ಕಪಾಟು ಪರಿಮಳಯುಕ್ತವಾಗಿರಲಿ

November 23, 2020
7:16 PM

ಬಟ್ಟೆ ಅಂಗಡಿಗೆ ಶಾಪಿಂಗ್‍ಗೆ ಹೋಗಲು ತುದಿಗಾಲಲ್ಲಿ ನಿಲ್ಲುವವರಲ್ಲಿ ಹೆಂಗಳೆಯರು ಮುಂದು. ಒಂದೆರಡು ಸಾರಿಯೋ, ಡ್ರೆಸ್ ಮೆಟೀರಿಯಲ್‍ ಖರೀದಿಸಲು ಮನೆಯಿಂದ ಹೋದವರಿಗೆ ಅತ್ಯಾಕರ್ಷಕ ರೀತಿಯಲ್ಲಿ ಜೋಡಿಸಿಟ್ಟ ನಾನಾ ತರಾವಳಿಯ ಸೀರೆ, ಡ್ರೆಸ್, ಮೆತ್ತನೆಯ ಬೆಡ್‍ಶೀಟ್ ಕಂಡಾಗ ಕಣ್ಣರಳದೆ ಇರದು. ಡಿಸ್ಕೌಂಟ್‍ ಇದ್ದರಂತು ಬೇರೆ ಹೇಳಬೇಕೆ ?

ಅವಶ್ಯಕವೋ ಅನಾವಶ್ಯವೋ ಕಂಡದ್ದೆಲ್ಲಾ ಖರೀದಿಸಿ ಮನೆಯ ಕಪಾಟಿನಲ್ಲಿ ತುಂಬಿಸಿ ಇಡುವುದರಲ್ಲಿ ಹೆಂಗಳೆಯರು ಎಲ್ಲರಿಗಿಂತ ಮುಂದು.

ಖರೀದಿಸಿ ತಂದರೆ ಸಾಕೇ..? ಅದನ್ನು ಒಪ್ಪಓರಣವಾಗಿ ಹಾಳಾಗದಂತೆ ಇಡುವ ಕೆಲಸವೂ ಇದೆ. ಅದರಲ್ಲೂಈಗಂತು 5-6 ತಿಂಗಳಿಂದ ಪೂಜೆ- ಪುನಸ್ಕಾರ, ಮದುವೆ-ಮುಂಜಿಯಂತಹ ಯಾವುದೇ ಕಾರ್ಯಕ್ರಮಗಳಿಲ್ಲ. ಇದ್ದರೂ ಬೆರಳೆಣಿಕೆಯಷ್ಟು. ಪ್ರವಾಸ-ಸುತ್ತಾಟಗಳಿಗೂ ಕಡಿವಾಣ ಬಿದ್ದಿದೆ. ಹೆಚ್ಚಿನ ಬಟ್ಟೆಗಳು ತಿಂಗಳುಗಳಿಂದ ಸೂರ್ಯನ ಬೆಳಕು ಕಾಣದೆ ಕಪಾಟಿನಲ್ಲಿ ಭದ್ರವಾಗಿವೆ. ಬಳಸದೇ ಬಹಳ ಕಾಲ ಹಾಗೇ ಇಟ್ಟರೆ ಬಟ್ಟೆಗಳೆಲ್ಲಾ ಒಂದು ತೆರನಾದ ಕೆಟ್ಟ ವಾಸನೆ ಬರಲು ಪ್ರಾರಂಭವಾಗುತ್ತದೆ. ದುಬಾರಿ ಬೆಲೆ ತೆತ್ತು, ಇಷ್ಟ ಪಟ್ಟು ತಂದ ಡ್ರೆಸ್ ಹಾಳಾಗುವುದನ್ನು ಯಾರು ತಾನೇ ಸಹಿಸಿಯಾರು..?

ಹೀಗಾಗಿ ಕಪಾಟಿನಲ್ಲಿಟ್ಟ ಬಟ್ಟೆ-ಬರೆಗಳನ್ನು ಕೆಟ್ಟ ವಾಸನೆ ಬಾರದಂತೆ ಎಚ್ಚರ ವಹಿಸುವುದು ಅತೀ ಅಗತ್ಯ. ಇದಲ್ಲದೆ ಧರಿಸುವಾಗ ಬಟ್ಟೆ ಸುವಾಸನೆ ಬೀರುತ್ತಿದ್ದರೆ ಮನಸ್ಸಿಗೆ ಹಿತವಾಗುವುದು.

• ದೇವರ ಪೂಜೆಗೆಂದು ತರುವ ಅಗರಬತ್ತಿಗಳ ಪ್ಯಾಕೆಟ್‍ ಅಥವಾ ನಾಲ್ಕೈದು ಅಗರಬತ್ತಿಯ ಕಡ್ಡಿಗಳನ್ನು ಪೇಪರ್ ಒಳಗೆ ಇಟ್ಟು ಬಟ್ಟೆಗಳ ಜೊತೆ ಇಡುವುದರಿಂದ ಕಪಾಟು ಪರಿಮಳಯುಕ್ತವಾಗಿರುತ್ತದೆ. ಇದಲ್ಲದೆ ಮೈ ತೊಳೆಯಲು ಬಳಸುವ ಸೋಪ್‍ಗಳ ಪ್ಯಾಕೆಟ್‍ಗಳನ್ನು ಕೂಡಾ ಇದೇ ರೀತಿ ಬಳಸಬಹುದು.

• ಉತ್ತಮ ಔಷಧೀಯ ಗುಣವುಳ್ಳ ಲಾವಂಛ ಬೇರುಗಳು ಕೂಡಾ ಕಪಾಟನ್ನು ಪರಿಮಳಯುಕ್ತವಾಗಿರಿಸಬಲ್ಲುದು.

• ಒಂದು ಪೇಪರ್/ಕವರ್‍ನಲ್ಲಿ ಎರಡು ಹಿಡಿಯಷ್ಟು ಕರಿಮೆಣಸನ್ನು ಗಂಟುಕಟ್ಟಿ ಇಟ್ಟರೆ ಅದರ ಪರಿಮಳ ಕಪಾಟಿನಲ್ಲಿರುವ ಉಡುಪಿಗೆ ಒಳ್ಳೆಯ ಪರಿಮಳವನ್ನು ತರಿಸುವುದು.

• ಬೆಡ್‍ಶೀಟ್, ಕಾಟನ್ ಬಟ್ಟೆಗಳಿಗೆ ಗಂಜಿ(ಕುಚ್ಚಿಲಕ್ಕಿ ಗಂಜಿಯ ನೀರು) ನೀರು ಹಾಕಿ ಬಿಸಿಲಲ್ಲಿ ಒಣಗಿಸುವುದರಿಂದ ಫ್ರೆಶ್ ಆಗಿ ಬಹು ಸಮಯದವರೆಗೆ ಇರುವುದು.

• ಬಟ್ಟೆಗಳನ್ನು ಬಹು ಸಮಯದವರೆಗೆ ಬಳಸದೇ ಇದ್ದರೆ ಒಮ್ಮೆ ಬಿಸಿಲಲ್ಲಿ ಹಾಕಿ ಮಡಚಿಟ್ಟರೆ ನಳನಳಿಸುವುದು.

• ಕ್ರಿಮಿ-ಕೀಟಗಳ ಹಾವಳಿಯನ್ನು ತಪ್ಪಿಸಲು ನೆಪ್ತಾಲಿನ್ ಬಾಲ್‍ಗಳನ್ನು ಸಹ ಬಳಸಬಹುದು. ಇವುಗಳನ್ನು ಪೇಪರ್‍ನೊಳಗಡೆ ಇಡುವುದರಿಂದ ಬೇಗನೆ ಗಾಳಿಗೆ ಆವಿಯಾಗುವುದಿಲ್ಲ.

• ಸಂಪಿಗೆ ಹೂ, ಕೇದಗೆಯನ್ನುಕೂಡಾ ಕಪಾಟಿನಲ್ಲಿಡುವುದರಿಂದ ಒಳ್ಳೆಯ ಪರಿಮಳ ಹೊರಹೊಮ್ಮುವುದು. ಹೂಗಳು ಒಣಗಿದರೂ ಪರಿಮಳ ಬಹು ಸಮಯದವರೆಗೆ ಇರುವುದು.

 

ವಂದನಾ ರವಿ.ಕೆ.ವೈ.ವೇಣೂರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹೊಸರುಚಿ | ಮನೆಲ್ಲೇ ಸುಲಭವಾಗಿ ಮಾಡುವ “ಉಪ್ಪು ಸೊಳೆ ಬೋಳು ಬೆಂದಿ”
March 7, 2026
10:14 PM
by: ದಿವ್ಯ ಮಹೇಶ್
ಅಂಕಗಳಾಚೆಗೆ ಶಿಕ್ಷಣದ ಉದ್ದೇಶ
March 6, 2026
6:56 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಬಯಕೆ, ಕಾಮ, ಆಕರ್ಷಣೆ, ಪ್ರೀತಿ ಮತ್ತು ಪ್ರೇಮ – ಜೀವನದ ಅಂತರಂಗದ ಹಂತಗಳು
February 28, 2026
7:00 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹೊಸರುಚಿ | ಮನೆಯಲ್ಲೇ ಸುಲಭವಾಗಿ ಮಾಡುವ ಎಳೆಯ ಹಲಸಿನ ಕಾಯಿ ಸುಕ್ಕ
February 28, 2026
7:00 AM
by: ದಿವ್ಯ ಮಹೇಶ್

You cannot copy content of this page - Copyright -The Rural Mirror