ಮುಂಗಾರು ಆರಂಭವಾಗುತ್ತಿದ್ದಂತೆ ಏರಿದ ತರಕಾರಿ ಬೆಲೆ | ಗಗನಕ್ಕೇರಿದ ಬೀನ್ಸ್‌ ದರ | ಬಡವರ ಪಾಡೇನು..? |

June 12, 2024
1:23 PM

ಬರಗಾಲ(Drought) ಬಂದರೆ ಮಳೆ(Rain) ಇಲ್ಲದೆ ತರಕಾರಿ ರೇಟ್‌(Vegetable rate) ಗಗನಕ್ಕೆ ಹಾರುತ್ತದೆ. ಅದೇ ರೀತಿ ಮಳೆ ಜಾಸ್ತಿಯಾದರು ಮಳೆಗೆ ತರಕಾರಿ ಕೊಳೆತು ದರ ಏರುತ್ತದೆ(Price hike). ಇನ್ನೇನು ಮುಂಗಾರು(Mansoon rain) ಆರಂಭವಾಗಿದೆ. ತರಕಾರಿ ಕೊಳೆಯುವಂತೆ ಇನ್ನು ಮಳೆ ಆರಂಭವಾಗಿಲ್ಲ. ಆದರೂ ತರಕಾರಿ ರೇಟು ಜಾಸ್ತಿಯಾಗಿದೆ. ಯಾವ ತರಕಾರಿ ಬೆಲೆ ಕೇಳಿದರು ತರಕಾರಿ ಕೊಂಡುಕೊಳ್ಳುವುದೇ ಬೇಡ ಅನ್ನಿಸುತ್ತದೆ. ಪ್ರತಿ ವರ್ಷದಂತೆ  ಮಳೆಗಾಲ ಆರಂಭವಾಗುತ್ತಿದ್ದಂತೆ  ತರಕಾರಿ ದರಗಳು ಗಗನಮುಖಿಯಾಗಿವೆ. ಈ ಪೈಕಿ ಬೀನ್ಸ್ ದರ ಡಬಲ್ ಸೆಂಚುರಿ ದಾಟಿದೆ. ದೂರದ ಹಿಮಾಚಲ ಪ್ರದೇಶದಿಂದ(Himachala Pradesh) ಬೀನ್ಸ್ (Beans Price Hike) ತರಲಾಗ್ತಿದ್ದು, ಸದ್ಯಕ್ಕೆ ಬೀನ್ಸ್ ಶ್ರೀಮಂತರ ತರಕಾರಿಯಾಗಿ ಮಾರ್ಪಟ್ಟಿದೆ.

Advertisement

ತರಕಾರಿ ದರ ಏರುತ್ತಲೇ ಇದ್ದು, ಗ್ರಾಹಕರಿಗೆ ಬಹುದೊಡ್ಡ ಹೊರೆಯಾಗಿ ಪರಿಣಮಿಸಿದೆ. ಮಳೆ ಹೆಚ್ಚಾಗುತ್ತಿದ್ದಂತೆಯೇ ತರಕಾರಿ ದರವೂ ಗಗನಕ್ಕೇರಿದೆ. ಅದ್ರಲ್ಲೂ ಬೀನ್ಸ್ ದರ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಹೋಲ್ ಸೇಲ್ ದರವೇ ಡಬಲ್ ಸೆಂಚುರಿ ದಾಟಿ, ಗ್ರಾಹಕರನ್ನು ಹುಬ್ಬೇರುವಂತೆ ಮಾಡಿದೆ. ರೀಟೇಲ್‌ನಲ್ಲಿ ಪ್ರತಿ ಕೆಜಿ ಗೆ 200 ಕ್ಕೂ ಹೆಚ್ಚು ದರ ನಿಗದಿಯಾಗುತ್ತಿದೆ.

ಬೀನ್ಸ್ ದರ ಏರಿಕೆಗೆ ಇದೇ ಕಾರಣ : ಕಳೆದ ವರ್ಷದ ಬರಗಾಲದಿಂದ ರಾಜ್ಯದಲ್ಲಿ ಎಲ್ಲಿಯೂ ನಿರೀಕ್ಷಿತ ಮಟ್ಟದಲ್ಲಿ ಬೀನ್ಸ್ ಬೆಳೆದಿಲ್ಲ. ಹೀಗಾಗಿ ದೂರದ ಹಿಮಾಚಲ ಪ್ರದೇಶದಿಂದ ಬೀನ್ಸ್ ಖರೀದಿ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಹುಬ್ಬಳ್ಳಿ ವರ್ತಕರು ದೆಹಲಿ ಮೂಲಕ ಬೀನ್ಸ್ ತರಿಸಿಕೊಳ್ಳುತ್ತಿದ್ದಾರೆ. ಹುಬ್ಬಳ್ಳಿಗೆ ನಿತ್ಯ ಒಂದು ಟ್ರಕ್ ಬೀನ್ಸ್ ತರಿಸಲಾಗುತ್ತಿದೆ. ಪ್ರತಿ ಟ್ರಕ್ ನಲ್ಲಿ 15 ಟನ್ ಬೀನ್ಸ್ ಸಾಗಾಟ ಮಾಡಲಾಗುತ್ತಿದೆ. ಹುಬ್ಬಳ್ಳಿ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಗೆ ಇಲ್ಲಿಂದಲೇ ಪೂರೈಕೆ ಮಾಡಲಾಗುತ್ತದೆ. ದೂರದ ಊರಿನಿಂದ ತರಿಸುತ್ತಿರುವುದರಿಂದ ದರ ಏರಿಕೆಯಾಗಿದೆ.

  • ಅಂತರ್ಜಾಲ ಮಾಹಿತಿ
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 07-05-2025 | ರಾತ್ರಿ ಗುಡುಗು ಸಹಿತ ಅಲ್ಲಲ್ಲಿ ಸಾಮಾನ್ಯ ಮಳೆ | ಮೇ 11 ರಿಂದ ಮಳೆ ಪುನರಾರಂಭಗೊಳ್ಳುವ ಲಕ್ಷಣ
May 7, 2025
2:42 PM
by: ಸಾಯಿಶೇಖರ್ ಕರಿಕಳ
ಈ ತಿಂಗಳ ಅಂತ್ಯದೊಳಗೆ 6 ರಾಶಿಯವರಿಗೆ ಉತ್ತಮ ಶುಭ ಫಲ | ಕೆಲವು ವಿಧಿ ವಿಧಾನಗಳನ್ನು ಅನುಸರಿಸಿದರೆ ಯಶಸ್ಸು |
May 7, 2025
7:02 AM
by: ದ ರೂರಲ್ ಮಿರರ್.ಕಾಂ
ಹೊಸರುಚಿ | ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ಚಟ್ಟಂಬಡೆ
May 7, 2025
7:00 AM
by: ದಿವ್ಯ ಮಹೇಶ್
ಭಾರತದಿಂದ ‘ಆಪರೇಷನ್ ಸಿಂಧೂರ್’ | ಭಯೋತ್ಪಾದಕ ಮೂಲಸೌಕರ್ಯಗಳ ನೆಲೆಗಳ ನಾಶ | 9 ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ |
May 7, 2025
6:05 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group