ದೀಪಾವಳಿ ಬಳಿಕ ಅಡಿಕೆ ಮಾರುಕಟ್ಟೆಯಲ್ಲಿ ಪ್ರತೀ ವರ್ಷದಂತೆಯೇ ಸಂಚಲನ ಆರಂಭವಾಗಿದೆ. ಹೊಸ ಅಡಿಕೆಯ ಆವಕ-ಹಳೆ ಅಡಿಕೆಯ ಟ್ರೆಂಡ್- ಚೋಲ್-ಡಬಲ್ ಚೋಲ್ ಅಡಿಕೆಯ ಸದ್ದು ಜೋರಾಗುತ್ತಿದೆ. ಈ ಬಾರಿ ಅಡಿಕೆ ಮಾರುಕಟ್ಟೆಯಲ್ಲಿ ಆಶಾದಾಯಕ ವಾತಾವರಣ ಇದೆ.…..ಮುಂದೆ ಓದಿ….
ಹೊಸ ಅಡಿಕೆ ಮಾರುಕಟ್ಟೆ ಪ್ರವೇಶ ಮಾಡುತ್ತಿದೆ. ಆರಂಭದಲ್ಲಿ ಈ ಬಾರಿ ಹೊಸ ಅಡಿಕೆಯ ಧಾರಣೆ 330-340 ರೂಪಾಯಿ ನಿಗದಿಯಾಗಿದ್ದು ಕ್ಯಾಂಪ್ಕೋ 330 ರೂಪಾಯಿ ದರ ನಿಗದಿ ಮಾಡಿದೆ. ಇದೇ ವೇಳೆ ಚೋಲ್ ಅಡಿಕೆ ಧಾರಣೆಯು 420-425 ರೂಪಾಯಿವರೆಗೆ ಇದ್ದು, ಡಬಲ್ ಚೋಲ್ ಅಡಿಕೆ 500-505 ರೂಪಾಯಿವರೆಗೆ ತಲಪಿದೆ.
ಈ ಬಾರಿ ಆರಂಭದಲ್ಲಿಯೇ ಹೊಸ ಅಡಿಕೆ ಧಾರಣೆ ನಿರೀಕ್ಷೆಯಂತೆಯೇ ಉತ್ತಮ ದರಕ್ಕೆ ನಿಗದಿಯಾಗಿದೆ. ಹೀಗಾಗಿ ಮುಂದಿನ ಒಂದೆರಡು ತಿಂಗಳಲ್ಲಿ 360-370 ರೂಪಾಯಿಗೆ ಏರಿಕೆಯಾಗುವ ನಿರೀಕ್ಷೆ ಇದೆ. ಚೋಲ್ ಅಡಿಕೆ ಮಾರುಕಟ್ಟೆ ಪ್ರವೇಶ ಕಡಿಮೆಯಾಗಲು ಆರಂಭವಾಗಿದೆ. ಹೀಗಾಗಿ ಧಾರಣೆ ಏರಿಕೆ ನಿರೀಕ್ಷೆ ಮಾಡಲಾಗಿದೆ. ಡಿಸೆಂಬರ್ ನಂತರ ಹೊಸ ಅಡಿಕೆ ಧಾರಣೆಯೂ ಏರಿಕೆಯಾಗುತ್ತದೆ. ಈ ನಡುವೆ ಕೆಂಪಡಿಕೆ ಮಾರುಕಟ್ಟೆಯೂ ಈಗ ಚೇತರಿಕೆ ಕಾಣುತ್ತಿದೆ.
ಈ ಬಾರಿ ಅಡಿಕೆ ಬೆಳೆಯೇ ಶೇ.50 ರಷ್ಟು ಕಡಿಮೆಯಾಗಿದೆ. ಬೇಸಗೆಯಲ್ಲಿ ತಾಪಮಾನದ ಕಾರಣದಿಂದ ಎಳೆ ಅಡಿಕೆ ವಿಪರೀತವಾಗಿ ಉದುರಿದೆ. ಈ ಬಾರಿ ಮಳೆ ಬಂದ ಬಳಿಕವೂ ಹಲವು ಕಡೆ ಎಳೆ ಅಡಿಕೆ ಬಿದ್ದು ಹೋಗಿದೆ. ಮಳೆ ಆರಂಭವಾದ ಬಳಿಕ ವಿಪರೀತವಾಗಿ ಸುರಿದ ಕಾರಣ ಕೊಳೆರೋಗವೂ ಹಲವು ಕಡೆ ಬಾಧಿಸಿದೆ. ಈ ಎಲ್ಲಾ ಕಾರಣದಿಂದ ಇಳುವರಿ ಕಡಿಮೆಯಾಗಿದೆ. ಈ ಕಾರಣದಿಂದ ಮಾರುಕಟ್ಟೆಗೆ ಅಡಿಕೆ ಬರುವುದು ಈ ಬಾರಿ ಕಡಿಮೆಯಾಗಲಿದೆ. ಕಳೆದ ಬಾರಿಯ ಹಳೆ ಅಡಿಕೆ ಇರಬಹುದು ಎನ್ನುವ ಯೋಚನೆಯೂ ತಪ್ಪಾಗಿದೆ. ಎರಡು ವರ್ಷಗಳಿಂದ ಅಡಿಕೆ ಧಾರಣೆ ಉತ್ತಮವಾಗಿತ್ತು. ಕಳೆದ ವರ್ಷದ ಅಡಿಕೆ ಧಾರಣೆ ನಿರೀಕ್ಷೆಯಂತೆ ಏರಿಕೆ ಕಂಡಿಲ್ಲ. ಹೀಗಾಗಿ ಮಾರುಕಟ್ಟೆಗೆ ಹೆಚ್ಚು ಅಡಿಕೆ ಪ್ರವೇಶ ಕಂಡಿದೆ. ಕೆಲವು ಅಡಿಕೆ ಬೆಳೆಗಾರರಲ್ಲಿ ಮಾತ್ರವೇ ಅಡಿಕೆ ದಾಸ್ತಾನು ಇದೆಯಷ್ಟೆ ಬಿಟ್ಟರೆ, ಸಾಮಾನ್ಯ ಕೃಷಿಕರಲ್ಲಿ ಹಳೆ ಅಡಿಕೆ ದಾಸ್ತಾನು ಸೀಮಿತವಾಗಿದೆ. ಹೀಗಾಗಿ ಈ ಬಾರಿ ಹೊಸ ಅಡಿಕೆ ಧಾರಣೆ ಉತ್ತಮವಾಗಲಿದೆ. ಬೇಡಿಕೆಯಷ್ಟು ಪೂರೈಕೆಯಾಗುವುದು ಈ ಬಾರಿ ಸಂಶಯ. ಈ ಕಾರಣದಿಂದಲೇ ಈಗ ಅಡಿಕೆ ಅಕ್ರಮ ಆಮದು ಚಟುವಟಿಕೆ ಈಗಲೇ ಆರಂಭಗೊಂಡಿದೆ. ಅಡಿಕೆ ಆಮದು ತಡೆಗೆ ಈಗಲೇ ಸೂಕ್ತವಾದ ಕ್ರಮಗಳನ್ನು ಕೈಗೊಂಡರೆ ಅಡಿಕೆ ಧಾರಣೆ ಏರಿಕೆ ನಿಶ್ಚಿತವಾಗಿಯೂ ಬೆಳೆಗಾರರಿಗೆ ಪ್ರಯೋಜನವಾಗಲಿದೆ.
ಬಾಂಗ್ಲಾದೇಶದಿಂದ ಅಕ್ರಮವಾಗಿ ಅಡಿಕೆ ಸಾಗಾಣೆ ನಡೆಯುದನ್ನು ತಡೆಯಬೇಕು ಎಂದು ಮೇಘಾಲಯದ ಅಡಿಕೆ ಬೆಳೆಗಾರರು ಕೂಡಾ ಒತ್ತಾಯಿಸಿದ್ದಾರೆ. ಅಡಿಕೆ, ಗೋಡಂಬಿ, ಕರಿಮೆಣಸು ಮತ್ತು ರಬ್ಬರ್ ಪ್ರಧಾನ ಬೆಳೆಗಳೊಂದಿಗೆ ಮೇಘಾಲಯದ ಹಲವು ಕಡೆ ಹಳ್ಳಿಗರು ಕೃಷಿ ಮತ್ತು ತೋಟಗಾರಿಕೆಯನ್ನು ತಮ್ಮ ಪ್ರಾಥಮಿಕ ಆದಾಯದ ಮೂಲವಾಗಿ ಅವಲಂಬಿಸಿದ್ದಾರೆ. ಹೀಗಾಗಿ ಅಡಿಕೆ ಅಕ್ರಮ ಆಮದು ಅಲ್ಲೂ ಸಮಸ್ಯೆಯಾಗುತ್ತಿದೆ. ಹೀಗಾಗಿ ಈ ಬಾರಿ ಅಡಿಕೆ ಆಮದು ತಡೆಗೆ ಈಶಾನ್ಯ ರಾಜ್ಯದ ಕೃಷಿಕರೂ ಒತ್ತಾಯ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ರಾಜ್ಯದಿಂದ ಅಡಿಕೆ ಆಮದು ಸ್ಥಗಿತಕ್ಕೆ ಒತ್ತಡವಾದರೆ ಅಡಿಕೆ ಬೆಳೆಗಾರರಿಗೆ ಈ ಬಾರಿ ಉತ್ತಮ ಧಾರಣೆಯ ನಿರೀಕ್ಷೆ ಇದೆ. ಆದರೆ ಈಗಾಗಲೇ ಬೆಳೆ ವಿಸ್ತರಣೆಯಾಗಿರುವ ಹಿನ್ನೆಲೆಯಲ್ಲಿ ಈ ಧಾರಣೆ ಮುಂದಿನ ಕೆಲವು ವರ್ಷಗಳಲ್ಲೂ ಇರುವ ಸಾಧ್ಯತೆ ಕಡಿಮೆ ಇದೆ.
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…