ಒಂದು ಕಾಲದಲ್ಲಿ ಸ್ಕೂಟರ್ ಓಡಿಸುವುದು ಪುರುಷರಿಗೆ ಮಾತ್ರವೇ ಸೀಮಿತವಾಗಿತ್ತು. ನಂತರ ಮಹಿಳೆಯರೂ ಸ್ಕೂಟರ್ ಚಲಾಯಿಸುವಾಗ ಹುಬ್ಬೇರಿಸಿ ನೋಡುತ್ತಿದ್ದರು. ನಂತರ ಅದು ಸಾಮಾನ್ಯವಾಯಿತು, ಈಗ ಮಹಿಳೆಯರು ಸ್ಕೂಟರ್, ಕಾರು ಚಲಾಯಿಸುವುದು ಸಾಮಾನ್ಯವಾಗಿದೆ. ಪುರುಷರಿಗಿಂತಲೂ ಹೆಚ್ಚು ಸುರಕ್ಷತೆಯಿಂದ ವಾಹನ ಚಲಾಯಿಸುತ್ತಾರೆ.
Advertisement
ಆದರೆ ಇದೀಗ ಯುವತಿಯರೂ ಬೈಕ್ ರಾಲಿಯಲ್ಲೂ ಭಾಗವಹಿಸುತ್ತಿರುವುದು ಇನ್ನೊಂದು ಸಾಹಸ. ರಾಜ್ಯದಲ್ಲಿ ಬೈಕ್ ರೇಸಲ್ಲಿ ಭಾಗವಹಿಸುವ ಹಲವು ಯುವತಿಯರು ಇದ್ದಾರೆ. ಅದೊಂದು ಆಸಕ್ತಿದಾಯಕ ಸಂಗತಿ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರ್ಪಿತಾ ಕೂಡಾ ಒಬ್ಬಳು. ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಬೈಕ್ ರೇಸ್ ನ ಹಲವು ಸ್ಫರ್ಧೆಗಳಲ್ಲಿ ಭಾಗವಹಿಸಿರುವ ಅರ್ಪಿತಾ ಇದೀಗ ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿದ್ದಾರೆ.
Advertisement
ಈಚೆಗೆ ಕನಕಪುರದಲ್ಲಿ ನಡೆದ ಎಫ್ ಎಂ ಎಸ್ ಸಿ ಐ ಯವರು ನಡೆಸಿದ ಇಂಡಿಯನ್ ನ್ಯಾಶನಲ್ ರಾಲೀ ಸ್ಪ್ರಿಂಟ್ ಚಾಂಪಿಯನ್ ಶಿಪ್ 1 ನೇ ಸುತ್ತಿನಲ್ಲಿ ದ್ವಿತೀಯ ಹಾಗೂ 2 ನೇ ಸುತ್ತಿನಲ್ಲಿ ತೃತೀಯ ಬಹುಮಾನಗಳು ಪಡೆದಿದ್ದಾರೆ. ಇವರು ಸುಳ್ಯ ತಾಲೂಕಿನ ಮರ್ಕಂಜ ಬಳಿಯ ಮೈರಾಜೆ ಭಾರತಿ ಹಾಗೂ ವೆಂಕಟೇಶ್ವರ ಭಟ್ ಯಂ ಇವರ ಪುತ್ರಿ.
Advertisement
Advertisement
ಬೈಕ್ ರೇಸಲ್ಲಿ ಅರ್ಪಿತಾ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement