ತರಬೇತಿ ವೇಳೆ ದಕ್ಷಿಣ ಕೊರಿಯಾದ ಎರಡು ವಾಯುಪಡೆಯ ವಿಮಾನಗಳು ಶುಕ್ರವಾರ ಪರಸ್ಪರ ಡಿಕ್ಕಿ ಹೊಡೆದು ಮೂವರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ ಎರಡು KT-1 ತರಬೇತುದಾರ ವಿಮಾನಗಳು ಡಿಕ್ಕಿ ಹೊಡೆದಿವೆ. ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಕೊರಿಯಾದ ಆಗ್ನೇಯ ನಗರವಾದ ಸಚೆನ್ನಲ್ಲಿ ಘಟನೆ ನಡೆದಿದ್ದಾಗಿ ಅಲ್ಲಿನ ಏರ್ಫೋರ್ಸ್ ಹೇಳಿದೆ. ಪೈಲಟ್ಗಳು ಮೃತಪಟ್ಟ ಬಗ್ಗೆ ಏರ್ಫೋರ್ಸ್ ದೃಢಪಡಿಸಿಲ್ಲ. ಆದರೆ ದಕ್ಷಿಣ ಕೊರಿಯಾದ ಸುದ್ದಿ ಮಾಧ್ಯಮ ಯೊನ್ಹಾಪ್ ಈ ಬಗ್ಗೆ ವರದಿ ಮಾಡಿದೆ. ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು ಕೆಳಗೆ ಬಿದ್ದಿವೆ. ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸುಮಾರು 30 ಸಿಬ್ಬಂದಿ ತೆರಳಿದ್ದಾರೆ. ಅಷ್ಟೇ ಅಲ್ಲ, ರಕ್ಷಣಾ ಪಡೆಗಳೂ ಧಾವಿಸಿವೆ ಎನ್ನಲಾಗಿದೆ.
ಮೂರು ಹೆಲಿಕಾಪ್ಟರ್‌ಗಳು, 20 ವಾಹನಗಳು ಮತ್ತು ಹತ್ತಾರು ತುರ್ತು ಕಾರ್ಯಕರ್ತರನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…