ಅಡಿಕೆ ಹಳದಿ ಎಲೆರೋಗ ಹಾಟ್‌ಸ್ಫಾಟ್‌ ಪ್ರದೇಶದಲ್ಲಿ ಆಶಾಕಿರಣ | ಸತತ ಪ್ರಯತ್ನದ ಬಳಿಕ ಅಡಿಕೆ ಫಸಲು ಕಂಡ ಕೃಷಿಕ |

December 5, 2023
10:35 PM
ಸಂಪಾಜೆಯ ಅಡಿಕೆ ಹಳದಿ ಎಲೆರೋಗ ಪೀಡಿತ ಪ್ರದೇಶ ಅದರಲ್ಲೂ ಹಾಟ್‌ಸ್ಫಾಟ್‌ ಪ್ರದೇಶದಲ್ಲಿ ಮತ್ತೆ ಅಡಿಕೆ ಬೆಳೆದು ಫಸಲು ಕಾಣುವ ಮೂಲಕ ಕೃಷಿಕರಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ ಸಂಪಾಜೆಯ ಜೇಡ್ಲದ ಕೃಷಿಕ ಶ್ರೀಧರ ಭಟ್.

ಅಡಿಕೆ ಬೆಳೆಗಾರರಿಗೆ ಈಚೆಗೆ ಕಾಡುತ್ತಿರುವ ಸಮಸ್ಯೆಗಳಲ್ಲಿ ಎಲೆಚುಕ್ಕಿ ಹಾಗೂ ಹಳದಿ ಎಲೆರೋಗ. ಅದರಲ್ಲೂ ಸಂಪಾಜೆ ಸೇರಿದಂತೆ ಹಲವು ಕಡೆಗಳಲ್ಲಿ ಅಡಿಕೆ ಹಳದಿ ಎಲೆರೋಗದಿಂದ ತೋಟವೇ ನಾಶವಾಗಿತ್ತು. ಇದೀಗ ಅನೇಕ ವರ್ಷಗಳ ಬಳಿಕ ಸತತ ಪ್ರಯತ್ನದಿಂದ ಸಂಪಾಜೆಯಂತಹ ಹಳದಿ ಎಲೆರೋಗ ಹಾಟ್‌ಸ್ಫಾಟ್‌ ಪ್ರದೇಶದಲ್ಲಿ ಅಡಿಕೆ ಬೆಳೆದು ಕೃಷಿಕರೊಬ್ಬರು ಫಸಲು ಕಂಡಿದ್ದಾರೆ.

Advertisement

ಸುಳ್ಯ ತಾಲೂಕು ಗಡಿಭಾಗವಾದ ಸಂಪಾಜೆಯ ಜೇಡ್ಲ ಪ್ರದೇಶದಲ್ಲಿರುವ ಕೃಷಿಕ ಶ್ರೀಧರ್‌ ಭಟ್‌ ಜೇಡ್ಲ ಅವರು  ಅನೇಕ ವರ್ಷಗಳಿಂದ ಅಡಿಕೆ ಕೃಷಿ ಮಾಡಿಕೊಂಡು ಬಂದವರು. ಸುಮಾರು 20 ವರ್ಷಗಳ ಹಿಂದೆ ಹಳದಿ ಎಲೆರೋಗ ಕಾಣಿಸಿಕೊಂಡು ಅಡಿಕೆ ತೋಟ ನಾಶವಾಗಿತ್ತು. ಅಡಿಕೆ ಬೆಳೆ ಸಂಪೂರ್ಣ ನಾಶವಾಗಿ ರಬ್ಬರ್‌ ಸೇರಿದಂತೆ ಪರ್ಯಾಯ ಬೆಳೆಯತ್ತ ಹೋದವರು. 2016 ರ ಸುಮಾರಿಗೆ ಇದ್ದ ಅಡಿಕೆ ಮರಗಳನ್ನು ಕಡಿದು ಮತ್ತೆ ಅಡಿಕೆ ಗಿಡಗಳ ಮರುನಾಟಿ ಮಾಡಿದರು. ಸತತ ಪ್ರಯತ್ನದಿಂದ ಹಾಗೂ ಸೂಕ್ತ ರೀತಿಯಲ್ಲಿ ತೋಟ ನಿರ್ವಹಣೆ ಮಾಡುತ್ತಾ ಬಂದರು. ಗಿಡ ಉತ್ತಮವಾಗಿ ಬೆಳೆಯಿತು.

ಅಡಿಕೆ ತೋಟ
ಶ್ರೀಧರ ಭಟ್‌, ಜೇಡ್ಲ

ಕಳೆದ ವರ್ಷ ಮೂಲತ: ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದು ಇಂದೋರ್‌ನ ಶ್ರೀಸಿದ್ಧಿ ಎಗ್ರಿ ಕೆಮಿಕಲ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಪೆರುವೋಡಿ ನಾರಾಯಣ ಭಟ್‌ ಅವರ ಸಂಪರ್ಕದಿಂದ ಕೆಲವು ಔಷಧಿಗಳನ್ನು ಹಳದಿ ಎಲೆರೋಗ ನಿಯಂತ್ರಣಕ್ಕಾಗಿ ಹಾಗೂ ಗಿಡಗಳ ಬೆಳವಣಿಗೆಗೆ ಅಗತ್ಯವಾದ ಔಷಧಿಗಳನ್ನು ಅವರ ಸಲಹೆಯಂತೆಯೇ ಬಳಕೆ ಮಾಡಿದರು. ಅಂದರೆ ಹಳದಿ ಎಲೆರೋಗವು ಟೊಮೆಟೋ ಸೇರಿದಂತೆ ಹಲವು ಬೆಳೆಗಳಲ್ಲಿ ಕಾಣಿಸುತ್ತಿದೆ. ಈ ಬೆಳೆಗಳಲ್ಲಿ ಮಾಡುವ ಪ್ರಯೋಗಗಳನ್ನು ಅಡಿಕೆ ಬೆಳೆಯ ಹಳದಿ ಎಲೆರೋಗದಲ್ಲೂ ಪ್ರಯೋಗ ಮಾಡಿದರು. ಇದೀಗ ಸಂಪಾಜೆಯಲ್ಲೂ ಈ ಪ್ರಯೋಗವನ್ನು ಮಾಡಿದ್ದಾರೆ. ಹೀಗಾಗಿ ಸದ್ಯ ಅಡಿಕೆ ಫಸಲು ಉತ್ತಮವಾ ಸಂಪಾಜೆಯ ಜೇಡ್ಲದಲ್ಲಿ‌ ಕಂಡುಬಂದಿದೆ. ಈ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯಬೇಕಿದೆ. ಇನ್ನೂ ಒಂದೆರಡು ವರ್ಷ ಇದೇ ಔಷಧಿಯ ಪ್ರಯೋಗ ನಡೆದ ಬಳಿಕ ಅಂತಿಮವಾದ ನಿರ್ಧಾರಕ್ಕೆ ಬರಬೇಕಿದೆ.ಆರಂಭದ ಹಂತದಲ್ಲಿ ಅಡಿಕೆ ಬೆಳೆಯಲ್ಲಿ ಈ ಪ್ರಯೋಗ ಯಶಸ್ಸಾಗಿದ್ದು ಸಂಪಾಜೆಯ ಜೇಡ್ಲ ಶ್ರೀಧರ ಭಟ್‌ ಅವರು ಈ ಪ್ರಯೋಗದಲ್ಲಿ ವಿಶ್ವಾಸ ಹೊಂದಿದ್ದಾರೆ. ಅಡಿಕೆಯ ಗುಣಮಟ್ಟದಲ್ಲಿ ಕೂಡಾ ಹಳದಿ ಎಲೆರೋಗ ಪೀಡತ ಪ್ರದೇಶದ ಮಾದರಿಯಂತಹ ಯಾವುದೇ ವ್ಯತ್ಯಾಸಗಳು ಕಂಡುಬಂದಿಲ್ಲ.

ಅಡಿಕೆ ಹಳದಿ ಎಲೆರೋಗ ನಿಯಂತ್ರಣ ಹಾಗೂ ನಿವಾರಣೆಯ ದೃಷ್ಟಿಯಿಂದ ವಿವಿಧ ಪ್ರಯತ್ನಗಳು ನಡೆಯುತ್ತಲೇ ಇದೆ. ವೈಜ್ಞಾನಿಕ ಅಧ್ಯಯನ , ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿದೆ. ಈ ಕಡೆ ಹಳದಿ ಎಲೆರೋಗದ ಹಾಟ್‌ ಸ್ಫಾಟ್‌ ಪ್ರದೇಶದಲ್ಲೂ ಮತ್ತೆ ಮತ್ತೆ ಅಡಿಕೆ ಗಿಡ ನಾಟಿ ಮಾಡುತ್ತಲೇ ಇದ್ದಾರೆ. ಇದೀಗ ಇಂತಹ ಹೊಸ ಪ್ರಯೋಗದ ಮೂಲಕ ಅಡಿಕೆ ಗಿಡಗಳ ಆಯಸ್ಸು ಹೆಚ್ಚಿಸುವ, ಉತ್ತಮ ಫಸಲು ನೀಡುವ ಪ್ರಯೋಗಗಳು ಅಡಿಕೆ ಬೆಳೆಗಾರರಿಗೆ ಭರವಸೆ ಮೂಡಿಸುತ್ತಿದೆ.

ಅಡಿಕೆ ಫಸಲು

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಭದ್ರ ಜಲಾಶಯದಿಂದ ತುಂಗಭದ್ರಾ ನದಿಗೆ 8 ಸಾವಿರ ಕ್ಯೂಸೆಕ್ ನೀರು | ನದಿಪಾತ್ರದ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ
April 1, 2025
9:38 PM
by: The Rural Mirror ಸುದ್ದಿಜಾಲ
ಮನ್ರೇಗಾ ಕೂಲಿ ದರ ದಿನಕ್ಕೆ 370 ರೂಪಾಯಿಗೆ ಏರಿಕೆ
April 1, 2025
9:28 PM
by: The Rural Mirror ಸುದ್ದಿಜಾಲ
ನಾಳೆಯಿಂದ ರಾಜ್ಯದ ಹಲವೆಡೆ ಮಳೆ | ಹವಾಮಾನ ಇಲಾಖೆ ಎಚ್ಚರಿಕೆ |
April 1, 2025
8:46 PM
by: The Rural Mirror ಸುದ್ದಿಜಾಲ
15 ದಶಲಕ್ಷ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ತಪಾಸಣೆ | 200 ಡೇ-ಕೇರ್ ಕ್ಯಾನ್ಸರ್ ಕೇಂದ್ರ ಸ್ಥಾಪನೆ
April 1, 2025
8:20 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group