#Arecanut | ಹೊಸ ಅಡಿಕೆಗೆ ಹೆಚ್ಚಿದ ಬೇಡಿಕೆ | ಆಮದು ಅಡಿಕೆಗೆ ಮತ್ತೆ ತಡೆ | 1.06 ಕೋಟಿ ರೂಪಾಯಿ ಮೌಲ್ಯದ ಅಡಿಕೆ ವಶ |

July 13, 2023
9:00 AM
ಅಡಿಕೆ ಮಾರುಕಟ್ಟೆಯಲ್ಲಿ ಚೇತರಿಕೆ ಕಾಣುತ್ತಿದೆ. ಚಾಲಿ ಹೊಸ ಅಡಿಕೆಗೆ ಬೇಡಿಕೆ ವ್ಯಕ್ತವಾಗುತ್ತಿದೆ. ಈ ನಡುವೆ ಕಳ್ಳ ದಾರಿಯ ಮೂಲಕ ಭಾರತದೊಳಕ್ಕೆ ಆಮದಾಗುತ್ತಿದ್ದ ಸುಮಾರು 1012 ಚೀಲ ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ.

ಅಡಿಕೆ ಮಾರುಕಟ್ಟೆಯಲ್ಲಿ ಮತ್ತೆ ಚೇತರಿಕೆ ಕಂಡುಬಂದಿದೆ. ಕಳೆದ ಸೋಮವಾರದ ನಂತರ ಮಾರುಕಟ್ಟೆಯಲ್ಲಿ ಉತ್ಸಾಹ ಕಂಡುಬಂದಿದೆ. ಆದರೆ ಹೊಸ ಅಡಿಕೆಗೆ ಮಾತ್ರಾ ಸದ್ಯ ಬೇಡಿಕೆಯ ಲಕ್ಷಣಗಳು ಇವೆ. ಚಾಲಿ ಅಡಿಕೆಯಲ್ಲಿ ಹಳೆ ಅಡಿಕೆ ಹಾಗೂ ಹೊಸ ಅಡಿಕೆಯ ನಡುವೆ ಹೆಚ್ಚಿನ ವ್ಯತ್ಯಾಸ ಇದ್ದು, ಈ ಅಂತರ ಕಡಿಮೆಯಾಗುವ ಸಾಧ್ಯತೆ ಇದೆ. ಈ ನಡುವೆಯೇ ಅಡಿಕೆ ಆಮದು ಪ್ರಯತ್ನ ನಡೆಯುತ್ತಿದೆ. ಇದೀಗ ಅಕ್ರಮ ಅಡಿಕೆ ತಡೆಯಾಗಿದ್ದು 1.06 ಕೋಟಿ ಮೌಲ್ಯದ ಅಡಿಕೆಯಲ್ಲಿ ಅಸ್ಸಾಂ ಗಡಿಯಲ್ಲಿ ಅಸ್ಸಾಂ ರೈಫಲ್ಸ್‌ ವಶಕ್ಕೆ ಪಡೆದಿದ್ದಾರೆ.

ಕಳ್ಳ ದಾರಿಯ ಮೂಲಕ ಸುಮಾರು 1012 ಚೀಲ ಅಡಿಕೆಯನ್ನು ಭಾರತದೊಳಕ್ಕೆ ತರುವ ಪ್ರಯತ್ನ ನಡೆಯುತ್ತಿತ್ತು. ಈ ಸಂದರ್ಭ ಅಸ್ಸಾಂ ರೈಪಲ್ಸ್‌ ಅಡಿಕೆಯನ್ನು ವಶಪಡಿಸಿಕೊಂಡಿದೆ. ತನಿಖೆಯನ್ನು ಮುಂದುವರಿಸಿದ್ದಾರೆ.

ಭಾರತದಲ್ಲಿ ಅಡಿಕೆಯ ಕೊರತೆ ಇದ್ದರೂ ಮಾರುಕಟ್ಟೆ ಸ್ಥಿರತೆಯನ್ನು ಕಾಯ್ದುಕೊಳ್ಳಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಅಡಿಕೆಯ ಕೊರತೆ ಹಾಗೂ ಅಡಿಕೆ ದಾಸ್ತಾನಿನಲ್ಲೂ ವ್ಯತ್ಯಾಸ ಇರುವುದರಿಂದ ಧಾರಣೆಯಲ್ಲಿ ಇಳಿಕೆಯಾಗಿಲ್ಲ. ಇದೀಗ ಅಡಿಕೆ ದಾಸ್ತಾನು ಕಡೆಗೆ ಅಡಿಕೆ ವ್ಯಾಪಾರಿಗಳು ಮನಸ್ಸು ಮಾಡಿದ್ದು, ಈಗ ಹೊಸ ಅಡಿಕೆ ದಾಸ್ತಾನು ಮಾಡಲುವ ಮೂಲಕ ಮುಂದಿನ ಎರಡು ತಿಂಗಳಲ್ಲಿ ಹಳೆ ಅಡಿಕೆ ಧಾರಣೆಗೆ ಮಾರಾಟ ಮಾಡುವ ಉದ್ದೇಶ ಹೊಂದಲಾಗಿದೆ ಎನ್ನುವುದು ಮಾರುಕಟ್ಟೆ ಮಾಹಿತಿ. ಸದ್ಯ ಹೊಸ ಅಡಿಕೆ ಮಾರುಕಟ್ಟೆ ಏರುಗತಿಯಲ್ಲಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಹಾರಾಷ್ಟ್ರದಲ್ಲಿ50 ಕ್ಕೂ ಹೆಚ್ಚು ಅಡಿಕೆ ಲಾರಿಗಳಿಗೆ ತಡೆ – ವ್ಯಾಪಾರಿಗಳಿಗೆ ಸಂಕಷ್ಟ- ಶಿವಮೊಗ್ಗ ಸಂಸದ, ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಮನವಿ
June 19, 2026
10:54 PM
by: ದ ರೂರಲ್ ಮಿರರ್.ಕಾಂ
ಮುಂಗಾರು ದುರ್ಬಲ – ದೇಶದಲ್ಲಿ 40% ಮಳೆ ಕೊರತೆ, ಕರಾವಳಿ ಕರ್ನಾಟಕಕ್ಕೆ ಜೂನ್ 25ರ ಬಳಿಕ ಮಳೆ ನಿರೀಕ್ಷೆ
June 19, 2026
9:46 PM
by: ದ ರೂರಲ್ ಮಿರರ್.ಕಾಂ
ಇ-ವೇ ಬಿಲ್ ಹಾಗೂ ಸಾರಿಗೆ ದಾಖಲೆಗಳ ಕೊರತೆ – 33.6 ಟನ್ ಅಡಿಕೆ ಜಪ್ತಿ ಕ್ರಮವನ್ನು ಎತ್ತಿಹಿಡಿದ ನ್ಯಾಯಾಲಯ
June 19, 2026
9:18 PM
by: ದ ರೂರಲ್ ಮಿರರ್.ಕಾಂ
PM-KISAN 23ನೇ ಕಂತು ಬಿಡುಗಡೆಗೆ ಸಿದ್ಧತೆ – ಕರ್ನಾಟಕದ 41.54 ಲಕ್ಷ ರೈತರಿಗೆ ₹830.83 ಕೋಟಿ ಜಮೆ
June 19, 2026
8:44 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror