ಚಾಲಿ ಅಡಿಕೆ ದಾಖಲೆಯ ಧಾರಣೆ ಅಧಿಕೃತವಾಗಿ ದಾಖಲಾಯಿತು. ಅಡಿಕೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಚಾಲಿ ಅಡಿಕೆಯಲ್ಲಿ ಹೊಸ ಅಡಿಕೆ ಹಾಗೂ ಹಳೆ ಅಡಿಕೆ ಎರಡಕ್ಕೂ 500+ ಧಾರಣೆ ದಾಖಲೆಯಾಗಿದೆ. ಸೋಮವಾರ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಚಾಲಿ ಹೊಸ ಅಡಿಕೆ 500 ರೂಪಾಯಿ ಹಾಗೂ ಹಳೆ ಅಡಿಕೆ 515 ರೂಪಾಯಿಗೆ ಖರೀದಿ ನಡೆಯುತ್ತಿದೆ. ಈ ಮೂಲಕ ಅಧಿಕೃತವಾಗಿ ಅಡಿಕೆ ಧಾರಣೆ 500 ರೂಪಾಯಿಗೆ ತಲುಪಿದೆ. ಬೆಳೆಗಾರರು ಈ ಮಾರುಕಟ್ಟೆ ಖುಷಿ ನೀಡಿದೆ. ಇನ್ನೆಷ್ಟು ಏರಿಕೆ ಎನ್ನುವುದಕ್ಕಿಂತಲೂ 500 ರೂಪಾಯಿಗೆ ಆಗಿದೆ ಎನ್ನುವುದರಲ್ಲಿ ಈಗಿನ ಮಾರುಕಟ್ಟೆಯಲ್ಲಿ ಖುಷಿ ಪಡುವುದು ಉತ್ತಮವಾಗಿದೆ ಎನ್ನುವುದು ಮಾರುಕಟ್ಟೆ ವಲಯದ ಅಭಿಪ್ರಾಯ.
ಇದೇ ವೇಳೆ ಖಾಸಗಿ ವಲಯದಲ್ಲಿ 505 ರಿಂದ 510 ರೂಪಾಯಿ ವರೆಗೆ ಹೊಸ ಅಡಿಕೆ ಹಾಗೂ 515 ರಿಂದ 520 ಹಳೆ ಅಡಿಕೆ ಖರೀದಿ ನಡೆಯುತ್ತಿದೆ.
ಕುಶಾಲಿ ಗೌಡ, ಗ್ರೆಡ್ -3, ಜ್ಞಾನ ಅಕಾಡೆಮಿ, ತರಬನ ಹಳ್ಳಿ ಬೆಂಗಳೂರು |…
ಅನ್ವಿತಾ ಸಿ, 9 ನೇ ತರಗತಿ, ಸರ್ಕಾರಿ ಪ್ರೌಢಶಾಲೆ , ಪಂಜ |…
ಜಮ್ಮು ಮತ್ತು ಕಾಶ್ಮೀರ, ಕರಾವಳಿ ಕರ್ನಾಟಕ, ಕೇರಳ ಮತ್ತು ಮಾಹೆಯ ಹಲವೆಡೆ ಮುಂದಿನ…
ದಕ್ಷಿಣ ಕನ್ನಡ , ಉಡುಪಿ ಹಾಗೂ ಕೊಡಗು ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ…
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ( ನಬಾರ್ಡ್) ನ 44ನೇ…
ರೈತರಿಗೆ ‘ಎನ್‌ಪಿಕೆ 17 :17 :17 ' ಹೆಸರಿನಲ್ಲಿ ಕಳಪೆ ಗೊಬ್ಬರ ಮಾರಿದ್ದ…