ಮ್ಯಾನ್ಮಾರ್ ಅಡಿಕೆ ಆಮದು ಮಣಿಪುರ ಸರ್ಕಾರದ ಆದಾಯ ಹೆಚ್ಚಿಸಬಲ್ಲುದು…! | ಮಣಿಪುರ ಸಚಿವೆ ಹೇಳಿಕೆ |

March 3, 2023
11:22 PM

ಮಣಿಪುರದಲ್ಲಿ ಪ್ರಸ್ತುತ ಆರು ಕೈಗಾರಿಕಾ ವಲಯ ಹೊಂದಿದೆ ಮತ್ತು ಇನ್ನೂ ಎರಡು ಕೈಗಾರಿಕಾ ವಲಯ ಸ್ಥಾಪಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.  ಅದರ ಜೊತೆಗೆ ಅಡಿಕೆ ವ್ಯವಹಾರ ಸಾಕಷ್ಟು ನಡೆಯುತ್ತಿದೆ. ಆದರೆ ಕಳ್ಳಸಾಗಾಣಿಕೆ ಮೂಲಕ ನಡೆಯುತ್ತದೆ. ಇದರ ಬದಲಾಗಿ ಅಡಿಕೆ ಆಮದಿಗೆ ಅವಕಾಶ ನೀಡಿದರೆ ಸರ್ಕಾರಕ್ಕೆ ಆದಾಯ ಹೆಚ್ಚಾಗುತ್ತದೆ ಎಂದು ಮಣಿಪುರದ ಕೈಗಾರಿಕಾ ಮತ್ತು ವಾಣಿಜ್ಯ ಸಚಿವೆ ನೆಮ್ಚಾ ಕಿಪ್ಗೆನ್‌ ಹೇಳಿದ್ದಾರೆ.

Advertisement

ಮಣಿಪುರ ಸರ್ಕಾರದ ಅಧಿವೇಶನದಲ್ಲಿ  ಮಾಹಿತಿ ನೀಡಿದ ಸಚಿವೆ, ಮ್ಯಾನ್ಮಾರ್‌ನಿಂದ ಅಡಿಕೆ ಕಳ್ಳಸಾಗಾಣಿಕೆ ಮೂಲಕ ಆಮದಾಗುತ್ತಿದೆ. ಭಾರತದಲ್ಲಿ ಅಡಿಕೆ ಬಳಕೆ ಹೆಚ್ಚಿದೆ. ಆದರೆ ರಾಜ್ಯದ ಯಾವುದೇ ಉದ್ಯಮ ಅಡಿಕೆಯಿಂದ ನಡೆಸಲು ಆಗುತ್ತಿಲ್ಲ. ಅಡಿಕೆ ಬಳಕೆ ಇಂದು ಬಟ್ಟೆ ಉದ್ಯಮದಲ್ಲೂ ಇರುವುದರಿಂದ ಹೆಚ್ಚಿನ ಬೇಡಿಕೆ ಇದೆ. ಇದಕ್ಕಾಗಿ ಅಡಿಕೆ ವ್ಯಾಪಾರಕ್ಕೆ ಅನುವು ಮಾಡಿಕೊಡಲು, ಅಡಿಕೆ ಆಮದಿಗೂ ಅವಕಾಶ ನೀಡಲು ರಾಜ್ಯ ಸರ್ಕಾರವು ಕೆಲವು ಉಪಕ್ರಮಗಳನ್ನು ಕೈಗೊಂಡರೆ ರಾಜ್ಯದ ಆರ್ಥಿಕತೆಯನ್ನು ಹೆಚ್ಚಿಸಬಹುದು ಎಂದು ಅವರು ಸದನಕ್ಕೆ ಹೇಳಿದರು.

ಮ್ಯಾನ್ಮಾರ್‌ ಅಡಿಕೆಯು ಕಳ್ಳದಾರಿಯ ಮೂಲಕ  ತ್ರಿಪುರಾ, ಮಣಿಪುರ, ನಾಗಾಲ್ಯಾಂಡ್‌, ಮೇಘಾಲಯ, ಅಸ್ಸಾಂ ರಾಜ್ಯಗಳಲ್ಲಿ ಹಾದು ಭಾರತದೊಳಕ್ಕೆ ಪ್ರವೇಶ ಮಾಡುತ್ತಿದೆ. ಇದರಿಂದ ದೇಶದ ಅಡಿಕೆ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತದೆ. ಹಾಗಿದ್ದೂ ಅಧಿಕೃತವಾಗಿ ಅಡಿಕೆ ಆಮದಿಗೆ ಅನುಮತಿ ದೊರೆತರೆ ಭಾರತದ ಅಡಿಕೆಯ ಮೇಲೆ ಸ್ವಲ್ಪ ಪ್ರಮಾಣದಲ್ಲಿ ಪರಿಣಾಮ ಬೀರಬಹುದು.

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ವಿಶ್ಲೇಷಣೆ

ಸಮಾಜದ ಚರ್ಚೆಯ ಪ್ರತಿಬಿಂಬ

ಇದನ್ನೂ ಓದಿ

ಅನ್ನದ ಪರಿಮಳ ಮನವರಳಿಸ ಬಹುದಲ್ಲವೇ..!
April 16, 2025
11:18 AM
by: ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ
ಹೆಚ್ಚಿನ ಮೌಲ್ಯದ ಹಣ್ಣಿನ ಬೆಳೆಗಳ ಕುರಿತು ಚರ್ಚೆ | ಹಲಸು , ಡ್ರಾಗನ್‌ಫ್ರುಟ್‌ ಕೃಷಿಯ ಕಡೆಗೆ ಆದ್ಯತೆ |
April 16, 2025
10:50 AM
by: The Rural Mirror ಸುದ್ದಿಜಾಲ
ದೆಹಲಿಯಲ್ಲಿ ಹೀಟ್‌ವೇವ್‌ , ಬಿಹಾರದಲ್ಲಿ ಮಳೆ, ಕರ್ನಾಟಕದಲ್ಲಿ ಬಿಸಿ ಗಾಳಿ ಎಚ್ಚರಿಕೆ |
April 16, 2025
8:14 AM
by: The Rural Mirror ಸುದ್ದಿಜಾಲ
ಹೊಸರುಚಿ| ಗುಜ್ಜೆ ರೋಲ್
April 16, 2025
8:00 AM
by: ದಿವ್ಯ ಮಹೇಶ್

You cannot copy content of this page - Copyright -The Rural Mirror

Join Our Group