ಅಡಿಕೆಯ ಧಾರಣೆಯ ಆಟ ಇನ್ನು ಶುರು | ಏರಿಕೆ-ಇಳಿಕೆಯ ನಡುವೆ ಅಸ್ಸಾಂನಲ್ಲಿ ಮತ್ತೆ ತಡೆಯಾಯ್ತು 370 ಚೀಲ ಆಮದು ಅಡಿಕೆ |

August 5, 2021
10:29 PM
ಅಡಿಕೆ ಏರಿಕೆ-ಇಳಿಕೆಯ ಆಟ ಮತ್ತೆ ಅರಂಭವಾಗುತ್ತಿದೆ. ಅಡಿಕೆ ಬೆಳೆಗಾರರು ಅಧೀರರಾಗಬೇಕಾದ್ದಿಲ್ಲ. ಮಾರುಕಟ್ಟೆಯಲ್ಲಿ ಅಡಿಕೆಯ ಕೊರತೆ ಇದೆ. ಸದ್ಯ ಹೊಸ ಅಡಿಕೆಗೆ ಬೇಡಿಕೆ ಹೆಚ್ಚಿದೆ. ಈ ಧಾರಣೆ ತಿಂಗಳೊಳಗೆ 500  ರೂಪಾಯಿ ಆಸುಪಾಸಿಗೆ ಬಂದು ನಿಲ್ಲುತ್ತದೆ. ಈ ನಡುವೆಯೇ ಅಸ್ಸಾಂ ಮೂಲಕ ಭಾರತದೊಳಕ್ಕೆ ಬಂದ ಆಮದು ಅಡಿಕೆಯನ್ನು ಅಸ್ಸಾಂ ಗಡಿಭದ್ರತಾ ಪಡೆ ವಿಜೋರಾಂನಲ್ಲಿ ವಶಪಡಿಸಿಕೊಂಡಿದೆ.

ವಿದೇಶದಿಂದ ಅಡಿಕೆ ಆಮದು ಪ್ರಕ್ರಿಯೆ ನಡೆಯುತ್ತಿದೆ. ಆದರೆ ದೇಶದ ಗಡಿ ಭದ್ರತೆ ಕಳೆದ ಕೆಲವು ವರ್ಷಗಳಿಂದ ಬಿಗಿಯಾಗಿರುವುದರಿಂದ  ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆ. ಹೀಗಾಗಿ ಅಸ್ಸಾಂ, ಮಿಜೋರಾಂ ಸೇರಿದಂತೆ ಈಶಾನ್ಯ ರಾಜ್ಯಗಳ ಮೂಲಕ ಅಕ್ರಮವಾಗಿ ಆಮದಾಗುತ್ತಿದ್ದ ಅಡಿಕೆ, ಮರದ ದಿಮ್ಮಿಗಳು ಸೇರಿಂದತೆ ಯಾವುದೇ ವಸ್ತುಗಳಿಗೆ ತಡೆಯಾಗುತ್ತಿದೆ. ಹೀಗಾಗಿ ಅಡಿಕೆ ಆಮದು ಮೇಲೆ ಭಾರೀ ಹೊಡೆತ ಬಿದ್ದಿದೆ. ಈದರ ಪರಿಣಾಮ ದೇಶದಲ್ಲಿ ಅಡಿಕೆ ಧಾರಣೆ ಏರಿಕೆಯ ಹಾದಿಯಲ್ಲಿದೆ. ಕೊರೋನಾ ಬಳಿಕ ದೇಶದಲ್ಲಿ ಗಡಿಯಲ್ಲಿ ಮತ್ತಷ್ಟು ಭದ್ರತೆ ಇದೆ, ತಪಾಸಣೆ ಬಿಗುವಿನಲ್ಲಿದೆ. ಪ್ರತೀ ಬಾರಿಯೂ ಅಡಿಕೆ ಆಮದು ಬಹುಪಾಲು ತಡೆಯಾಗುತ್ತದೆ. ಈ ಬಾರಿ ಮತ್ತೆ ಒಟ್ಟು 370  ಚೀಲ ಅಡಿಕೆಯನ್ನು ಮಂಗಳವಾರ ಅಸ್ಸಾಂ ಗಡಿ ಭದ್ರತಾ ಪಡೆ ವಶಕ್ಕೆ ಪಡೆದಿದೆ. ಈ ಸಂಬಂಧ ಮೂವರನ್ನು ವಶಕ್ಕೆ ತೆಗೆದುಕೊಂಡಿದೆ.

ಈ ನಡುವೆ ಶ್ರೀಲಂಕಾ ಮೂಲಕವೂ ಅಡಿಕೆ ಕಳ್ಳ ಸಾಗಾಣಿಕೆಗೆ ಪ್ರಯತ್ನ ನಡೆಸಿದ ತಂಡ ಸಿಕ್ಕಿಬಿದ್ದಿದೆ. ಈ ಕಾರಣದಿಂದ ಮತ್ತೆ ಅಸ್ಸಾಂ ಗಡಿಯ ಮೂಲಕ ಅಡಿಕೆ ಆಮದು ಮಾಡಿಕೊಳ್ಳಲು ಪ್ರಯತ್ನಿಸಿ ಸಿಕ್ಕಿ ಬಿದ್ದಿದೆ. ಅಡಿಕೆ ಧಾರಣೆ ಮತ್ತೆ ಏರಿಕೆಯ ಹಾದಿಯಲ್ಲಿದೆ. ಬೆಳೆಗಾರರಿಗೆ ಸದ್ಯ ಖುಷಿ ಇದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ
August 26, 2026
10:44 AM
by: ದ ರೂರಲ್ ಮಿರರ್.ಕಾಂ
ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ
August 26, 2026
6:52 AM
by: ದ ರೂರಲ್ ಮಿರರ್.ಕಾಂ
ಬರಪೀಡಿತ ಪ್ರದೇಶಗಳ ರೈತರಿಗೆ ಗುಡ್‌ನ್ಯೂಸ್ ; ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ
August 25, 2026
10:36 PM
by: ದ ರೂರಲ್ ಮಿರರ್.ಕಾಂ
ರಾಜ್ಯದ 102 ತಾಲೂಕುಗಳಲ್ಲಿ ಬರದ ಛಾಯೆ – ತಿಂಗಳಾಂತ್ಯಕ್ಕೆ ಕೇಂದ್ರಕ್ಕೆ ವರದಿ ಸಲ್ಲಿಕೆ
August 25, 2026
10:30 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror