ಕೂದಲಿನ ಸಹಾಯದಿಂದ ಬಸ್ ಎಳೆದು ಗಿನ್ನಿಸ್ ದಾಖಲೆ ಮಾಡಿದ ಮಹಿಳೆ…!

January 7, 2022
10:01 PM

ತನ್ನ ಕೂದಲಿನ ಸಹಾಯದಿಂದ 12 ಸಾವಿರ ಕೆ.ಜಿ ತೂಕವಿರುವ ಬಸ್ ಅನ್ನು ಎಳೆಯುವ ಮೂಲಕ ಗಿನ್ನಿಸ್ ದಾಖಲೆಯನ್ನು ಮಾಡಿದ್ದಾರೆ  ಪಂಜಾಬ್‌ ಮೂಲದ ಮಹಿಳೆ. ಇವರ ಹೆಸರು ಆಶಾರಾಣಿ.

ಆಶಾರಾಣಿ ಅವರು ಮಾಡಿರುವ ಸಾಧನೆಗಳ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ. 2014ರಲ್ಲಿ ಇವರು ಕಣ್ಣಿನ ರೆಪ್ಪೆಯ ಸಹಾಯದಿಂದ 15.15 ಕೆಜಿ ತೂಕ ಎತ್ತಿ ದಾಖಲೆಯನ್ನು ಮಾಡಿದ್ದಾರೆ. ಮಾತ್ರವಲ್ಲ ತಮ್ಮ ಹಲ್ಲಿನ ಮೂಲಕ ವಾಹನವನ್ನು ಕೇವಲ 22.16 ಸೆಕೆಂಡ್‌ಗಳಲ್ಲಿ 25 ಮೀಟರ್ ಎಳೆದು ಜನರನ್ನು ಆಶ್ಚರ್ಯಕೊಳ್ಳುವಂತೆ ಮಾಡಿದ್ದಾರೆ.

2019 ರಲ್ಲಿ ಕಿವಿಗಳ ಮೂಲಕ 1700 ಕೆ.ಜಿ ತೂಕದ ವ್ಯಾನ್ ಎಳೆದು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಇವರು ಮಾಡಿರುವ ಸಾಧನೆಗಳನ್ನು ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಹಂಚಿಕೊಂಡಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹಿಮಾಲಯದಲ್ಲಿ ಮತ್ತೊಂದು ಅಪಾಯದ ಎಚ್ಚರಿಕೆ..!
September 6, 2026
11:11 AM
by: ದ ರೂರಲ್ ಮಿರರ್.ಕಾಂ
ಎಲ್ ನಿನೊ ಮತ್ತಷ್ಟು ಬಲಗೊಳ್ಳುವ ಮುನ್ಸೂಚನೆ..!
September 6, 2026
10:01 AM
by: ದ ರೂರಲ್ ಮಿರರ್.ಕಾಂ
ಈಶಾನ್ಯದಿಂದ ಜಾರ್ಖಂಡ್‌ವರೆಗೆ ರಬ್ಬರ್‌ ಕೃಷಿಯ ವಿಸ್ತರಣೆ | ಹೊಸ ಪ್ರದೇಶಗಳಲ್ಲಿ ರಬ್ಬರ್‌ ಕೃಷಿ ವಿಸ್ತರಣೆ – ಅಪಾಯವೇ..? ಅವಕಾಶವೇ..?
September 5, 2026
10:11 PM
by: ದ ರೂರಲ್ ಮಿರರ್.ಕಾಂ
ದಾವಣಗೆರೆಯಲ್ಲಿ ಮಳೆ ಕೊರತೆ – ಮೆಕ್ಕೆಜೋಳ, ರಾಗಿ ಬೆಳೆ ಶೇ.50 ಹಾನಿ ಭೀತಿ
September 5, 2026
7:20 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror