ಶಿವಮೊಗ್ಗ ರಾಗಿಗುಡ್ಡದಲ್ಲಿ ಹಿಂಸಾಚಾರ | ಅರುಣ್ ಪುತ್ತಿಲ ನೇತೃತ್ವದ ತಂಡ ಭೇಟಿ | ನ್ಯಾಯಾಂಗ ತನಿಖೆಗೆ ಅರುಣ್‌ ಕುಮಾರ್‌ ಪುತ್ತಿಲ ಒತ್ತಾಯ |

October 6, 2023
7:30 PM
ಸರ್ಕಾರ ಶಿವಮೊಗ್ಗದಲ್ಲಿ ನಡೆದ ಕ್ರೌರ್ಯ ಘಟನೆಯನ್ನು ಶೀಘ್ರ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಮತ್ತು ಸಂತ್ರಸ್ಥರಿಗೆ ಸೂಕ್ತ ಭದ್ರತೆ ಹಾಗೂ ಪರಿಹಾರ ಒದಗಿಸಬೇಕು ಎಂದು ಅರುಣ್‌ ಕುಮಾರ್‌ ಪುತ್ತಿಲ ಒತ್ತಾಯಿಸಿದ್ದಾರೆ.

ಶಿವಮೊಗ್ಗ ರಾಗಿಗುಡ್ಡದಲ್ಲಿ ಈದ್ ಮಿಲಾದ್ ನಂತರ ಭಯಾನಕ ಹಿಂಸಾಚಾರ ನಡೆದ ಎಲ್ಲಾ ಮನೆಗಳಿಗೆ ಅರುಣ್ ಪುತ್ತಿಲ ನೇತೃತ್ವದ ತಂಡ ಭೇಟಿ ನೀಡಿತು. ರಾಗಿಗುಡ್ಡದಲ್ಲಿ ಈದ್ ಮಿಲಾದ್ ಹಬ್ಬ ಆಚರಣೆಯಲ್ಲಿ ಮತಾಂಧ ಟಿಪ್ಪು, ಔರಂಗಜೇಬನನ್ನು ವೈಭವೀಕರಿಸಿ ತಲವಾರು ತೋರಿಸಿ ಪೊಲೀಸರಿಗೆ ಕಲ್ಲುತೂರಾಟ ನಡೆಸಿ, ನೂರಾರು ಮನೆಗಳಿಗೆ ಹಾನಿ ಉಂಟು ಮಾಡಿದ ಪ್ರದೇಶಗಳಿಗೆ ಅರುಣ್‌ ಕುಮಾರ್‌ ಪುತ್ತಿಲ ಭೇಟಿ ಸಂತ್ರಸ್ತರಿಗೆ ಸಾಂತ್ವನ ತಿಳಿಸಿದರು.

ಶಿವಮೊಗ್ಗ ರಾಗಿಗುಡ್ಡದಲ್ಲಿ ಲಕ್ಷ್ಮೀ ಎಂಬವರು ತಾಳಿ ಅಡವಿಟ್ಟು ಆಟೋ ಖರೀದಿಸಿದ್ದು ಮತಾಂದರ ಕ್ರೂರತೆಗೆ ಆಟೋ ಜಖಂಗೊಂಡಿದೆ. ಹಲವು ಮನೆಗಳ ಕಿಟಕಿ, ಬಾಗಿಲು , ಗೋಡೆ ಜಖಂಗೊಂಡಿದೆ. ಸ್ವಂತ ವಿದ್ಯಾಭ್ಯಾಸ ಕಲಿಸಿದ ಶಿಕ್ಷಕಿ ಮನೆಗೆ ಅವರ ಶಿಷ್ಯಂದಿರೇ ಕಲ್ಲು ತೂರಾಟ ನಡೆಸಿದ್ದು ನೆನೆಸಿಕೊಂಡು ನಿವೃತ್ತ ಶಿಕ್ಷಕಿ ಬೇಸರ ವ್ಯಕ್ತಪಡಿಸಿದರು. ಈಗಲೂ ಹಿಂದೂಗಳು ಅಲ್ಲಿ ಭಯದ ವಾತಾವರಣದಲ್ಲಿ ಬದುಕು ಸವೆಸುತ್ತಿದ್ದಾರೆ. ಈ ಘಟನೆಯಲ್ಲಿ ಭಯೋತ್ಪಾದಕ ಬೆಂಬಲಿಗರ ಕೈವಾಡವಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಪುತ್ತಿಲ ತಂಡ ಹೇಳಿತು.

ಸರ್ಕಾರ ಈ ಕ್ರೌರ್ಯ ಘಟನೆಯನ್ನು ಶೀಘ್ರ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಮತ್ತು ಸಂತ್ರಸ್ಥರಿಗೆ ಸೂಕ್ತ ಭದ್ರತೆ ಹಾಗೂ ಪರಿಹಾರ ಒದಗಿಸಬೇಕು ಎಂದು ಅರುಣ್‌ ಕುಮಾರ್‌ ಪುತ್ತಿಲ ಒತ್ತಾಯಿಸಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹಲವು ರಾಜ್ಯಗಳಲ್ಲಿ ಮುಂದಿನ 2 ದಿನ ಭಾರೀ ಮಳೆ ಸಾಧ್ಯತೆ – ಆರೆಂಜ್ ಅಲರ್ಟ್
October 17, 2026
7:30 AM
by: ದ ರೂರಲ್ ಮಿರರ್.ಕಾಂ
ಬರಪೀಡಿತ ವಿಜಯಪುರದಲ್ಲಿ ಹಸಿರಿನ ಕ್ರಾಂತಿ
October 17, 2026
7:23 AM
by: ದ ರೂರಲ್ ಮಿರರ್.ಕಾಂ
ಅಡಿಕೆ ತೋಟದಿಂದ ನ್ಯಾನೋತಂತ್ರಜ್ಞಾನದವರೆಗೆ…! ಬೆಳೆಗಾರರಿಗೆ ಹೊಸ ಮೌಲ್ಯ ಸೃಷ್ಟಿಸುವ ಸಂಶೋಧನೆ
October 16, 2026
5:14 PM
by: ವಿಶೇಷ ಪ್ರತಿನಿಧಿ
ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣಕ್ಕೆ ಬೆಳ್ಳಾರೆ ಬಳಕೆದಾರರ ವೇದಿಕೆ ವಿರೋಧ- ಜನಮತ ಸಂಗ್ರಹಕ್ಕೆ ಆಗ್ರಹ
October 16, 2026
3:42 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror