ಕಲೆ ಯಾರ ಸ್ವತ್ತು ಅಲ್ಲ ಅನ್ನೋ ಮಾತಿದೆ. ಕಲಾವಿದರು ಅಂದ್ರೆ ಬರೇ ಕಾಗದದ ಮೇಲೆ ಕುಂಚ ಹಿಡಿದು ಚಿತ್ರ ಬಿಡುಸುವವರು ಮಾತ್ರ ಅಲ್ಲ. ಕೆಲವರು ತಮ್ಮ ವೃತ್ತಿಯಲ್ಲೆ ಹೊಸದಾದ ನೈಪುಣ್ಯತೆಯನ್ನು ಕಲೆಯ ರೂಪದಲ್ಲಿ ತೋರಿಸುತ್ತಾರೆ.
ನೇಕಾರ ಕಲಾವಿದ ಮೇಘರಾಜ್ ಗುದಟ್ಟಿ #MeghrajGudatti ಅವರು ಇಳಕಲ್ ಸೀರೆಯಲ್ಲಿ ರಾಷ್ಟ್ರಧ್ವಜ #NationalFlag ಮತ್ತು ಚಂದ್ರಯಾನ-3 #Chandrayaan-3 ಚಿತ್ರ ಬಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ನನ್ನ ಕೈಲಾದ ಮಟ್ಟಿಗೆ ಪ್ರಯತ್ನಿಸಿ ನೇಯ್ಗೆಯ ಮೂಲಕ ಇಸ್ರೋ ವಿಜ್ಞಾನಿಗಳಿಗೆ ಗೌರವ ಸಲ್ಲಿಸಿದ್ದೇನೆ ಎಂದು ಮೇಘರಾಜ್ ಹೇಳಿದ್ದಾರೆ.
ದೇಶದಲ್ಲೇ ಪ್ರಖ್ಯಾತಿ ಹಾಗೂ ಪ್ರಸಿದ್ದಿಯನ್ನು ಪಡೆದಿರುವ ಇಳಕಲ್ ಸೀರೆಯ ಮೇಲೆ ಮೇಘರಾಜ್ ಅವರು ಕಲಾ ನೈಪುಣ್ಯ ಪ್ರದರ್ಶಿಸಿದ್ದು ಇದೇ ಮೊದಲಲ್ಲ. ಈ ಹಿಂದೆ ಅಯೋಧ್ಯೆಯ ರಾಮಮಂದಿರದ ಅಡಿಗಲ್ಲು ಹಾಕುವಾಗ ಸೀರೆಯಲ್ಲಿ ರಾಮಮಂದಿರದ ನೀಲನಕ್ಷೆಯನ್ನು ಬಿಡಿಸಿ ಅಭಿಮಾನ ಮೆರೆದಿದ್ದರು.
ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಜೇಮ್ಸ್ ಚಿತ್ರಕ್ಕೆ ವಿಶೇಷ ಶುಭಾಶಯಗಳನ್ನು ಕೋರಿ ಚಿತ್ರ ಶತದಿನೋತ್ಸವ ಆಚರಿಸಲಿ ಎಂದು ಶುಭ ಹಾರೈಸಿದ್ದರು. ಅಲ್ಲದೇ ಕಾಂತಾರ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಸಿಗಲಿ ಎಂದು ಸೀರೆಯಲ್ಲಿ ಶುಭ ಕೋರಿದ್ದರು.
ಕಳೆದ ಕೆಲವು ದಿನಗಳಿಂದ ಅಡಿಕೆ ಬೆಳೆಗಾರರಿಗೆ ನಿರೀಕ್ಷೆಯ ಮೇಲೆ ನಿರೀಕ್ಷೆ.ಚಾಲಿ ಅಡಿಕೆ ಧಾರಣೆ…
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್…
ಕುಶಾಲಿ ಗೌಡ, ಗ್ರೆಡ್ -3, ಜ್ಞಾನ ಅಕಾಡೆಮಿ, ತರಬನ ಹಳ್ಳಿ ಬೆಂಗಳೂರು |…
ಅನ್ವಿತಾ ಸಿ, 9 ನೇ ತರಗತಿ, ಸರ್ಕಾರಿ ಪ್ರೌಢಶಾಲೆ , ಪಂಜ |…
ಜಮ್ಮು ಮತ್ತು ಕಾಶ್ಮೀರ, ಕರಾವಳಿ ಕರ್ನಾಟಕ, ಕೇರಳ ಮತ್ತು ಮಾಹೆಯ ಹಲವೆಡೆ ಮುಂದಿನ…
ದಕ್ಷಿಣ ಕನ್ನಡ , ಉಡುಪಿ ಹಾಗೂ ಕೊಡಗು ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ…