#ಪಾಸಿಟಿವ್‌ | 5 ಬಾರಿ ವಿಶ್ವ ದಾಖಲೆ ಬರೆದ ನೆಲ್ಯಾಡಿಯ ಯುವಕ…!

December 8, 2021
11:14 AM

ಬ್ಲೂ ಇಂಕ್ ಪ್ಯಾಡ್ ಸಹಾಯದೊಂದಿಗೆ ಹೆಬ್ಬೆರಳು ಮತ್ತು ತೋರು ಬೆರಳುಗಳನ್ನು ಬಳಸಿಕೊಂಡು 20 ನಿಮಿಷದಲ್ಲಿ ಗಾಂಧೀಜಿಯ ಭಾವಚಿತ್ರ, 3.12  ಸೆಕೆಂಡುಗಳಲ್ಲಿ ಪ್ರಧಾನಿ ಮೋದಿಯವರ ಚಿತ್ರ, 5 ನಿಮಿಷಗಳಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರ….. ! ಹೀಗೇ ಹಲವು ಚಿತ್ರ ಬಿಡಿಸಿ ಇದುವರೆಗೆ ಐದು ವಿಶ್ವ ದಾಖಲೆಯನ್ನು ಮಾಡಿದ್ದಾರೆ ಈ ಯುವಕ. ಅವರು ಮೂಲತ: ನೆಲ್ಯಾಡಿಯ ಸದ್ಯ ಮಂಗಳೂರಿನ ಟಿವಿಎಸ್ ಕಂಪನಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿರುವ ಪರೀಕ್ಷಿತ್.

ಗಾಂಧೀಜಿಯ ಭಾವಚಿತ್ರವನ್ನು ಕೇವಲ 20 ನಿಮಿಷದಲ್ಲಿ ಚಿತ್ರಿಸುವ ಮೂಲಕ 5ನೇ ಬಾರಿ ವಿಶ್ವ ದಾಖಲೆಯನ್ನು ಬರೆದಿದ್ದಾರೆ 21  ಹರೆಯದ ನೆಲ್ಯಾಡಿಯ ಯುವಕ. ನೆಲ್ಯಾಡಿಯ ಕುಂಡಡ್ಕ ನಿವಾಸಿ  ಶ್ರೀಧರ ಶೆಟ್ಟಿ ಮತ್ತು ಸುಧಾಮಣಿ ದಂಪತಿಯ ಪುತ್ರ ಪ್ರಸ್ತುತ ಮಂಗಳೂರಿನ ಟಿವಿಎಸ್ ಕಂಪನಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿರುವ ಪರೀಕ್ಷಿತ್ ಈ ಸಾಧನೆಯ ರುವಾರಿ. ಎ1 ಶೀಟ್ ನಲ್ಲಿ ಬ್ಲೂ ಇಂಕ್ ಪ್ಯಾಡ್ ಸಹಾಯದೊಂದಿಗೆ ಹೆಬ್ಬೆರಳು ಮತ್ತು ತೋರು ಬೆರಳುಗಳನ್ನು ಬಳಸಿಕೊಂಡು 20 ನಿಮಿಷದಲ್ಲಿ ಗಾಂಧೀಜಿಯ ಭಾವಚಿತ್ರವನ್ನು ಬಿಡಿಸಿ ಆ ಮೂಲಕ ವಿಶ್ವ ದಾಖಲೆಯನ್ನು ಮಾಡಿದ್ದಾರೆ.

ಈತ ಬಾಲ್ಯದಿಂದ 9 ನೇ ತರಗತಿವರೆಗೆ ನೆಲ್ಯಾಡಿಯ ಜ್ಞಾನೋದಯ ಬೆಥನಿ ಶಾಲೆಯಲ್ಲಿ ಕಲಿತು ನಂತರ 10 ನೇ ತರಗತಿಯಿಂದ ಪಿಯುಸಿವರೆಗಿನ ಶಿಕ್ಷಣವನ್ನು ಮಂಗಳೂರಿನ ಗೋಪಾಡ್ಕರ್‌ರವರ ಸ್ವರೂಪ ಸಂಸ್ಥೆಯಲ್ಲಿ ಪೂರೈಸಿದ. ಸ್ವರೂಪ ಸಂಸ್ಥೆಗೆ ಸೇರಿದ ಮೇಲೆಯೇ ಈತನ ಕಲಿಕಾಸಕ್ತಿ ಬೆಳೆಯಲಾರಂಬಿಸಿತು. ಅಲ್ಲಿನ ಮಾರ್ಗದರ್ಶಕರ ಸಹಾಯದಿಂದ ಯಕ್ಷಗಾನ, ಭರತನಾಟ್ಯ, ಗಿಟಾರ್, ಕ್ರೀಯೇಟೀವ್ ಆರ್ಟ್, ವಿಶುವಲ್ ಆರ್ಟ್, ಬೀಟ್ ಬಾಕ್ಸ್ ನಲ್ಲೂ ಈತ ಪರಿಣಿತ.

ಈತ ಈ ಹಿಂದೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಸಮ್ಮುಖದಲ್ಲಿ ಅವರ ಭಾವಚಿತ್ರವನ್ನು ಪೇಪರ್ ಕಟ್ಟಿಂಗ್ ಆರ್ಟ್( ಸ್ಟೆನ್ಸಿಲ್ )ನ ಮೂಲಕ ಚಿತ್ರಿಸಿ ಸ್ಥಳದಲ್ಲಿ ಅವರಿಂದ ಗೌರವಾರ್ಪಣೆ ಯನ್ನು ಸ್ವೀಕರಿಸಿದ್ದಾನೆ. ಅದಲ್ಲದೆ ಈತನ ಸಾಧನೆಗಾಗಿ ಹಲವು ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಸನ್ಮಾನಿಸಿವೆ. ಭವಿಷ್ಯದಲ್ಲಿ ಗಿನ್ನಿಸ್ ರೆಕಾರ್ಡ್ ಮಾಡುವ ಕುರಿತು ಯೋಜನೆಯಿದ್ದು, ಅದಕ್ಕಾಗಿ ತಯಾರಿ ನಡೆಸುತ್ತಿದ್ದಾನೆ.

ಇದುರೆಗಿನ ವಿಶ್ವ ದಾಖಲೆಗಳು :

This is box title

# 3.12 ಸೆಕೆಂಡುಗಳಲ್ಲಿ ಪ್ರಧಾನಿ ಮೋದಿಯವರ ಚಿತ್ರವನ್ನು ರಚಿಸಿದ್ದಕ್ಕಾಗಿ -ವಲ್ಡ್ ಫಾಸ್ಟೆಸ್ಟ್ ಪೇಪರ್ ಕಟ್ಟಿಂಗ್ (ಬಿಳಿ ಮತ್ತು ಕಪ್ಪು ಡ್ರಾಯಿಂಗ್ ಶೀಟ್ ಬಳಸಿಕೊಡು ರಚಿಸುವ ಚಿತ್ರ) ಆರ್ಟಿಸ್ಟ್ ಎಂಬ ಪ್ರಮಾಣ ಪತ್ರ. ಈ ಸಾಧನೆಯಲ್ಲಿ ಈತನೇ ಮೊದಲಿಗ.

# 5 ನಿಮಿಷಗಳಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರವನ್ನು ಫೈರ್ ಆರ್ಟ್ (ಬೆಂಕಿಯ ದೀವಟಿಗೆಯನ್ನು ಪೇಪರ್‌ಗೆ ಹಿಡಿದು ಆ ಮೂಲಕ ಭಾವಚಿತ್ರ ಬಿಡಿಸುವ ಕಲೆ) ಎಂಬ ಪರಿಕಲ್ಪನೆಯ ಮೂಲಕ ಜಗತ್ತಿಗೆ ಪರಿಚಿಸಿದ ಮೊದಲಿಗ.

# 35 ವಿದ್ಯಾರ್ಥಿಗಳನ್ನೊಳಗೊಂಡ ಟೀಂನ ಲೀಡರ್ ಆಗಿ 30*30  ಫೀಟ್ ಎತ್ತರದ ಲಾರ್ಜ್ ಮೋಸ್ಟ್ ಪೇಪರ್ ಕಟ್ಟಿಂಗ್ ಅನ್ನುವ ಪರಿಕಲ್ಪನೆಯಲ್ಲಿ ಮೂಲಕ ಐರನ್ ಮ್ಯಾನ್ ಆಫ್ ಇಂಡಿಯಾ 1 ಗಂಟೆಯ ಅವಧಿಯಲ್ಲಿ “ಎಕ್ಸ್ಕ್ಲೂಸಿವ್ ವಲ್ಡ್ ರೆಕಾರ್ಡ್” ಮತ್ತು “ವಲ್ಡ್ ರೆಕಾರ್ಡ್ ಆಫ್ ಇಂಡಿಯಾ” ಎನ್ನುವ 2 ವಿಶ್ವ ದಾಖಲೆ.

# 20 ನಿಮಿಷಗಲ್ಲಿ ನೀಲಿ ಇಂಕ್ ಪ್ಯಾಡ್ ಅನ್ನು ಬಳಸಿಕೊಂಡು ಹೆಬ್ಬೆರಳು ಮತ್ತು ತೋರು ಬೆರಳಿನ ಸಹಾಯದಿಂದ ಗಾಂಧೀಜಿಯ ಬಾವಚಿತ್ರವನ್ನು ರಚಿಸಿ ವಿಶ್ವದಾಖಲೆ.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಸಮನ್ವಯ

ಮಿರರ್‌ ನ್ಯೂಸ್ ನೆಟ್ವರ್ಕ್

ಇದನ್ನೂ ಓದಿ

ಹೊಸರುಚಿ | ಗುಜ್ಜೆ ಶೇಂಗಾ ಪಲ್ಯ
March 15, 2025
7:00 AM
by: ದಿವ್ಯ ಮಹೇಶ್
ಕೇರಳದಲ್ಲಿ ಹೀಟ್‌ ವೇವ್‌ ಎಲರ್ಟ್‌ | 10 ಜಿಲ್ಲೆಗಳಿಗೆ ಎಲ್ಲೋ ಎಲರ್ಟ್‌ |
March 14, 2025
11:36 PM
by: ದ ರೂರಲ್ ಮಿರರ್.ಕಾಂ
ಮೆಣಸಿನಕಾಯಿ ಬೆಲೆ ಕುಸಿತ | ಒಣ ಮೆಣಸಿನಕಾಯಿ ಖರೀದಿಸುವಂತೆ ಬಸವರಾಜ ಬೊಮ್ಮಾಯಿ ಪತ್ರ
March 14, 2025
11:03 PM
by: The Rural Mirror ಸುದ್ದಿಜಾಲ
ಬೆಂಗಳೂರಿನಲ್ಲಿ ನೀರಿನ ದರ ಒಂದು ಲೀಟರ್‌ಗೆ ಒಂದು ಪೈಸೆ ಏರಿಕೆ ಮಾಡಲು ಸರ್ಕಾರ ಚಿಂತನೆ
March 14, 2025
10:57 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror