ಕೊರೋನಾ ಆತಂಕದ ಹಿನ್ನಲೆಯಿಂದ ಸರ್ಕಾರವೂ ಹಲವು ಕ್ರಮಗಳನ್ನು ಜಾರಿಗೊಳಿಸಿದೆ. ಇದೀಗ ಅಸ್ಸಾಂನಲ್ಲಿ ಹೊಸ ರೂಲ್ಸ್ ಜಾರಿಯಾಗಿದೆ. ಲಸಿಕೆ ಹಾಕದವರಿಗೆ ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಇರುವುದಿಲ್ಲ ಎಂಬ ಆದೇಶವನ್ನು ಜಾರಿಗೊಳಿಸಲಾಗಿದೆ.
ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಸಿನೆಮಾ ಹಾಲ್‌ಗಳು ಮತ್ತು ಮಾಲ್‌ಗಳಿಗೆ ಎರಡೂ ಡೋಸ್ ಲಸಿಕೆ ತೆಗೆದುಕೊಳ್ಳದವರ ಪ್ರವೇಶಕ್ಕೆ ಅವಕಾಶವಿಲ್ಲ. ಒಂದು ವೇಳೆ ಪ್ರವೇಶಿಸಿದರೆ ರೂ 25,000 ದಂಡ ವಿಧಿಸಲಾಗುತ್ತದೆ ಎಂದು ಸರ್ಕಾರ ಎಚ್ಚರಿಕೆಯನ್ನು ನೀಡಿದೆ.
ಅಸ್ಸಾಂನ ಹೊಸ ನಿಯಮದ ಪ್ರಕಾರ ಸರ್ಕಾರಿ ಕಚೇರಿಗಳಲ್ಲಿ ಉದ್ಯೋಗ ಮಾಡುವವರು 15 ರ ನಂತರ ಲಸಿಕೆಯನ್ನು ಪಡೆಯದವರಿಗೆ ಅವಕಾಶವಿರುವುದಿಲ್ಲ. ಮಾತ್ರವಲ್ಲ ಅವರಿಗೆ ವೇತನವನ್ನು ನೀಡಲಾಗುವುದಿಲ್ಲ. ರಾತ್ರಿ ಕರ್ಫ್ಯೂವನ್ನು ಒಂದು ಗಂಟೆ ವಿಸ್ತರಿಸಲಾಗಿದ್ದು, ರಾತ್ರಿ 11 ಗಂಟೆ ಬದಲು, ಈಗ ರಾತ್ರಿ 10 ಗಂಟೆಗೆ ನೈಟ್ ಕರ್ಫ್ಯೂ ಶುರುವಾದರೆ ಮತ್ತು ಬೆಳಿಗ್ಗೆ 6 ಗಂಟೆಗೆ ಕೊನೆಗೊಳ್ಳುತ್ತದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel