ನಾಗಪ್ಪ…., ಏನು ಮಾಡಬೇಡಪ್ಪಾ….!!!

September 29, 2020
11:06 AM

ನಾಗರಪಂಚಮಿ ಸಹಿತ ಇತರ ಹಬ್ಬಗಳು ಎಂದಿನಂತೆ   ಸಂಭ್ರಮ ಸಡಗರದಿಂದ ಕೂಡಿರ ಲಿಲ್ಲ. ಕೊರೊನಾ ವೈರಾಣುವಿನ  ಕಾರಣದಿಂದ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಿಗೆ ನಿರ್ಬಂಧವಿದೆ. ಹಾಗಾಗಿ ಏನು ಧಾರ್ಮಿಕ ಕಾರ್ಯಕ್ರಮಗಳಾಗ ಬೇಕೋ ಅದು ಮಾತ್ರ ನಡೆದಿದೆ. ಗೌಜಿ ಗದ್ಧಲಗಳಿಗೆ ವಿರಾಮ ಹಾಕಿ ಅನಿವಾರ್ಯತೆಗೆ ಪ್ರಾಮುಖ್ಯತೆ. 

Advertisement
ಕರಾವಳಿ ಪ್ರದೇಶದಲ್ಲಿ ನಾಗಾರಾಧನೆಯನ್ನು ಶ್ರದ್ಧಾ ಭಕ್ತಿಯಿಂದ ಮಾಡಲಾಗುತ್ತದೆ. ಪ್ರಕೃತಿಯ ಆರಾಧನೆಯನ್ನೇ  ಬಹುವಾಗಿ ಅಳವಡಿಸಿಕೊಂಡಿರುವ  ಕರಾವಳಿಗರು  ಋತುವಿಗನುಗುಣವಾಗಿ ಒಂದೊಂದು ಹಬ್ಬಗಳನ್ನು ಆಚರಿಸುತ್ತಾರೆ. ಪ್ರತಿಯೊಂದು ಹಬ್ಬವೂ ಪ್ರಕೃತಿಯಲ್ಲಿ ಸಮ್ಮಿಲಿತವಾಗಿದೆ.  ನಾಗಗಳ ಬಗ್ಗೆ ಸ್ವಲ್ಪ ಜಾಸ್ತಿಯೇ ಭಯ ಭಕ್ತಿ ನಮ್ಮ ಕರಾವಳಿ  ಪ್ರದೇಶದಲ್ಲಿ.  ಅಲ್ಲಲ್ಲಿ ನಾಗಬನಗಳನ್ನು  ಕಾಣಬಹುದು . ನಾಗರಪಂಚಮಿಯ ದಿನ ನಾಗನಕಲ್ಲುಗಳಿಗೆ ಹಾಲೆರೆದು ಪೂಜಿಸಲಾಗುತ್ತದೆ. 
 ಶ್ರದ್ಧಾ ಭಕ್ತಿಗಳಿಂದ ಪೂಜಿಸಲ್ಪಡುವ ನಾಗ ಇಂದು ಮನರಂಜನೆಯ ಕೇಂದ್ರಬಿಂದುವಾಗಿ ದೆ. ಟಿ.ವಿ. ವೀಕ್ಷಕರಿಗೆ ಇಂದು ಪ್ರತಿಯೊಂದು ಚಾನೆಲ್ ಗಳಲ್ಲೂ ನಾಗಗಳದ್ದೇ ಅಬ್ಬರ ಕಾಣಸಿಗುತ್ತದೆ. ಹೆಚ್ಚು ಕಮ್ಮಿ ಯಾವ ಚಾನೆಲ್ ನೋಡಿದರೂ ಸೇಡಿನಿಂದ ಬುಸುಗುಟ್ಟುವ ಹಾವುಗಳೇ ಪ್ರತ್ಯಕ್ಷ.  ಕೆಲವೊಂದರಲ್ಲಿ ಒಂದು ಹಾವಾದರೆ ಇನ್ನೂ ಕೆಲವು ಕಥೆಗಳಲ್ಲಿ ಇಡೀ ಕುಟುಂಬವೇ ಹಾವುಗಳು. ಯಾರ ಕಥೆ,  ಏನು ಕಥೆ ಎಂದು ಅರ್ಥೈಸುವುದರಲ್ಲಿ , ಪುರಾಣದಲ್ಲಿ ಕಂಡು ಕೇಳರಿಯದ ಪಾತ್ರಗಳು ಜೀವ ತಳೆಯುತ್ತಾ ಗೊಂದಲ ಸೃಷ್ಟಿಯಾಗುತ್ತಿವೆ.  ಒಬ್ಬರಿಗಿಂತ‌ ಒಬ್ಬರು ಸುಂದರಿಯರೇ.  ಒಂದು ಕಾಲದಲ್ಲಿ ನಾಗಿಣಿ ಪಾತ್ರಗಳಿಗೆ ಜೀವ ತುಂಬಿದವರು ದಿವಂಗತ ನಟಿ    ಶ್ರೀದೇವಿ.  ಅವರ ನಟನೆ ಎಷ್ಟು ಸಹಜವೆನಿಸುತ್ತಿತ್ತೆಂದರೆ  ನಾಗದೇವತೆ ಎಂದರೆ ಶ್ರೀದೇವಿಯೇ ಕಣ್ಣ ಮುಂದೆ ಬರುತ್ತಿದ್ದುದು.  ಈಗಂತೂ ಟಿ.ವಿ. ಯ ಯಾವ ಚಾನೆಲ್ ನೋಡಿದರೂ ನಮೂನೆವಾರು ನಾಗಿಣೆ , ನಾಗಗಳು. ಒಂದಕ್ಕಿಂತ ಒಂದು ಚೆಂದ.  ಸಿಟ್ಟಿನ ನಾಗಿಣಿ, ಬೇಜಾರದ ನಾಗಿಣಿ, ಖುಷಿಯ ನಾಗಿಣಿ, ದ್ವೇಷದ ನಾಗಿಣಿ, ಪ್ರೀತಿಯ ನಾಗಿಣಿ, ನವರಸಗಳನ್ನೂ ಬಿಂಬಿಸುವ ನಾಗಲೋಕ.  ದೇವತೆಗಳು, ರಕ್ಕಸರು, ಭೂತ ಪ್ರೇತಗಳು, ಮಾಂತ್ರಿಕರು, ಡಾಕಿಣಿ,  ಸರ್ಪಣಿಕಾ, ಮೋಹಿನಿಗಳು  ಇಂತಹುಗಳಿಂದಲೇ ಟಿ.ವಿ‌.ಪರದೆ ಭರ್ತಿ. ಸದ್ಯ ಡ್ರಗ್ಗಿಣಿಯರ  ಸಾಹಸಗಾತೆಯೇ ಕಾಡುತ್ತಿದೆ. ಮಾಡುವುದು , ಮಾಡುತ್ತಿರುವುದು 
ದೇಶದ್ರೋಹದ ಕೆಲಸವಾದರೂ ಮಾರ್ಯಾದೆ ಬೇರೆ ಕೇಡು.   ಓಹ್ , ಲಾಕ್ ಡೌನ್ ನ ಪರಿಣಾಮ ಹಿಂದಿ ಧಾರಾವಾಹಿಗಳ ಡಬ್ಬಿಂಗ್. ಎಲ್ಲಾ ಕಥೆಗಳು ಆಡಂಬರದ ಪರಾಕಾಷ್ಠೆಯೇ.  ಪುರಾಣ ಕಥೆಗಳೆಲ್ಲವೂ ಟಿ.ವಿ ಪರದೆಯ ಮೇಲೆ ಪ್ರತ್ಯಕ್ಷ. ಎಲ್ಲಿ ಬೇಕಾದರೂ , ಯಾವಾಗ ಬೇಕಾದರೂ ನಿಮ್ಮ ನೆಚ್ಚಿನ ಧಾರಾವಾಹಿಯನ್ನು ನೋಡಿ  ಎಂಬ ಜಾಹೀರಾತಿನಂತೆ  ಟಿ.ವಿ ಯಲ್ಲೂ , ಮೊಬೈಲ್ ನಲ್ಲೂ ಎಲ್ಲಿ ಬೇಕೆಂದರಲ್ಲಿ ಹಾಜರಾಗುವ ಧಾರಾವಾಹಿಗಳು. ಮರೆಯಬೇಕೆಂದರೂ ಮರೆಯಲು ಬಿಡದೆ ಕಾಡುವ ಕಥೆಗಳು. ಬಂಡಲ್ , ಹಳಿಯಿಲ್ಲದ ಕಿರಿಕ್ ಧಾರಾವಾಹಿಗಳೆಂದರೂ, ಮತ್ತೆ ಮತ್ತೆ  ನೋಡುವುದು  ಅದೇ ಕಥೆಗಳನ್ನು. ‌ಅದರಲ್ಲೂ ನಾಗಿಣಿಗಳು, ನನ್ನನ್ನು ಬೆಂಬಿಡದೆ ಕಾಡುತ್ತವೆ. ತೋಟ, ಗುಡ್ಡೆ ,ಮನೆ ಹೊರಗೆ, ಮನೆಯೊಳಗೆ   ಎಲ್ಲಿ ಹೋದರೂ ಬುಸ್ ಎಂಬ ದನಿಯೇ ಕಾಡುತ್ತದೆ.  ಅದರಲ್ಲೂ ನಿತ್ಯ ಮಾಡುವ ಯೋಗಾಸನದ ಅಂತ್ಯದಲ್ಲಿನ  ಶವಾಸನದ ಹೊತ್ತಿಗೆ ಪಕ್ಕದಲ್ಲೇ ಬುಸ್ ಬುಸ್ ಎಂದು ಬಿಡುತ್ತೇನೋ ಅನಿಸುತ್ತದೆ. ನಾಗಪ್ಪ‌ ಏನು  ಮಾಡಬೇಡಪ್ಪಾ ಅನ್ನುತ್ತಲೇ ಕಣ್ಣು ಬಿಟ್ಟು ಸುತ್ತಲೆಲ್ಲಾ ನೋಡಿ  ಉಸ್ಸಪ್ಪಾ ಅನ್ನುತ್ತೇನೆ. 
# ಅಶ್ವಿನಿಮೂರ್ತಿ ಅಯ್ಯನಕಟ್ಟೆ
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಅಪ್ಪ ಅಮ್ಮ ಇಲ್ಲದ ಪರೀಕ್ಷಾ ನಿಯಮಗಳು
May 1, 2025
10:52 AM
by: ಡಾ.ಚಂದ್ರಶೇಖರ ದಾಮ್ಲೆ
ಹೊಸರುಚಿ | ಗುಜ್ಜೆ ಸುಕ್ಕಾ
April 30, 2025
8:00 AM
by: ದಿವ್ಯ ಮಹೇಶ್
ಹೊಸರುಚಿ | ಗುಜ್ಜೆ ಚಟ್ನಿ
April 29, 2025
8:00 AM
by: ದಿವ್ಯ ಮಹೇಶ್
ಬದುಕು ಪುರಾಣ | ಅದು ‘ಎಚ್ಚರ’ದ ರೇಖೆ!
April 27, 2025
11:29 AM
by: ನಾ.ಕಾರಂತ ಪೆರಾಜೆ

You cannot copy content of this page - Copyright -The Rural Mirror

Join Our Group