ಮಣಿಪುರದಲ್ಲಿ ಪ್ರಸ್ತುತ ಆರು ಕೈಗಾರಿಕಾ ವಲಯ ಹೊಂದಿದೆ ಮತ್ತು ಇನ್ನೂ ಎರಡು ಕೈಗಾರಿಕಾ ವಲಯ ಸ್ಥಾಪಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಅದರ ಜೊತೆಗೆ ಅಡಿಕೆ ವ್ಯವಹಾರ ಸಾಕಷ್ಟು ನಡೆಯುತ್ತಿದೆ. ಆದರೆ ಕಳ್ಳಸಾಗಾಣಿಕೆ ಮೂಲಕ ನಡೆಯುತ್ತದೆ. ಇದರ ಬದಲಾಗಿ ಅಡಿಕೆ ಆಮದಿಗೆ ಅವಕಾಶ ನೀಡಿದರೆ ಸರ್ಕಾರಕ್ಕೆ ಆದಾಯ ಹೆಚ್ಚಾಗುತ್ತದೆ ಎಂದು ಮಣಿಪುರದ ಕೈಗಾರಿಕಾ ಮತ್ತು ವಾಣಿಜ್ಯ ಸಚಿವೆ ನೆಮ್ಚಾ ಕಿಪ್ಗೆನ್ ಹೇಳಿದ್ದಾರೆ.
ಮಣಿಪುರ ಸರ್ಕಾರದ ಅಧಿವೇಶನದಲ್ಲಿ ಮಾಹಿತಿ ನೀಡಿದ ಸಚಿವೆ, ಮ್ಯಾನ್ಮಾರ್‌ನಿಂದ ಅಡಿಕೆ ಕಳ್ಳಸಾಗಾಣಿಕೆ ಮೂಲಕ ಆಮದಾಗುತ್ತಿದೆ. ಭಾರತದಲ್ಲಿ ಅಡಿಕೆ ಬಳಕೆ ಹೆಚ್ಚಿದೆ. ಆದರೆ ರಾಜ್ಯದ ಯಾವುದೇ ಉದ್ಯಮ ಅಡಿಕೆಯಿಂದ ನಡೆಸಲು ಆಗುತ್ತಿಲ್ಲ. ಅಡಿಕೆ ಬಳಕೆ ಇಂದು ಬಟ್ಟೆ ಉದ್ಯಮದಲ್ಲೂ ಇರುವುದರಿಂದ ಹೆಚ್ಚಿನ ಬೇಡಿಕೆ ಇದೆ. ಇದಕ್ಕಾಗಿ ಅಡಿಕೆ ವ್ಯಾಪಾರಕ್ಕೆ ಅನುವು ಮಾಡಿಕೊಡಲು, ಅಡಿಕೆ ಆಮದಿಗೂ ಅವಕಾಶ ನೀಡಲು ರಾಜ್ಯ ಸರ್ಕಾರವು ಕೆಲವು ಉಪಕ್ರಮಗಳನ್ನು ಕೈಗೊಂಡರೆ ರಾಜ್ಯದ ಆರ್ಥಿಕತೆಯನ್ನು ಹೆಚ್ಚಿಸಬಹುದು ಎಂದು ಅವರು ಸದನಕ್ಕೆ ಹೇಳಿದರು.
ಮ್ಯಾನ್ಮಾರ್ ಅಡಿಕೆಯು ಕಳ್ಳದಾರಿಯ ಮೂಲಕ ತ್ರಿಪುರಾ, ಮಣಿಪುರ, ನಾಗಾಲ್ಯಾಂಡ್, ಮೇಘಾಲಯ, ಅಸ್ಸಾಂ ರಾಜ್ಯಗಳಲ್ಲಿ ಹಾದು ಭಾರತದೊಳಕ್ಕೆ ಪ್ರವೇಶ ಮಾಡುತ್ತಿದೆ. ಇದರಿಂದ ದೇಶದ ಅಡಿಕೆ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತದೆ. ಹಾಗಿದ್ದೂ ಅಧಿಕೃತವಾಗಿ ಅಡಿಕೆ ಆಮದಿಗೆ ಅನುಮತಿ ದೊರೆತರೆ ಭಾರತದ ಅಡಿಕೆಯ ಮೇಲೆ ಸ್ವಲ್ಪ ಪ್ರಮಾಣದಲ್ಲಿ ಪರಿಣಾಮ ಬೀರಬಹುದು.
ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…
https://youtu.be/PgODhBnoUso?si=CtTWIV_6u7GnfVGw
ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…
ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…
ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…