ಅಕ್ರಮವಾಗಿ ಅಡಿಕೆ ಸಾಗಣೆ ಪ್ರಕರಣ | ಪಶ್ಚಿಮ ಬಂಗಾಳದಲ್ಲಿ ಅಡಿಕೆ ವ್ಯಾಪಾರಿಯ ಬಂಧನ

June 24, 2025
8:41 PM

ಅಕ್ರಮವಾಗಿ ಅಡಿಕೆ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ನಕ್ಸಲ್ಬರಿ ಪೊಲೀಸರು ಅಡಿಕೆ ವ್ಯಾಪಾರಿಯನ್ನು ಬಂಧಿಸಿದ್ದಾರೆ. 2024 ರ ಪ್ರಕರಣ ಇದಾಗಿತ್ತು,  ತನಿಖೆಯ ಬಳಿಕ ಆರೋಪಿ ಧೀರಜ್ ಘೋಷ್ ಭಾನುವಾರ ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯವು ಆರು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಅಕ್ಟೋಬರ್‌ನಲ್ಲಿ ಅಡಿಕೆ ತುಂಬಿದ್ದ ಐದು ಟ್ರಕ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಆ ಸಂದರ್ಭ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.ಆರೋಪಿ ಧೀರಜ್ ಘೋಷ್ ಅವರು ಅಡಿಕೆ ರವಾನೆಯ ಬಗ್ಗೆ ಇದುವರೆಗೂ ದಾಖಲೆ ಸಲ್ಲಿಸಲು ವಿಫಲರಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ತನಿಖೆ ನಡೆಯುತ್ತಿದೆ. ಆರೋಪಿ ರಾಜಕೀಯ ಪ್ರೇರಿತವಾಗಿ ಪಕ್ಷಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ತೃಣಮೂಲ ಕಾಂಗ್ರೆಸ್‌ ಪಕ್ಷದ ಮುಖಂಡ ಎಂಬ ಆರೋಪ ಇದೆ.

Source : ANI

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಳೆ ಕೈಕೊಟ್ಟಿದೆ… ಜಾನುವಾರುಗಳಿಗೆ ಮೇವು ಎಲ್ಲಿಂದ..?
October 3, 2026
10:46 AM
by: ದ ರೂರಲ್ ಮಿರರ್.ಕಾಂ
ಗೋಡಂಬಿ ಬೇರೆ ದೇಶಗಳಿಂದ… ಜಾಗತಿಕ ಮಾರುಕಟ್ಟೆ ವಿಯೆಟ್ನಾಂನ ಕೈಯಲ್ಲಿ..!
October 3, 2026
10:34 AM
by: ದ ರೂರಲ್ ಮಿರರ್.ಕಾಂ
ರೇಷನ್ ಕಾರ್ಡ್‌ ಇ-ಕೆವೈಸಿಗೆ ಇನ್ನು ಕ್ಯೂ ಬೇಕಿಲ್ಲ – ಮನೆಯಲ್ಲೇ ಇ-ಕೆವೈಸಿಗೆ ‘ಅನ್ನಸೇವೆ’ ಆ್ಯಪ್‌
October 3, 2026
10:00 AM
by: ದ ರೂರಲ್ ಮಿರರ್.ಕಾಂ
ಅಡಿಕೆ ವಹಿವಾಟಿನ ಹಿಂದೆ ಮತ್ತೊಂದು ದೊಡ್ಡ ತನಿಖೆ..? ₹1.3 ಕೋಟಿ ನಗದು ವಶ
October 3, 2026
9:48 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror