ಕರಾವಳಿ–ಮಲೆನಾಡು ಕೃಷಿ ಆರ್ಥಿಕತೆಯ ಪ್ರಮುಖ ಬೆಳೆ ಅಡಿಕೆ. ಆದರೆ ಇತ್ತೀಚಿನ ದಿನಗಳಲ್ಲಿ ಕೇಳಿಬರುತ್ತಿರುವ ಪ್ರಶ್ನೆ, ಇಳುವರಿ ಕುಸಿತವೇ? ವೆಚ್ಚ ಏರಿಕೆಯೇ? ಮಾರುಕಟ್ಟೆ ಅಸ್ಥಿರತೆಯೇ? ಅಥವಾ ಇದು ಕೇವಲ ತಾತ್ಕಾಲಿಕ ಹಂತವೇ?
ಈ ಹಿನ್ನೆಲೆಗಳಲ್ಲಿ “ದ ರೂರಲ್ ಮಿರರ್.ಕಾಂ” ನಡೆಸಿದ ರೈತರ ಸರ್ವೆಯ ಮಾಹಿತಿಯನ್ನು ಆಧರಿಸಿ ಈ ವಿಶೇಷ ವರದಿ ಅಡಿಕೆ ಕೃಷಿಯ ಪ್ರಸ್ತುತ ಸ್ಥಿತಿಯನ್ನು ವಿಶ್ಲೇಷಿಸುತ್ತದೆ.
ಇಳುವರಿ ಕುಸಿತ ಸ್ಪಷ್ಟ — ರೈತರ ಅಭಿಪ್ರಾಯ ಏನು ಹೇಳುತ್ತದೆ? : ಸರ್ವೆಯಲ್ಲಿ ಭಾಗವಹಿಸಿದ ರೈತರಲ್ಲಿ ಸುಮಾರು ಶೇ.71 ರಷ್ಟು ಮಂದಿ ಈ ವರ್ಷ ಇಳುವರಿ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. ಕುಸಿತದ ಪ್ರಮಾಣವೂ ಸಾಮಾನ್ಯ ಮಟ್ಟದಲ್ಲಿಲ್ಲ. ಹೆಚ್ಚಿನ ರೈತರು ಶೇ.25 ರಿಂದ ಶೇ.50ರವರೆಗೆ ಇಳುವರಿ ಕುಸಿತ ಕಂಡುಬಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವು ತೋಟಗಳಲ್ಲಿ ಅರ್ಧಕ್ಕಿಂತ ಹೆಚ್ಚು ಉತ್ಪಾದನೆ ನಷ್ಟ ಕಂಡುಬಂದಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಇದು ಕೇವಲ ವೈಯಕ್ತಿಕ ಅನುಭವವಲ್ಲ — ಸಮಗ್ರ ಕೃಷಿ ಪರಿಸ್ಥಿತಿಯ ಬದಲಾವಣೆಯನ್ನು ಸೂಚಿಸುವ ಸೂಚಕವಾಗಿದೆ.
ಯಾವ ಕಾರಣಗಳು ಹೆಚ್ಚು ಪರಿಣಾಮ ಬೀರಿವೆ? : ಸರ್ವೆಯ ಪ್ರಕಾರ ಹೆಚ್ಚಿನ ತೋಟಗಳು ಮಿಶ್ರ ಹಾಗೂ ಹಳೆಯ ತೋಟಗಳು ಆಗಿವೆ. ರೈತರು ಸೂಚಿಸಿದ ಪ್ರಮುಖ ಕಾರಣಗಳು, ಮಣ್ಣಿನ ಶಕ್ತಿ ಕುಸಿತ , ಹವಾಮಾನ ಅಸ್ಥಿರತೆ, ರೋಗಬಾಧೆ ಪ್ರಮುಖ ಕಾರಣ ನೀಡಿದ್ದಾರೆ. ನಿರ್ವಹಣಾ ವೆಚ್ಚ ಏರಿಕೆ, ಗೊಬ್ಬರ ಬಳಕೆ ಕಡಿಮೆಯಾಗಿರುವುದು ಕೂಡಾ ಕಾರಣ ಇದೆ. ಆದರೆ, ಹೊಸ ತೋಟಗಳಲ್ಲಿ ಉತ್ಪಾದನೆ ಸ್ಥಿರವಾಗಿರುವ ಉದಾಹರಣೆಗಳು ಕಂಡುಬಂದರೂ, ಒಟ್ಟಾರೆಯಾಗಿ ಇಳುವರಿ ಕುಸಿತ ಸ್ಪಷ್ಟವಾಗಿ ಗೋಚರಿಸಿದೆ.
ತೋಟಗಳ ಸ್ವರೂಪ — ಸರ್ವೆಯ ಪ್ರಮುಖ ಕಂಡುಬಂದ ಅಂಶ : ಸಮೀಕ್ಷೆಯ ಪ್ರಕಾರ, ಮಿಶ್ರ ತೋಟಗಳು — 68, ಹಳೆಯ ತೋಟಗಳು — 48, ಹೊಸ ತೋಟಗಳು — 6. ಹಳೆಯ ಮತ್ತು ಮಿಶ್ರ ತೋಟಗಳಲ್ಲಿ ಉತ್ಪಾದನಾ ಸಮಸ್ಯೆ ಹೆಚ್ಚು ಕಂಡುಬಂದಿದೆ. ವಯಸ್ಸಾದ ಮರಗಳಲ್ಲಿ ಇಳುವರಿ ಕುಸಿತವಾಗುವುದು ಒಟ್ಟಾರೆ ಕುಸಿತಕ್ಕೆ ಪರೋಕ್ಷ ಕಾರಣವಾಗಬಹುದು. ಇದು ಮುಂದಿನ ದಿನಗಳಲ್ಲಿ ತೋಟ ಪುನರುಜ್ಜೀವನ (Replanting / Rejuvenation) ಅಗತ್ಯವನ್ನು ಸೂಚಿಸುತ್ತದೆ.
ತಳಿ ಆಯ್ಕೆ ಮತ್ತು ಕೃಷಿ ಪದ್ಧತಿಗಳಲ್ಲಿ ಬದಲಾವಣೆ : ಇಂದಿಗೂ ಹೆಚ್ಚಿನ ರೈತರು ಸಾಂಪ್ರದಾಯಿಕ ‘ಲೋಕಲ್’ ತಳಿಗಳ ಮೇಲೆಯೇ ನಂಬಿಕೆ ಇಟ್ಟಿದ್ದಾರೆ. ಆದರೆ ನಿಧಾನವಾಗಿ ರೈತರ ಗಮನ ಸುಧಾರಿತ ತಳಿಗಳಾದ, ಮಂಗಳ, ಮೋಹಿತ್ ನಗರ ಕಡೆಗೂ ಸೆಳೆಯುತ್ತಿದೆ. ಶೇ.55.7 ರಷ್ಟು ರೈತರು ಮಿಶ್ರ ತೋಟ ಪದ್ಧತಿ ಅನುಸರಿಸುತ್ತಿದ್ದಾರೆ. ಅಡಿಕೆಯ ಜೊತೆಗೆ ಕಾಳು ಮೆಣಸು, ಕೋಕೋ, ಬಾಳೆ ಮುಂತಾದ ಉಪಬೆಳೆಗಳನ್ನು ಬೆಳೆಸಿ ಆದಾಯದ ಮೂಲವನ್ನು ವಿಸ್ತರಿಸುವ ಪ್ರಯತ್ನವೂ ಹೆಚ್ಚಾಗಿದೆ.
ಇದು ಸಂಕಷ್ಟವೇ? ಅಥವಾ ತಾತ್ಕಾಲಿಕ ಹಂತವೇ? : ಈ ಸರ್ವೆಯ ಅಂಶಗಳನ್ನು ನೋಡಿದರೆ ಅಡಿಕೆ ಕೃಷಿಯಲ್ಲಿ ಎದುರಾಗುತ್ತಿರುವುದು ಒಂದು ಏಕಕಾಲಿಕ ಕಾರಣವಲ್ಲ, ವಿವಿಧ ಕಾರಣಗಳನ್ನು ಕಾಣಬಹುದು. ಅದರಲ್ಲಿ ಹವಾಮಾನ ಬದಲಾವಣೆ, ಮಣ್ಣಿನ ಪೋಷಕಾಂಶ ಕುಸಿತ, ಹಳೆಯ ತೋಟಗಳ ಪ್ರಮಾಣ ಹೆಚ್ಚಳ, ನಿರ್ವಹಣಾ ಕೊರತೆಗಳ ಒಟ್ಟಾರೆ ಪರಿಣಾಮವಾಗಿ ಇಳುವರಿ ಕುಸಿತ ಕಂಡುಬರುತ್ತಿದೆ.
ಆದರೆ ಹೊಸ ತೋಟಗಳಲ್ಲಿ ಸ್ಥಿರ ಉತ್ಪಾದನೆ ಕಂಡುಬರುತ್ತಿರುವುದು ಹಾಗೂ ಸುಧಾರಿತ ತಳಿ ಮತ್ತು ಮಿಶ್ರ ಕೃಷಿ ಪದ್ಧತಿಗಳ ಕಡೆಗೆ ರೈತರ ತಿರುಗುವಿಕೆಯು ಒಂದು ಪರಿವರ್ತನೆಯ ಹಂತವಾಗಿರಬಹುದು ಎಂಬ ಸೂಚನೆಯನ್ನು ನೀಡುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
A farmer survey by The Rural Mirror indicates that nearly 71% of arecanut growers have reported a significant yield decline this year, with losses ranging from 25% to over 50% in some plantations. The major reasons include ageing plantations, soil fertility decline, climate instability, pest and disease pressure, and rising maintenance costs. While traditional local varieties still dominate, farmers are slowly adopting improved varieties like Mangala and Mohitnagar and shifting towards mixed cropping systems. The trend suggests that the current situation may represent a transitional phase rather than a permanent crisis.
ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ.…
ನವದೆಹಲಿಯಲ್ಲಿ ಮಹಿಳಾ ಕೃಷಿಕರ ಪಾತ್ರ ಬಲಪಡಿಸಲು ಜಾಗತಿಕ ಸಮ್ಮೇಳನ GCWAS-2026 ಆರಂಭವಾಗಿದೆ. ನೀತಿ,…
ದೇಶದಲ್ಲಿ ಉತ್ಪಾದನೆಯಾಗುವ ಗೇರುಹಣ್ಣಿನ ಕೇವಲ 1% ಮಾತ್ರ ಮೌಲ್ಯವರ್ಧನೆಗೆ ಬಳಸಲಾಗುತ್ತಿರುವ ಹಿನ್ನೆಲೆ ಪುತ್ತೂರಿನಲ್ಲಿ…
ದಕ್ಷಿಣ ಕನ್ನಡದಲ್ಲಿ ಶೇ.48ಕ್ಕೂ ಹೆಚ್ಚು ಕರಾವಳಿ ಕಡಲ್ಕೊರೆತಕ್ಕೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಸಂಸದ ಲೋಕಸಭೆಯಲ್ಲಿ…
ಅಡಿಕೆ ತೋಟಗಳಲ್ಲಿ ಉಪಬೆಳೆಯಾಗಿ ಬೆಳೆಯುತ್ತಿರುವ ಕೊಕ್ಕೋಗೆ ಬೆಲೆ ಕುಸಿತ ದೊಡ್ಡ ಸವಾಲಾಗಿದೆ. ಮೌಲ್ಯವರ್ಧನೆ…
ರಾಜ್ಯದಲ್ಲಿ ಹೆಚ್ಚಿದ ಬಿಸಿಲಿನ ತಾಪ ಮುಂದುವರಿದರೂ ಮಾರ್ಚ್ 14 ಅಥವಾ 15ರಿಂದ ಹಲವೆಡೆ…