ ಇರುವ ಹಲಸಿನ ಬೀಜಗಳಿಂದ.ಆದರೆ ಈ‌ ಮಯಣರಹಿತ ಹಲಸಿನ ಹಣ್ಣಿನಲ್ಲಿರುವ ಬೀಜದಿಂದ ತಯಾರಿಸಿದ ಹಲಸಿನ ಗಿಡಗಳಲ್ಲಿ ಆದ ಹಲಸಿನ ಹಣ್ಣುಗಳಲ್ಲಿ‌ ಮಯಣ ಧಾರಾಳವಾಗಿ ಇದ್ದದ್ದು ಕಂಡು ಬಂತು.ತಾಯಿ ಮರದ ಗುಣವನ್ನೇ ಪ್ರತಿಫಲಿಸುವ ಹೊಸ ಗಿಡಗಳನ್ನು ತಯಾರಿಸುವ ತಂತ್ರಜ್ಞಾನದ ಅಳವಡಿಕೆಯ ಅವಶ್ಯಕತೆ ಬಿತ್ತು. ಅಂದು ಇದಕ್ಕಾಗಿ ಆಯ್ದು ಕೊಂಡದ್ದು ಕಸಿ ತಂತ್ರಜ್ಞಾನವನ್ನು.ಈ ತಂತ್ರಜ್ಞಾನದ ಮುಖಾಂತರ ಬೇಡಿಕೆ ಇದ್ದಷ್ಟು ಮಯಣರಹಿತ ಹಲಸಿನ ಹಣ್ಣು ಕೊಡುವ ಹಲಸಿನ ಗಿಡಗಳ ತಯಾರಿ ಸಾಧ್ಯವಾಯ್ತು.

ಎಲ್ಲ ಜಾತಿಯ ಸಸ್ಯಗಳಲ್ಲಿ ಕಸಿ ತಂತ್ರಜ್ಞಾನದ ಅಳವಡಿಕೆ ಸಾಧ್ಯವಿಲ್ಲದ್ದು ಅಂತಲೂ ಗೊತ್ತಾಗಿತ್ತು.ಸಸ್ಯದ ಒಂದು ಭಾಗವನ್ನೇ ಒಂದು ಹೊಸಗಿಡವಾಗಿ ಅಭಿವೃದ್ಧಿ ಪಡಿಸಲು ಸಾಧ್ಯವಾದರೆ ತಾಯಿ ಗಿಡದ ಗುಣಗಳನ್ನೇ ಯಥಾವತ್ತಾಗಿ ಪ್ರತಿಫಲಿಸುವ ಹೊಸ ಗಿಡಗಳನ್ನು ಯಥೇಛ್ಛವಾಗಿ ಪಡೆಯಲು ಸಾಧ್ಯ ಎಂಬ ಅನಿಸಿಕೆ ಬಂತು.

ಇಂತಹ ಪ್ರಯತ್ನದಲ್ಲಿ ಅನಾವರಣಗೊಂಡದ್ದೇ ಟಿಶ್ಯೂ ಕಲ್ಚರ್ ತಂತ್ರಜ್ಞಾನ. ತಾಯಿ ಮರದ ಒಂದು ನಿರ್ದಿಷ್ಟ ಭಾಗದ ಸಣ್ಣ ತುಣುಕನ್ನು ಪ್ರಯೋಗಾಲಯದ ಒಳಗಡೆ ಹಲವು ಪೋಶಕಾಂಶಗಳ, ಹಾರ್ಮೋನುಗಳ ,ಉತ್ತೇಜಕಗಳ ಬಳಕೆ ಮುಖಾಂತರ ಹೊಸ ಗಿಡ ಸೃಷ್ಡಿಸುವ ಕೆಲಸವೇ ಟಿಶ್ಯೂ ಕಲ್ಚರ್ ಎಂಬ ವಿಧಾನ.

ಬಹು ಪ್ರಚಾರದಲ್ಲಿ ಇರುವುದು ಬಾಳೆ ತಳಿಯಲ್ಲಿ.ಅನೇಕಾನೇಕ ಟಿಶ್ಯೂ ಕಲ್ಚರ್ ಲ್ಯಾಬುಗಳು ಟಿಶ್ಯೂ ಕಲ್ಚರ್ ಬಾಳೆ ಗಿಡಗಳನ್ನು ಮಾರಾಟ ಮಾಡುತ್ತಿವೆ. ಇಂತಹ ಗಿಡಗಳ ಅನುಕೂಲ ಎಂದರೆ ಎಲ್ಲೇ ಆಗಲಿ ಒಂದೇ ರೀತಿ ಸಾಕಣಿಕೆ ಮಾಡಿದಲ್ಲಿ ಸುಮಾರಾಗಿ ಎಲ್ಲ ಗಿಡಗಳಲ್ಲೂ ಒಂದೇ ಮಾದರಿಯ ಫಸಲು ಒಮ್ಮೆಲೇ ಸಿಗುವುದು.ಈ ಯಶಸ್ಸು ಇನ್ನಿತರ ಸಸ್ಯಜಾತಿಗಳಲ್ಲೂ ಈ ತಂತ್ರಜ್ಞಾನದ ಅಳವಡಿಕೆಯ ಸಾಧ್ಯತೆ ಪರಿಶೀಲಿಸುವಂತೆ ತಜ್ಞರನ್ನು ಪ್ರೇರೇಪಿಸಿತು.
ತಾಪತ್ರಯ ಇರುವುದು ಎಲ್ಲ ಸಸ್ಯವರ್ಗದಲ್ಲೂ ಒಂದೇ ಮಾದರಿ ಟಿಶ್ಯೂ ಕಲ್ಚರ್ ತಂತ್ರಜ್ಞಾನ ಅಳವಡಿಸಲು ಸಾಧ್ಯವಿಲ್ಲದ್ದು.ಪ್ರತಿಯೊಂದು ಸಸ್ಯವರ್ಗಕ್ಕೂ ಅದರದ್ದೇ ಆದ ತಂತ್ರಜ್ಞಾನದ ಹುಡುಕಾಟ ನಡೆಯ ಬೇಕಿತ್ತು.ಅದರಲ್ಲೂ palm ವರ್ಗಕ್ಕೆ ಸೇರಿದ ತಳಿಗಳಲ್ಲಿ ಟಿಶ್ಯೂ ಕಲ್ಚರ್ ತಂತ್ರಜ್ಞಾನದ ಅನ್ವೇಷಣೆ ಬಲು ಕಷ್ಟ ಅಂತ ಹೇಳಲಾಗ್ತಾ ಇದೆ.

ಅಡಿಕೆಯಲ್ಲೂ ಟಿಶ್ಯೂ ಕಲ್ಚರ್ ತಂತ್ರಜ್ಞಾನದ ಅಳವಡಿಕೆ ಸಾಧ್ಯವೇ ಎಂಬ ಪ್ರಯತ್ನ ಸಾಕಷ್ಟು ಹಿಂದೆಯೇ ಆರಂಭ ಗೊಂಡಿತ್ತು.ಯಶಸ್ಸು ಸಿಕ್ಕಿದರೆ ಅತಿ ಹೆಚ್ಚು ಫಸಲು ಕೊಡುವ ತಳಿಗಳ ಅಭಿವೃದ್ಧಿ, ನಿರ್ದಿಷ್ಟ ರೋಗಗಳಿಗೆ ಪ್ರತಿರೋಧ ಒಡ್ಡುವ ತಳಿಗಳ ಅಭಿವೃದ್ಧಿ ಸುಲಭದಲ್ಲಿ ,ವ್ಯಾಪಕವಾಗಿ ಮಾಡಲು ಸಾಧ್ಯ.

ಹಲವಾರು ಪ್ರಯತ್ನದ ಬಳಿಕ ವಿಜ್ಞಾನಿಗಳು ಕಂಡುಕೊಂಡದ್ದೇನೆಂದರೆ ಅಡಿಕೆಯಲ್ಲಿ ಎಳೆಯ ,ಇನ್ನೂ ಒಡೆಯದ ಸಿಂಗಾರದಿಂದ ಹೊಸ ಗಿಡ ಬೆಳೆಸುವ ಸಾಧ್ಯತೆ ಇದೆ ಅಂತ. ಸಿದ್ಧಾಂತ ಕೇಳಿದರೆ ಒಂದು ಸ್ಯಾಂಪಲಿನಿಂದ ಎಷ್ಟು ಬೇಕಿದ್ದರೂ ಗಿಡ ಮಾಡಲು ಸಾಧ್ಯ ಆಗಬೇಕು.ಆದರೆ ವಾಸ್ತವದಲ್ಲಿ ಹಾಗಾಗುತ್ತಿಲ್ಲ.ಬಾಳೆಯಲ್ಲೂ ಸತತವಾಗಿ ಒಂದೇ ಸ್ಯಾಂಪಲಿನಿಂದ ಹೊಸ ಗಿಡ ಮಾಡುವುದಿಲ್ಲ ಅಂತ ಕೇಳಿದ್ದೆ.

ಟಿಶ್ಯೂ ಕಲ್ಚರ್ ತಂತ್ರಜ್ಞಾನದ ವಿವಿಧ ಹಂತಗಳು ಸಾಮಾನ್ಯರಿಗೆ ಅರ್ಥೈಸಿಕೊಳ್ಳಲು ಬಹುಷಹ ಕಷ್ಟ.ಸ್ಯಾಂಪಲನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ ಅವುಗಳನ್ಬು ವಿವಿಧ ಪ್ರಚೋದಕಗಳನ್ಬು ಬಳಸುವ ಮೂಲಕ ಬೆಳೆಯುವಂತೆ ಉತ್ತೇಜಿಸುವುದು ಅಂತ ನಾನು ಅರ್ಥೈಸಿಕೊಂಡದ್ದು.
ಅಡಿಕೆಯಲ್ಲಿ ಮೊದಲು ಎಲೆ ಬರುವಂತೆ ಪ್ರಚೋದಿಸಿದ್ದರಂತೆ.ಆ ಹಂತ ಯಶಸ್ಸು ಕಂಡ ಬಳಿಕ ಬೇರು ಬರುವಂತೆ ಪ್ರಚೋದಿಸಿದ್ದರಂತೆ.ಈ ಹಂತ ಯಶಸ್ಸು ಕಾಣಲು ತೀರಾ ಹೆಣಗಾಡಬೇಕಾಯ್ತು ಅಂತ ಹೇಳಿದ್ದಾಗಿ ನೆನಪು.ಇದೀಗ ಆ ಹಂತವನ್ನೂ ಸುಮಾರಾಗಿ ಯಶಸ್ವಿಯಾಗಿ ಕ್ರಮಿಸಿದ್ದೇವೆ ಅಂತ ಇತ್ತೀಚೆಗಿನ ಭೇಟಿಯಲ್ಲಿ ಹೇಳಿದ್ದರು.

‌ತಂತ್ರಜ್ಞಾನ ಬಹುಮಟ್ಟಿಗೆ ಯಶಸ್ವಿ ಅಂತ ಗೊತ್ತಾದ ಬಳಿಕ ವಾಣಿಜ್ಯಿಕ ಬಳಕೆಗೆ ಈ ತಂತ್ರಜ್ಞಾನ ಸೂಕ್ತವೇ ಅಂತಲೂ ನೋಡಬೇಕು.ವಾಣಿಜ್ಯಿಕವಾಗಿ ಬಳಸ ಬೇಕಾದರೆ ಒಂದು ಸಿಂಗಾರದಿಂದ ಒಂದು ಸಾವಿರದಷ್ಟಾದರೂ ಹೊಸ ಗಿಡ ಮಾಡಲು ಸಾಧ್ಯವಾಗಬೇಕಂತೆ. ಮರದಿಂದ ಸಿಂಗಾರ ಇಳಿಸಿ ಟಿಶ್ಯೂ ಕಲ್ಚರ್ ಮೂಲಕ ಹೊಸ ಗಿಡ ಮಾಡಿ ಅದು ಜಮೀನಿನಲ್ಲಿ ನಾಟಿ ಮಾಡುವಷ್ಟು ದೊಡ್ಡದಾಗಬೇಕಾದರೆ ಎಷ್ಟು ಸಮಯ ಬೇಕು ಎಂಬ ಪ್ರಶ್ನೆ ಇದೆ.ಅರ್ಜೆಂಟಿನವರು ಮರುದಿನದಿಂದಲೇ ಹೊಸ ಗಿಡ ಬಂತಾ ಅಂತ ವಿಚಾರಿಸ್ತಾ ಇರ್ತಾರೆ.ಬಹುಷ: ಐದು ವರ್ಷ ಬೇಕಾದೀತು ಎಂಬುದು ನನ್ನ ಊಹೆ. ಇದೀಗ ಮೂರು ವರ್ಷದ ಮೊದಲು ತೆಗೆದ ಸಿಂಗಾರದಿಂದ ಅಭಿವೃದ್ಧಿ ಪಡಿಸಿದ ಗಿಡಗಳು hardening (ಸಹಜ ವಾತಾವರಣದೊಂದಿಗೆ ಹೊಂದಿಕೊಳ್ಳುವ ಪ್ರಕ್ರಿಯೆ) ಆಗುತ್ತಾ ಇದೆ.ಅದಾದ ಬಳಿಕ‌ ನಾಟಿಗೆ ಬೇಕಿದ್ದಷ್ಟು ದೊಡ್ಡದಾಗ ಬೇಕು.

ಆಶಾವಾದಿಗಳಾಗಿರೋಣ. ಶೀಘ್ರದಲ್ಲಿ ಪ್ರಸ್ತುತ ಇರುವ ಎಲ್ಲ ಅಡೆತಡೆಗಳೂ ನಿವಾರಣೆಯಾಗುತ್ತದೆ ಎಂದು ಬಯಸೋಣ.ಅಡಿಕೆಯ ಹಳದಿ ಎಲೆ ರೋಗದ ಖಾಯಂ ನಿವಾರಣೆಗಾಗಿ ಯೋಜನೆ ಅನುಷ್ಟಾನ ಗೊಳ್ಳುತ್ತದೆ ಎಂಬ ಭರವಸೆ ಇರಲಿ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ರಮೇಶ್‌ ದೇಲಂಪಾಡಿ

ರಮೇಶ್‌ ದೇಲಂಪಾಡಿ ಅವರು ಕೃಷಿಕರು. ಪ್ರಯೋಗಶೀಲ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ. ಅಡಿಕೆ, ತೆಂಗು, ತಾಳೆ, ರಬ್ಬರ್‌ ಇವರ ಪ್ರಮುಖ ಕೃಷಿ. ಅಡಿಕೆ ಬೇರುಹುಳ, ಅಡಿಕೆ ಹಳದಿ ಎಲೆರೋಗ ಸೇರಿದಂತೆ ಕೃಷಿ ಸಂಬಂಧಿತ ವಿಚಾರಗಳಲ್ಲಿ ಹೆಚ್ಚು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ.

Published by
ರಮೇಶ್‌ ದೇಲಂಪಾಡಿ

Recent Posts

ಮೀಸಲಾತಿಗಾಗಿ ಜಾತಿಯಾಗುವ ಮತಧರ್ಮ

ಜಾತಿಗಣತಿ ಮಾಡಿ ಏನನ್ನು ಸಾಧಿಸಲು ಸಾಧ್ಯ? ಸದ್ಯ ಬಹಿರಂಗ ಆಗಿರುವ ವರದಿಯು ಇನ್ನಷ್ಟು…

4 hours ago

ಸರಕಾರಿ ಶಾಲೆಯಲ್ಲಿ ಬೆಳೆಸಿದ ತರಕಾರಿ ಜಿಲ್ಲಾಧಿಕಾರಿಗೆ ಕೊಡುಗೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಸರಕಾರಿ ಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು…

5 hours ago

ಅನ್ನದ ಪರಿಮಳ ಮನವರಳಿಸ ಬಹುದಲ್ಲವೇ..!

ಅನ್ನದ ಪರಿಮಳ ಎಷ್ಟು ಸೊಗಸು. ಅಡುಗೆ ಮನೆಯ ಭಾಷೆಯೇ ಅಂತಹದ್ದು.

15 hours ago

ಹೆಚ್ಚಿನ ಮೌಲ್ಯದ ಹಣ್ಣಿನ ಬೆಳೆಗಳ ಕುರಿತು ಚರ್ಚೆ | ಹಲಸು , ಡ್ರಾಗನ್‌ಫ್ರುಟ್‌ ಕೃಷಿಯ ಕಡೆಗೆ ಆದ್ಯತೆ |

ಭಾರತದ ವಿವಿಧ ಕಡೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯ ಇರುವ ಡ್ರಾಗನ್‌ ಫ್ರುಟ್(ಕಮಲಂ) ಹಾಗೂ…

15 hours ago

ದೆಹಲಿಯಲ್ಲಿ ಹೀಟ್‌ವೇವ್‌ , ಬಿಹಾರದಲ್ಲಿ ಮಳೆ, ಕರ್ನಾಟಕದಲ್ಲಿ ಬಿಸಿ ಗಾಳಿ ಎಚ್ಚರಿಕೆ |

ಏಪ್ರಿಲ್ ಮಧ್ಯದ ವೇಳೆಗೆ ದೆಹಲಿಯಲ್ಲಿ ತಾಪಮಾನವು 40 ಡಿಗ್ರಿಗಿಂತ ಹೆಚ್ಚಾಗಬಹುದು, ಈ ಬಾರಿ…

18 hours ago

ಹೊಸರುಚಿ| ಗುಜ್ಜೆ ರೋಲ್

ಗುಜ್ಜೆ ರೋಲ್ ಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಮೊದಲಿಗೆ ಗುಜ್ಜೆ ಕಟ್…

18 hours ago