ಕೋವಿಡ್-19 ಸೋಂಕಿನ XE ಹೊಸ ರೂಪಾಂತರದ ಬಗ್ಗೆ ಜನರು ಯಾವುದೇ ಕಾರಣಕ್ಕೆ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥ ಎನ್ ಕೆ ಅರೋರಾ ಹೇಳಿದ್ದಾರೆ.
Advertisement
ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ವರದಿ ಆಗಿರುವ ಈ ರೂಪಾಂತರಿ ವೈರಸ್ ಓಮಿಕ್ರಾನ್ ರೂಪಾಂತರದ ಎಕ್ಸ್ ತಳಿಯು ಹೆಚ್ಚು ಅಪಾಯಕಾರಿ ಆಗಿರುವುದಿಲ್ಲ. ಅಲ್ಲದೇ ಭಾರತದ ಅಂಕಿ-ಅಂಶಗಳ ಪ್ರಕಾರ ಈ ತಳಿಯು ಅತಿ ವೇಗದಲ್ಲಿ ಹರಡುವುದಿಲ್ಲ ಎಂದಿದ್ದಾರೆ. ಓಮಿಕ್ರಾನ್ ರೂಪಾಂತರವು ಹಲವು ತಳಿಗಳ ಬೆಳವಣಿಗೆಗೆ ಕಾರಣವಾಗಿರುತ್ತದೆ. ಎಕ್ಸ್ ಮತ್ತು ಎಕ್ಸ್ಇ ಎಂಬ ತಳಿಗಳು ಅದೇ ರೂಪಾಂತರದ ಭಾಗವಾಗಿವೆ. ಈ ರೂಪಾಂತರ ತಳಿಗಳು ಹಾಗೆಯೇ ಮುಂದುವರಿಯುತ್ತವೆ. ಆದರೆ ಭಾರತದ ಅಂಕಿ-ಅಂಶಗಳನ್ನು ಗಮನಿಸಿದಾಗ ಈ ತಳಿಗಳು ಅತಿಹೆಚ್ಚು ಅಪಾಯಕಾರಿ ಅಲ್ಲ. ಹೀಗಾಗಿ ಭಾರತೀಯರು ಎಕ್ಸ್ಇ ರೂಪಾಂತರ ತಳಿಯ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥ ಎನ್ ಕೆ ಅರೋರಾ ಸ್ಪಷ್ಟಪಡಿಸಿದ್ದಾರೆ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement