ನಿಲುಮೆಯಲ್ಲಿ ಅರುಣ್‌ ಕುಮಾರ್‌ ಪುತ್ತಿಲ ನಾಯಕನಾಗಿ ಬೆಳೆದ ಬಗ್ಗೆ ಚರ್ಚೆ | ಅರುಣ್‌ ಪುತ್ತಿಲ ಪರವಾಗಿಯೇ ಹಿಂದೂ ಕಾರ್ಯಕರ್ತರಿಂದ ಬ್ಯಾಟಿಂಗ್‌ |

October 8, 2023
7:20 PM
ಹಿಂದೂ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಪರವಾಗಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಮತ್ತೆ ಬ್ಯಾಟಿಂಗ್‌ಗೆ ಇಳಿದಿದ್ದಾರೆ. ಅರುಣ್‌ ಪುತ್ತಿಲ ಅವರೇ ನಿಜವಾದ ಹಿಂದೂ ನಾಯಕ ಎಂದು ಹೇಳಲು ಆರಂಭಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ಕಾರ್ಯಕರ್ತರ ಅಭಿಲಾಷೆಯಂತೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಫರ್ಧಿಸಿದ್ದ ಹಿಂದೂ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಅವರ ಪರವಾಗಿ ಮತ್ತೆ ಸೋಶಿಯಲ್‌ ಮೀಡಿಯಾದಲ್ಲಿ ಬ್ಯಾಟಿಂಗ್‌ ಶುರುವಾಗಿದೆ. ಅರುಣ್‌ ಕುಮಾರ್‌ ಪುತ್ತಿಲ ಅವರೇ ನಿಜವಾದ ಹಿಂದೂ ನಾಯಕ ಎಂದು  ಹಿಂದೂ ಸಂಘಟನೆಗಳ ಕಾರ್ಯಕರ್ತರು ಬ್ಯಾಂಟಿಗ್‌ ಮಾಡುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಸಂಗತಿಗಳ ಬಗ್ಗೆ ಚರ್ಚೆಯಾಗುವ ಪೇಸ್‌ಬುಕ್‌ನ ನಿಲುಮೆ ಗುಂಪಿನಲ್ಲೂ ಚರ್ಚೆಯಾಗಿದೆ.

Advertisement
Advertisement

ಅರುಣ್‌ ಕುಮಾರ್‌ ಪುತ್ತಿಲ ಅವರು ಕಳೆದ ಕೆಲವು ಸಮಯಗಳಿಂದ ನಿರಂತರವಾಗಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಭೇಟಿ, ನೆರವು ಇತ್ಯಾದಿಗಳ ಮೂಲಕ ಗಮನ ಸೆಳೆದಿದ್ದರು. ಈಚೆಗೆ ಗಣೇಶೋತ್ಸವ ಸಂದರ್ಭ 50 ಕ್ಕೂ ಅಧಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದಿದ್ದರು. ಇದೀಗ ಶಿವಮೊಗ್ಗ ಘಟನೆ, ಪುನೀತ್‌ ಕೆರೆಹಳ್ಳಿ ಅವರ ಉಪವಾಸ ಕಾರ್ಯಕ್ರಮ ಹಾಗೂ ಆ ಬಳಿಕದ ಘಟನೆಗಳ ಮೂಲಕ ಮತ್ತೆ ಅರುಣ್‌ ಕುಮಾರ್‌ ಪುತ್ತಿಲ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಹಿಂದೂ ಸಂಘಟನೆಯ ಕಾರ್ಯಕರ್ತರಲ್ಲಿ ಮತ್ತೆ ಸಂಚಲನ ಆರಂಭವಾಗಿದೆ.

Advertisement

ಈಚೆಗೆ ಸಾಮಾಜಿಕ ಸಂಗತಿಗಳ ಬಗ್ಗೆ ಚರ್ಚೆಯಾಗುವ ನಿಲುಮೆ ಗುಂಪಿನಲ್ಲೂ ಅರುಣ್‌ ಕುಮಾರ್‌ ಪುತ್ತಿಲ ಅವರ ಬಗ್ಗೆ ಚರ್ಚೆಯಾಗಿದೆ. ಒಬ್ಬ ನಾಯಕ ಬೆಳೆಯಬೇಕಾದ್ದು ತಾನೇ ಆಗಿ ಎನ್ನುವ ಪೋಸ್ಟ್‌ ಒಂದು ಕಂಡುಬಂದಿತ್ತು. ಇದರಲ್ಲಿ ಅನೇಕ ಪ್ರತಿಕ್ರಿಯೆಗಳು ಕಂಡುಬಂದಿದೆ. ಅರುಣ್‌ ಕುಮಾರ್‌ ಪುತ್ತಿಲ ಅವರಂತಹ ನಾಯಕರು ಹಿಂದೂ ಸಂಘಟನೆಗಳ ಕಾರ್ಯಕರ್ತರಿಗೆ ಅಗತ್ಯ ಇದ್ದಾರೆ ಎಂದು ಚರ್ಚೆಯಾಗಿದೆ.

Advertisement

ಈ ನಡುವೆ ಶಿವಮೊಗ್ಗ ಘಟನೆಗೆ ಇನ್ನೊಂದು ಪ್ರತಿಕ್ರಿಯೆ ನೀಡಿದ ಅರುಣ್‌ ಕುಮಾರ್‌ ಪುತ್ತಿಲ,  ರಾಗಿಗುಡ್ಡದಂತೆ ಕಾಂಗ್ರೇಸ್‍ ಶಾಸಕ ಅಖಂಡ ಶ್ರೀನಿವಾಸರ ಮನೆಗೆ ದಾಳಿ ಮಾಡುವಾಗ ಮತಾಂಧರು ಪಕ್ಷ ನೋಡಿಲ್ಲ – ಸಿದ್ದರಾಮಯ್ಯ , ಪರಮೇಶ್ವರ್ ರವರೂ ಕೂಡ ಹಿಂದೂಗಳೇ, ಓಲೈಕೆ ರಾಜಕಾರಣ ಮಾಡಿದರೆ ಮುಂದೊಂದು ದಿನ ನಿಮಗೂ ದೊಡ್ಡದಾಗಿರುವ ಗಂಡಾಂತರ ತಪ್ಪಿದ್ದಲ್ಲ.ರಾಗಿಗುಡ್ಡದಲ್ಲಿ ಪ್ರತಿ ಮನೆ ಮನೆಗೆ ಹೋಗಿದ್ದೇನೆ ಅನ್ಯಾಯಕ್ಕೊಳಕ್ಕಾದವರ ಸ್ಥಿತಿ ಕಂಡಾಗ ಕಣ್ಣೀರು ಬರ್ತದೆ. ಮತಾಂಧರು ಈ ರೀತಿಯ ಭಯೋತ್ಪಾದನೆಗೆ ಇಳಿದರೆ ನಾವು ನಮ್ಮ ರಕ್ಷಣೆಗೆ ತಲವಾರು ಹಿಡಿಯಲೇಬೇಕು. ಶಿವಮೊಗ್ಗದಲ್ಲಿ ಹೇಳಿದ ಈ ಮಾತಿಗೆ ನಾನು ಈಗಲೂ ಬದ್. ಕೇಸಿಗೆ ಹೆದರುವ ಜಾಯಮಾನ ನನ್ನದಲ್ಲ – ಹಿಂದೂಗಳೊಂದಿಗೆ ಸದಾ ಜೊತೆಗಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಬಳಿಕ ಮತ್ತಷ್ಟು ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಪುತ್ತಿಲ ಅವರ ನಡೆ ಇಷ್ಟವಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಿಸಾನ್‌ ಸಮ್ಮಾನ್‌ ನಿಧಿಯ ಮೂಲಕ ರೈತರಿಗೆ 21,000 ಕೋಟಿ ರೂಪಾಯಿ |
September 19, 2024
9:17 PM
by: ದ ರೂರಲ್ ಮಿರರ್.ಕಾಂ
ತುಮಕೂರು ಜಿಲ್ಲೆಯಲ್ಲಿ ದಾಖಲೆಯ ಹಾಲು ಉತ್ಪಾದನೆ
September 19, 2024
9:00 PM
by: ದ ರೂರಲ್ ಮಿರರ್.ಕಾಂ
ಕೋಲಾರದಲ್ಲಿ ಸಾವಿರಕ್ಕೂ ಅಧಿಕ ನಕಲಿ ವೈದ್ಯರ ವಿರುದ್ಧ ಪ್ರಕರಣ |
September 19, 2024
8:53 PM
by: ದ ರೂರಲ್ ಮಿರರ್.ಕಾಂ
ಪಶ್ಚಿಮ ಘಟ್ಟ ಸೂಕ್ಷ್ಮ ಪರಿಸರ ಪ್ರದೇಶ | ವಿವೇಚನಾತ್ಮಕ ನಿರ್ಧಾರ ಕೈಗೊಳ್ಳುವ ಅಗತ್ಯ | ಅರಣ್ಯ ಸಚಿವ ಈಶ್ವರ್ ಖಂಡ್ರೆ
September 19, 2024
8:35 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror