ಕೃಷಿ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಮಹತ್ವದ ಬದಲಾವಣೆ ತರುತ್ತಿದೆ

February 28, 2026
6:43 AM

ಬದಲಾಗುತ್ತಿರುವ ತಂತ್ರಜ್ಞಾನ ಯುಗದಲ್ಲಿ ಕೃತಕ ಬುದ್ಧಿಮತ್ತೆ (AI) ಕೃಷಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಯನ್ನು ತರಬಲ್ಲ ತಾಂತ್ರಿಕತೆಯಾಗಿ ಹೊರಹೊಮ್ಮುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿಳಿಸಿದ್ದಾರೆ.

‘ರೇಡಿಯೊ ಕಿಸಾನ್ ದಿವಸ’ದ ಅಂಗವಾಗಿ ಆಯೋಜಿಸಿದ್ದ ಕೃತಕ ಬುದ್ಧಿಮತ್ತೆ ಹಾಗೂ ಕೃಷಿ ಅಭಿವೃದ್ಧಿ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹವಾಮಾನ ಮುನ್ಸೂಚನೆ, ಮಣ್ಣು ಪರೀಕ್ಷೆ, ಬೆಳೆ ಸಂರಕ್ಷಣೆ ಹಾಗೂ ಮಾರುಕಟ್ಟೆ ದರಗಳ ವಿಶ್ಲೇಷಣೆಯಲ್ಲಿ AI ತಂತ್ರಜ್ಞಾನ ರೈತರಿಗೆ ಬಹುಮುಖ್ಯ ಸಹಾಯವಾಗುತ್ತಿದೆ ಎಂದರು. ಕೃತಕ ಬುದ್ಧಿಮತ್ತೆಯ ಬಳಕೆಯಿಂದ ಕೃಷಿ ಚಟುವಟಿಕೆಗಳು ಹೆಚ್ಚು ವೈಜ್ಞಾನಿಕವಾಗುತ್ತಿದ್ದು, ಉತ್ಪಾದನಾ ವೆಚ್ಚ ಕಡಿಮೆಯಾಗುವುದರ ಜೊತೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಹಾಸನ ಆಕಾಶವಾಣಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಅರಕಲಗೂಡು ವಿ. ಮಧುಸೂದನ್ ಮಾತನಾಡಿ, ಭಾರತೀಯ ಮಾಧ್ಯಮ ಕ್ಷೇತ್ರದಲ್ಲಿ ಆಕಾಶವಾಣಿಯು ಅತ್ಯಂತ ದೊಡ್ಡ ಜಾಲವನ್ನು ಹೊಂದಿದೆ ಎಂದು ಹೇಳಿದರು.

ದೇಶದಾದ್ಯಂತ 591 ಆಕಾಶವಾಣಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ 188 ಕೇಂದ್ರಗಳು ಕೃಷಿ ಕಾರ್ಯಕ್ರಮಗಳನ್ನು ನಿರ್ಮಿಸಿ ಪ್ರಸಾರ ಮಾಡುತ್ತಿವೆ ಎಂದು ಮಾಹಿತಿ ನೀಡಿದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಅದೇ ರೀತಿ ದೇಶದ 97 ಆಕಾಶವಾಣಿ ಕೇಂದ್ರಗಳಲ್ಲಿ ‘ಕಿಸಾನ್ವಾಣಿ’ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಕೇಂದ್ರ ಸರ್ಕಾರದ ಕೃಷಿ ಹಾಗೂ ಕೃಷಿಕರ ಕಲ್ಯಾಣ ಸಚಿವಾಲಯದ ಪ್ರಾಯೋಜಕತ್ವದಲ್ಲಿ ದೇಶದಲ್ಲೇ ಮೊದಲ ಬಾರಿಗೆ 2004ರಲ್ಲಿ ಹಾಸನ ಆಕಾಶವಾಣಿ ಕೇಂದ್ರದಿಂದ ‘ಕಿಸಾನ್ವಾಣಿ’ ಕಾರ್ಯಕ್ರಮ ಪ್ರಸಾರ ಆರಂಭಗೊಂಡಿತ್ತು ಎಂದು ತಿಳಿಸಿದರು.

Hassan Deputy Commissioner KS Lathakumari stated that Artificial Intelligence is bringing significant transformation to agriculture by supporting weather forecasting, soil testing, crop protection, and market price analysis. Speaking at a seminar organized during Radio Kisan Day at Hassan Akashvani, officials highlighted the role of All India Radio’s vast network in broadcasting agricultural programs, including the Kisanvani initiative launched from Hassan in 2004.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

ಹೊಸರುಚಿ | ಮನೆಯಲ್ಲೇ ಸುಲಭವಾಗಿ ಮಾಡುವ ಎಳೆಯ ಹಲಸಿನ ಕಾಯಿ ಸುಕ್ಕ
February 28, 2026
7:00 AM
by: ದಿವ್ಯ ಮಹೇಶ್
ಕಳಪೆ ಬೀಜ ಬಿಟ್ಟು ಸಂಶೋಧಿತ ಬೀಜ ಬಳಸಿ | ಮಣ್ಣಿನ ಆರೋಗ್ಯ ಕಾಪಾಡಿ | ರೈತರಿಗೆ ತೋಟಗಾರಿಕಾ ವಿವಿ ಕುಲಪತಿ ಸಲಹೆ
February 28, 2026
6:53 AM
by: ಮಿರರ್‌ ಡೆಸ್ಕ್
ಪಿ.ಎಂ. ಕಿಸಾನ್ ಸಹಾಯಧನಕ್ಕೆ ‘FRUITS’ ತಂತ್ರಾಂಶದಲ್ಲಿ ನೋಂದಣಿ ಕಡ್ಡಾಯ
February 28, 2026
6:48 AM
by: ಮಿರರ್‌ ಡೆಸ್ಕ್
ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ : 7.10 ಲಕ್ಷ ಮಂದಿ ವಿದ್ಯಾರ್ಥಿಗಳು ನೋಂದಣಿ
February 28, 2026
6:39 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror