ಚಳಿಗಾಲದ ಈ ಸಮಯದಲ್ಲಿ ಜನರು ಬೆಳಿಗ್ಗೆ ಎದ್ದೇಳಲು ತುಂಬಾ ಅಲಸ್ಯವಾಗಿರುತ್ತಾರೆ. ಮಾತ್ರವಲ್ಲ ಕೆಲವರು ಕುಳಿತು ಬಿಸಿಬಿಸಿ ಒಂದು ಕಪ್ ಚಾ ಅಥವಾ ಕಾಫಿಯನ್ನು ಕುಡಿಯಲು ಇಷ್ಟಪಡುತ್ತಾರೆ. ಆದರೆ ಭಾರತೀಯ ಸೇನೆಯ ಸೈನಿಕರ ಜೀವನವು ಚಳಿಗಾಲದ ಈ ಅವಧಿಯಲ್ಲಿ ಗಡಿಯಲ್ಲಿ ಕಷ್ಟಕರ. ಸವಾಲುಗಳ ನಡುವೆ ಗಡಿಗಳನ್ನು ಕಾಪಾಡಲು ಮತ್ತು ವಿಪರೀತ ಹವಾಮಾನ ಪರಿಸ್ಥಿತಿಗಳನ್ನು ಎದುರಿಸುತ್ತಾರೆ. ಇಂತಹ ಸ್ಥಿತಿಯಲ್ಲೂ ಉಲ್ಲಾಸದಿಂದ ಕಂಡುಬರುತ್ತಾರೆ. ಇಂತಹ ಸಂಗತಿಗಳೇ ಭಾರತೀಯರಿಗೆಲ್ಲಾ ಸ್ಫೂರ್ತಿ.
ಈ ಚಳಿಗಾಲದ ಸಮಯದಲ್ಲಿ ಹಿಮದಿಂದ ಆವೃತವಾದ ಪ್ರದೇಶದಲ್ಲಿ ಸೈನಿಕರ ಗುಂಪು ಸಾಕಷ್ಟು ಉತ್ಸಾಹದಿಂದ ವಾಲಿಬಾಲ್ ಆಡುತ್ತಿರುವ ವಿಡೀಯೋ ವೈರಲ್ ಆಗಿದೆ. ಸೈನಿಕರು ತಮ್ಮ ತಲೆಯಿಂದ ಕಾಲ್ಬೆರಳುಗಳವರೆಗೆ ಚಳಿಗಾಲದ ಬಟ್ಟೆಗಳನ್ನು ಸಂಪೂರ್ಣವಾಗಿ ಮುಚ್ಚಿಕೊಂಡು ಹಿಮಗಳು ಬೀಳುತ್ತೀರುವ ಈ ಸಮಯದಲ್ಲಿ ಆಟದಲ್ಲಿ ಒಂದು ಪಾಯಿಂಟ್ ಗಳಸಿದ ನಂತರ ಉಲ್ಲಾಸದಿಂದ ಸಿಡಿಯುವುದನ್ನು ಸಹ ಈ ವೀಡಿಯೋದಲ್ಲಿ ಕಾಣಬಹುದು.
The best ‘Winter Games.’
Our Jawans. 🇮🇳 pic.twitter.com/8Jwk4CEy2W— Awanish Sharan (@AwanishSharan) January 13, 2022
Advertisement
ಐಎಎಸ್ ಅಧಿಕಾರಿ ಅವನೀಶ್ ಶರಣ್ ಸಾಮಾಜಿಕ ಜಾಲದಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಜನರು ಈ ವೀಡಿಯೋ ವನ್ನು ನೋಡಿ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.