ರಾಜ್ಯದಲ್ಲಿ ಚುನಾವಣಾ ದಿನಗಳು ಹತ್ತಿರ ಬರುತ್ತಿವೆ. ಈಗ ಅಭಿವೃದ್ಧಿ, ಓಲೈಕೆ ಸೇರಿದಂತೆ ವಿವಿಧ ಪ್ರಯತ್ನಗಳು ನಡೆಯುತ್ತಿವೆ. ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಯಾಗುತ್ತಿದೆ. ಕೆಲವು ಕಡೆ ಅಭ್ಯರ್ಥು ಬದಲಾವಣೆ, ಇನ್ನೂ ಕೆಲವು ಕಡೆ ಮುಂದುವರಿಕೆ ಇತ್ಯಾದಿಗಳ ಬಗ್ಗೆ ಚರ್ಚೆಯಾಗುತ್ತಿದ್ದಂತೆಯೇ ಇದೀಗ ಟ್ವೀಟ್ ಅಭಿಯಾನಗಳೂ ಆರಂಭವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಯುವಕರಿಂದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಪರವಾದ ಒತ್ತಾಯ ಹೆಚ್ಚಾಗಿದ್ದು ಭಾನುವಾರ #PuttilaForPuttur ಟ್ವೀಟ್ ಅಭಿಯಾನ ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಅರುಣ್ ಕುಮಾರ್ ಪುತ್ತಿಲ ಅವರ ಹೆಸರು ಬಲವಾಗಿ ಕೇಳಿಬರುತ್ತಿದ್ದು ಹಿಂದೂ ಕಾರ್ಯಕರ್ತರು ಾರುಣ್ ಕುಮಾರ್ ಪುತ್ತಿಲ ಅವರ ಹೆಸರನ್ನು ಹೇಳುತ್ತಿದ್ದಾರೆ. ಅರುಣ್ ಕುಮಾರ್ ಪುತ್ತಿಲ ಅವರೇ ಅಭ್ಯರ್ಥಿ ಆಗಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಇದರ ಹಿನ್ನೆಲೆಯಲ್ಲಿ ಅರುಣ್ ಕುಮಾರ್ ಅಭಿಮಾನಿಗಳು ಟ್ವೀಟ್ ಅಭಿಯಾನ ಆರಂಭಿಸಿದ್ದು, ಬಿಜೆಪಿಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಅರುಣ್ ಅವರೇ ಅಭ್ಯರ್ಥಿ ಆಗಬೇಕು ಎಂದು ಒತ್ತಾಯ ಹೆಚ್ಚಿದೆ. ಇದಕ್ಕಾಗಿ ಬಿ ಎಲ್ ಸಂತೋಷ್, ಬಿ ಎಸ್ ಯಡಿಯೂರಪ್ಪ , ನಳಿನ್ ಕುಮಾರ್ ಕಟೀಲು ಸೇರಿದಂತೆ ವಿವಿಧ ಮಂದಿಯನ್ನು ಟ್ಯಾಗ್ ಮಾಡಿ ಪ್ರತಿಕ್ರಿಯೆ ನೀಡಲು ಸಿದ್ಧತೆ ನಡೆದಿದೆ. ಕಳೆದ ಬಾರಿ ಕೂಡಾ ಅರುಣದ್ ಕುಮಾರ್ ಪುತ್ತಿಲ ಅವರು ಪುತ್ತೂರಿನಿಂದ ಸ್ಫರ್ಧಿಸಲು ಆಕಾಂಕ್ಷಿಯಾಗಿದ್ದರು. ಆದರೆ ಸೀಟು ಸಿಕ್ಕಿರಲಿಲ್ಲ, ಬಳಿಕ ಬಿಜೆಪಿ ಹಾಗೂ ಸಂಘ ಪರಿವಾರದ ಪ್ರಮುಖರು ಅರುಣ್ ಕುಮಾರ್ ಪುತ್ತಿಲ ಜೊತೆ ಮಾತುಕತೆ ನಡೆಸಿದ್ದರು.