ಕರ್ನಾಟಕದ ಕರಾವಳಿಯಲ್ಲಿ ಮೀನುಗಾರಿಕೆ ಅಭಿವೃದ್ಧಿಗಾಗಿ ಹೊಸ ತಂತ್ರಗಾರಿಕೆ | ಸಮುದ್ರಕ್ಕೆ ಕೃತಕ ಬಂಡೆಗಳ ಅಳವಡಿಕೆ | ಮೀನುಗಳ ಆಶ್ರಯ, ಸಂತೋನಾತ್ಪತ್ತಿಗೆ ಹೆಚ್ಚು ಸಹಾಯ

March 13, 2024
2:21 PM

ಕರ್ನಾಟಕ ಕರಾವಳಿಯ(Coastal Karnataka) ಸಮುದ್ರಗಳಲ್ಲಿ(Sea) ಆಯ್ದ ಸ್ಥಳಗಳಲ್ಲಿ ಕೃತಕ ಬಂಡೆಗಳನ್ನು(Artificial reef) ತಂತ್ರಜ್ಞರು(Experts) ಹಾಕುತ್ತಿದ್ದಾರೆ. ಈ ಮೂಲಕ ಮೀನುಗಳ ಆಶ್ರಯಕ್ಕೆ ಹಾಗೂ ಸಂತೋನಾತ್ಪತ್ತಿಗೆ(Fertility) ಇದು ಹೆಚ್ಚು ಸಹಾಯವಾಗಲಿದೆ. ಹಾಗೆ ಅದು ಮುಂದೆ ಮೀನುಗಾರಿಕೆಗೆ(Fishery) ಹೆಚ್ಚು ಅನುಕೂಲವಾಗಲಿದೆ. ಕಡಲಿಗೆ ಬೃಹತ್‌ ಆಕಾರದ ಕಾಂಕ್ರೀಟ್ ಬಂಡೆಗಳು ಲಗ್ಗೆ ಇಟ್ಟಿವೆ. ಈಗಾಗಲೇ ಇರುವ ನೈಸರ್ಗಿಕ ಬಂಡೆಗಳಲ್ಲದೇ ಕರ್ನಾಟಕದ ಪಶ್ಚಿಮ ಕರಾವಳಿಯಲ್ಲಿ ಈಗ ಕೃತಕ ಬಂಡೆಗಳನ್ನು ಅಳವಡಿಸಲಾಗುತ್ತಿದೆ. ಇದರಿಂದಾಗಿ ಸಾಂಪ್ರದಾಯಿಕ ಮೀನುಗಾರಿಕೆಗೆ ಇನ್ನಷ್ಟು ಪ್ರೋತ್ಸಾಹ ಸಿಕ್ಕಂತಾಗಲಿದೆ.

Advertisement

ಇದರ ಮೊದಲ ಭಾಗವಾಗಿ ಭಟ್ಕಳದ ಬೆಳಕೆ ಸಮುದ್ರದಲ್ಲಿ 4-5 ನಾಟಿಕಲ್ ಮೈಲು ದೂರದಲ್ಲಿ ಈ ಬಂಡೆಗಳನ್ನು ಹಾಕಲಾಗಿದೆ. ಒಂದೊಂದು ಬಂಡೆ ಕೂಡ 400 ಕೆಜಿ ತೂಕವನ್ನು ಹೊಂದಿದೆ. ಕ್ರೇನ್ ಸಹಾಯದಿಂದ ಈ ಬಂಡೆಗಳನ್ನು ಹಾಕುತ್ತಿದ್ದು, ಕರ್ನಾಟಕದ 56 ಸಮುದ್ರ ತೀರಗಳಲ್ಲಿ ಈ ಯೋಜನೆ ಜಾರಿ ಬರಲಿದೆ.

ಉಡುಪಿಯಲ್ಲಿ 31 ಹಾಗೂ ಉತ್ತರಕನ್ನಡದಲ್ಲಿ 25 ಜಾಗವನ್ನು ಇದಕ್ಕಾಗಿ ನಿಗದಿ ಪಡಿಸಲಾಗಿದೆ. ಹೀಗೆ ಎಸೆಯುವ ಬಂಡೆಗಳು ಆಳ ಸಮುದ್ರದ ಜೀವ ಸಂತತಿಯ ಹೆಚ್ಚಳದಲ್ಲಿ ಗಣನೀಯ ಪಾತ್ರವಹಿಸುತ್ತವೆ. ಆಳ ಸಮುದ್ರದಲ್ಲಿ ಮೀನುಗಳ ಸಂತತಿ ಹೆಚ್ಚಿಸಲು ಸ‌ಹಾಯಕವಾಗುವ ಈ ಬಂಡೆಗಳು ಜಿಲ್ಲೆಯ ಮೀನುಗಾರರಲ್ಲಿ ಹೊಸ ಭರವಸೆ ಮೂಡಿ‌ಸಿವೆ.

Artificial reefs have been deployed in the sea off these hamlets to attract fish and help re-establish biodiversity in the area.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಒಂದು ವರ್ಷದಲ್ಲಿ 5600 ಕಿ.ಮೀ. ಹೆದ್ದಾರಿ ನಿರ್ಮಾಣ |
April 3, 2025
7:42 AM
by: The Rural Mirror ಸುದ್ದಿಜಾಲ
81 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆಹಾರ ಧಾನ್ಯ
April 3, 2025
7:32 AM
by: The Rural Mirror ಸುದ್ದಿಜಾಲ
ಮೇಷ ರಾಶಿಯವರಿಗೆ ಬಹಳ ಶುಭ ದಿನ
April 3, 2025
7:05 AM
by: ದ ರೂರಲ್ ಮಿರರ್.ಕಾಂ
ಹೆಚ್ಚುತ್ತಿರುವ ತಾಪಮಾನ | 2030 ರ ವೇಳೆಗೆ ಭಾರತದಲ್ಲಿ ಶೇ.5 ರಷ್ಟು ಉತ್ಪಾದನೆ ಕುಸಿತ
April 2, 2025
11:46 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group