ಬಿಸಿಲು ಬೇಗೆ(Summer) ಏರಿದಂತೆ, ತಾಪ(Temparature) ಹೆಚ್ಚಾದಾಗ ಅನೇಕರಿಗೆ ಹೊಸ ಸಂಕಟ ಶುರುವಾಗುತ್ತದೆ. ಅದೆಂದರೆ ಉರಿಮೂತ್ರ. ಮೂತ್ರ ವಿಸರ್ಜಿಸುವಾಗ ವಿಪರೀತ ಉರಿ, ಮೂತ್ರನಾಳದ ಉರಿಯೂತ ಮತ್ತು ಕೆಲವೊಮ್ಮೆ ರಕ್ತಸ್ರಾವವಾಗುತ್ತದೆ. ಈ ಸಮಸ್ಯೆ ಮುಖ್ಯವಾಗಿ ಬೇಸಿಗೆಯಲ್ಲಿ ಕಂಡುಬರುತ್ತದೆ. ಅಂತಹ ಸಂದರ್ಭಗಳಲ್ಲಿ ಮೂತ್ರದಲ್ಲಿ ರಕ್ತ ಅಥವಾ ಮೋಡದ ಇಲ್ಲವೆ ಕೆಂಪು ಕಂದು ಬಣ್ಣಕ್ಕೆ ತಿರುಗುತ್ತದೆ. ಬೇಸಿಗೆಯ ಈ ಸಮಸ್ಯೆಯನ್ನು ಹೇಗೆ ಎದುರಿಸುವುದು ಮತ್ತು ಅದರ ಮನೆಮದ್ದುಗಳನ್ನು ನಾವು ನೋಡಲಿದ್ದೇವೆ!!
ಉರಿಮೂತ್ರಕ್ಕೆ ಕಾರಣಗಳು..! : ಬೇಸಿಗೆಯಲ್ಲಿ ಬೆವರಿನಿಂದ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ನೀರಿನ ನಷ್ಟವು ಮೂತ್ರದಲ್ಲಿ ಉಪ್ಪಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ಮೂತ್ರದಲ್ಲಿ ಈ ಅಧಿಕ ಸಾಂದ್ರತೆಯ ಉಪ್ಪಿನಂಶ ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿತವನ್ನು ಉಂಟುಮಾಡುತ್ತದೆ’. ಈ ಸಮಸ್ಯೆ ಪುರುಷರು ಹಾಗೂ ಮಹಿಳೆಯರಲ್ಲಿ ಸ್ವಲ್ಪ ಭಿನ್ನವಾಗಿ ಕಂಡುಬರುತ್ತದೆ. ಪುರುಷರಲ್ಲಿ, ಮೂತ್ರ ಮತ್ತು ಮೂತ್ರನಾಳದ ಉರಿ ಮತ್ತು ಸುಡುವಿಕೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ, ಆದರೆ, ಮಹಿಳೆಯರಲ್ಲಿ, ಅದೇ ರೋಗಲಕ್ಷಣಗಳು ಸ್ವಲ್ಪ ಹೆಚ್ಚು ತೀವ್ರವಾಗಿರುತ್ತವೆ. ಮಹಿಳೆಯರು ಸುಡುವ ಸಂವೇದನೆ ಮತ್ತು ಮೂತ್ರದಲ್ಲಿ ರಕ್ತಸ್ರಾವದಿಂದ ಬಳಲುತ್ತಾರೆ. ಇದರಿಂದ, ಚಿಕ್ಕ ಮಕ್ಕಳೂ ಕೂಡ ಹೊರತಾಗಿಲ್ಲ. , ಈ ಸಮಸ್ಯೆಗೆ ಕೆಲವು ಮನೆಮದ್ದುಗಳಿವೆ. ಬನ್ನಿನೋಡೋಣ!! . . .
ಪರಿಹಾರ
1. ಮೊದಲ ಮತ್ತು ಅಗ್ರಗಣ್ಯ ಪರಿಹಾರವೆಂದರೆ ‘ಸಾಕಷ್ಟು ನೀರು ಕುಡಿಯುವುದು.’
2. ಅಡುಗೆ ಸೋಡಾ ಮತ್ತು ನಿಂಬೆಯನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಸಮಸ್ಯೆ ಕಡಿಮೆಯಾಗುತ್ತದೆ.
3. ಎಳನೀರನ್ನು ಕುಡಿಯಿರಿ.
4. ಕೊತ್ತಂಬರಿ ಬೀಜ, ಜೀರಿಗೆ, ಸೋಂಪನ್ನು ನೆನೆಸಿ, ಅದರಲ್ಲಿ ಕಲ್ಲು ಸಕ್ಕರೆ ಬೆರೆಸಿ ಕುಡಿಯಿರಿ.
5. ಅಧಿಕ ನೀರಿನಂಶ ಇರುವ ಹಂಗಾಮಿ ಹೆಣ್ಣುಗಳ ರಸವನ್ನು ಕುಡಿಯಿರಿ. ಉದಾ. ಕಲ್ಲಂಗಡಿ, ಪುಟ್ಟಿ ಹಣ್ಣು, ಕಿತ್ತಳೆ, ಮೋಸಂಬಿ, ಇತ್ಯಾದಿ. ಹಣ್ಣುಗಳನ್ನು ತಿನ್ನುವುದು ಇನ್ನೂ ಉತ್ತಮ.
6. ಕೊತ್ತಂಬರಿ ಸೊಪ್ಪು ಮತ್ತು ಬೆಲ್ಲದೊಂದಿಗೆ ಎಳೆನೀರನ್ನು ಕುಡಿಯಿರಿ.
7. ನೀರಾ ಕುಡಿಯುವುದು ಕೂಡ ಪ್ರಯೋಜನಕಾರಿ.
8. ಆಮ್ಸೋಲ್ (ಕೋಕಂ) ನೀರು, ಅಥವಾ ಅದರ ಪಾನಕ/ಶರಬತ್ತು ಮಾಡಿ ಕುಡಿಯಬಹುದು.
9. ಕಚ್ಚಾ ಮಾವಿನ ಪಾನಕದಲ್ಲಿ ಏಲಕ್ಕಿ ಬೆರೆಸಿ ಸೇವಿಸಬಹುದು.
10. ಪುದೀನಾ ನೀರು ಕುಡಿಯಿರಿ!!
11. ಪ್ರತಿದಿನ ಒಂದೆರಡು ಏಲಕ್ಕಿಯನ್ನು ತಿನ್ನಬೇಕು.
12. ನೆನೆಸಿದ ಸುಣ್ಣವನ್ನು ಮಕ್ಕಳ ಈ ಲೇಪಿಸಿಕೊಳ್ಳಿ. ಇದರಿಂದ ತಕ್ಷಣದ ಪರಿಹಾರ ದೊರೆಯುತ್ತದೆ.
13 ಒಂದು ಬಕೆಟ್‌ಗೆ ತಣ್ಣೀರು ತುಂಬಿಸಿ ಅದರಲ್ಲಿ ನಿಮ್ಮ ಕಾಲುಗಳನ್ನು ಇಟ್ಟು ಕೆಲ ನಿಮಿಷ ಕುಳಿತುಕೊಳ್ಳಿ…
ಕನ್ನಡಕ್ಕೆ: ಡಾ. ಪ್ರ. ಅ. ಕುಲಕರ್ಣಿ